ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾದಿದ್ದ' ಬೆಂಗಳೂರು ಮಣ್ಣಿಗೆ ಮಳೆಯ ಮೊದಲ ಮುತ್ತು

|
Google Oneindia Kannada News

ಬೆಂಗಳೂರು, ಏಪ್ರಿಲ್ 02: ಬಿಸಿಲ ತಾಪಕ್ಕೆ ಕಾದು ಹನಿಗಾಗಿ ಕಾದಿದ್ದ ಬೆಂಗಳೂರು ನೆಲಕ್ಕೆ ಮಳೆ ಇಂದು ತಂಪಾದ ಮುತ್ತು ನೀಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಳೆ ಇಂದು ನಗರದ ಹಲವು ಭಾಗಗಳಿಗೆ ತಂಪೆರದಿದೆ. ಬಿಸಿಲಿಗೆ ಬಸವಳಿದಿದ್ದ ಬೆಂಗಳೂರಿನ ವಾತಾವರಣಕ್ಕೆ ಮಳೆಯು ಅಕ್ಷರಕ್ಕೆ ನಿಲುಕದ ಆಹ್ಲಾದ ತುಂಬಿದೆ. ಬೇಸಿಗೆಯ ನಡುವಲ್ಲಿ ಬರುವ ಈ ರೇವತಿ ಮಳೆಯ ಗುಣವೇ ಅಂತಹದ್ದು. ಇದು ಜೀವಕ್ಕೆ ತಣ್ಣನೆಯ ಭಾವ ನೀಡುತ್ತದೆ.

ಬಿಸಿಲ ಜಿಲ್ಲೆ ಬಾಗಲಕೋಟೆಗೆ ತಂಪೆರದ ಮಳೆ, ಕೆಲವೆಡೆ ಅಲ್ಪ ಹಾನಿ ಬಿಸಿಲ ಜಿಲ್ಲೆ ಬಾಗಲಕೋಟೆಗೆ ತಂಪೆರದ ಮಳೆ, ಕೆಲವೆಡೆ ಅಲ್ಪ ಹಾನಿ

ಸೂರ್ಯನ ಝಳಕ್ಕೆ ತಲೆಬಾಗಿಸಿ, ಬಿಸಿಲ ಝಳಕ್ಕೆ ಕಣ್ಣು ಕಿರಿದಾಗಿಸಿ, ಹಣೆ ಗಂಟಿಕ್ಕಿಕೊಂಡು ಓಡಾಡುತ್ತಿದ್ದ ಬೆಂಗಳೂರು ಜನಕ್ಕೆ, ಇಂದಿನ ಮಳೆಯು, ಮಳೆಯ ಹನಿಗಳು ಹಣೆಗೆ ಮುತ್ತಿಕ್ಕಲೆಂಬ ಆಸೆ ಮೂಡಿಸಿದೆ, ಆಕಾಶಕ್ಕೆ ಮುಖ ಚಾಚುವಂತೆ ಮಾಡಿದೆ.

Mid summer Rain in Bengalurus some parts

ವಿರಾಜಪೇಟೆ, ಬಂಡೀಪುರದಲ್ಲಿ ಮಳೆ, ರೈತರಲ್ಲಿ ಸಂತಸವಿರಾಜಪೇಟೆ, ಬಂಡೀಪುರದಲ್ಲಿ ಮಳೆ, ರೈತರಲ್ಲಿ ಸಂತಸ

ವಾರದಿಂದಲೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ತಂಪೆರೆರದಿದೆ, ವಾಡಿಕೆಯಂತೆ ಮಾರ್ಚ್‌ ಕೊನೆಯ ವಾರದಲ್ಲಿ ರೇವತಿ ಮಳೆ ಪ್ರಾರಂಭವಾಗುತ್ತದೆ. ಅದರಂತೆಯೇ ಸಮಯಕ್ಕೆ ಸರಿಯಾಗಿಯೇ ಮಳೆ ಬಂದಿದೆ, ಆದರೆ ಬೆಂಗಳೂರಿಗೆ ಬರಲು ಸ್ವಲ್ಪ ತಡವೇ ಮಾಡಿದೆ.

English summary
Rain in some part of Bengaluru. Bengaurians were expecting for rain this week, This rain may continue for a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X