ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ನನ್ನ ಅಂತಿಮ ನಿರ್ಧಾರ ಪ್ರಕಟಿಸುವೆ: ಅಂಬರೀಶ್

By Mahesh
|
Google Oneindia Kannada News

ಬೆಂಗಳೂರು, ಜುಲೈ 03: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಂಡಾಯ ಬಾವುಟ ಹಾರಿಸಿದವರಿಗೆ ಸಹಮತ ವ್ಯಕ್ತಪಡಿಸಿದ್ದ ಮಾಜಿ ವಸತಿ ಸಚಿವ ಅಂಬರೀಶ್ ಅವರು ಈಗ ತಮ್ಮ ವರಸೆ ಬದಲಾಯಿಸಿದ್ದಾರೆ. ಅದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಷಯದಲ್ಲಿ ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ. ಈ ನಡುವೆ ಎಲ್ಲಾ ಗೊಂದಲಕ್ಕೆ ತೆರೆ ಎಳೆಯಲು ಅಂತಿಮ ನಿರ್ಧಾರವನ್ನು ಮಂಡ್ಯದಲ್ಲಿ ಘೋಷಿಸುವುದಾಗಿ ಬೆಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನದ ವೇಳೆಗೆ ಹೇಳಿದ್ದಾರೆ.

'ಸಚಿವ ಸ್ಥಾನ ಹೋಗಿದ್ದಕ್ಕೆ ಬೇಸರವಾಗಿದ್ದು ನಿಜ. ಆದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆತುರದ ನಿರ್ಧಾರ ಕೈಗೊಂಡೆ ಅನ್ನ್ನಿಸುತ್ತಿದೆ. ಏಕಾಏಕಿ ರಿಸೈನ್ ಮಾಡುವಷ್ಟು ದೊಡ್ಡ ನಾಯಕ ನಾನಲ್ಲ. ಮಂಡ್ಯ ಜನರ ಜತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ. ಜನ ಏನು ಹೇಳುತ್ತಾರೋ ಹಾಗೆ ಕೇಳುತ್ತೇನೆ. ನನ್ನ ನಿರ್ಧಾರವನ್ನು ಮಂಡ್ಯದಲ್ಲಿ ಪ್ರಕಟಿಸುತ್ತೇನೆ. ಸದ್ಯಕ್ಕಂತೂ ರಾಜೀನಾಮೆ ಹಿಂಪಡೆಯುವ ಮಾತೇ ಇಲ್ಲ, ನಾಳೆಯೇ ವಿಧಾನಸಭೆಗೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ' ಎಂದು ಅಂಬರೀಶ್ ಹೇಳಿದರು.[ರಮ್ಯಾ ಎಂಎಲ್ಸಿ ಆಗುತ್ತಿಲ್ಲ, ಮತ್ತೆ ಹಂಗಾದ್ರೆ ಯಾರಿಗೆ ಚಾನ್ಸ್?]

MH Ambareesh to announce his decision on resignation soon in Mandya

ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ಕಡೆಯಿಂದ ಬಂದಿದ್ದ ಪ್ರಧಾನ ಕಾರ್ಯದರ್ಶಿಗಳಾದ ಚೆಲ್ಲಕುಮಾರ್, ಬಿಕೆ ಹರಿಪ್ರಸಾದ್, ಹಿರಿಯ ನಾಯಕರಾದ ಜಾಫರ್ ಷರೀಫ್ ಅವರು ಸಂಧಾನ ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿಕೆ ಶಿವಕುಮಾರ್ ಅವರು ಅಂಬರೀಶ್ ಮನೆಗೆ ಭೇಟಿ ಕೊಟ್ಟು ಬಂದಿದ್ದರು.

ಆದರೆ, ಅಂಬರೀಶ್ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ಹೀಗಿರುವಾಗ ಅಂಬರೀಶ್ ಅವರು ತಮ್ಮ ನಿಲುವು ಬದಲಾಯಿಸಲು ಹೇಗೆ ಸಾಧ್ಯ? ಬದಲಾಯಿಸಲು ಬಲವಾದ ಕಾರಣ ಏನು? ಮತ್ತೆ ಸಂಪುಟಕ್ಕೆ ಸೇರ್ಪಡೆ ಸಾಧ್ಯತೆ ಇದೆಯೇ? ಎಂಬ ಪ್ರಶ್ನೆಗಳು ಹಾಗೆ ಉಳಿದಿವೆ. ಉತ್ತರ ಮಂಡ್ಯದಲ್ಲಿ ಸಿಗಬಹುದು, ಕಾದುನೋಡೋಣ...

English summary
Former housing minister MH Ambareesh on Sunday said he will announce his decision on resigning to MLA post soon. Ambareesh scheduled to visit to his constituency in Mandya. AICC general secretary BK Hariprasad today met him at his residence in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X