ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರದ್ದು ಆದೇಶ ವಾಪಸ್: ಡಿ.22-23ಕ್ಕೆ ಎಂದಿನಂತೆ ಸಂಚರಿಸಲಿದೆ ಮೆಟ್ರೋ

|
Google Oneindia Kannada News

ಬೆಂಗಳೂರು, ಡಿಸೆಂಬರ್ 21: ಟ್ರಿನಿಟಿ ವೃತ್ತದ ಬಳಿ ಬಿರುಕು ಬಿಟ್ಟಿರುವ ಫಿಲ್ಲರ್ ರಿಪೇರಿಗೆಂದು ಆ ರೂಟ್‌ನಲ್ಲಿ ರದ್ದಾಗುತ್ತದೆ ಎನ್ನಲಾಗಿದ್ದ ಮೆಟ್ರೋ ಸಂಚಾರ ಯಾವುದೇ ಅಡೆ-ತಡೆ ಇಲ್ಲದೆ ಸಂಚರಿಸಲಿದೆ.

ಮೆಟ್ರೋ ಪರಿಶೀಲನೆಗಾಗಿ ದೆಹಲಿಯಿಂದ ಅಧಿಕಾರಿಗಳು ಬಂದಿದ್ದಾರೆ:ಡಿಸಿಎಂ ಮೆಟ್ರೋ ಪರಿಶೀಲನೆಗಾಗಿ ದೆಹಲಿಯಿಂದ ಅಧಿಕಾರಿಗಳು ಬಂದಿದ್ದಾರೆ:ಡಿಸಿಎಂ

ಟ್ರಿನಿಟಿ ವೃತ್ತದ ಫಿಲ್ಲರ್‌ ರಿಪೇರಿ ಕಾರ್ಯವನ್ನು ಡಿಸೆಂಬರ್ 22 ಮತ್ತು ಡಿಸೆಂಬರ್ 23 ರಂದು ಮಾಡಲಾಗುತ್ತದೆ ಹಾಗಾಗಿ ಆ ಎರಡು ದಿನ ಆ ರೂಟ್‌ನಲ್ಲಿ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಹೇಳಿತ್ತು. ಆದರೆ ಅದನ್ನು ತೆಗೆದುಹಾಕಲಾಗಿದೆ.

ತುಮಕೂರು ವರೆಗೂ ಮೆಟ್ರೋ ವಿಸ್ತರಣೆಗೆ ಚಿಂತನೆ: ಪರಮೇಶ್ವರ್ತುಮಕೂರು ವರೆಗೂ ಮೆಟ್ರೋ ವಿಸ್ತರಣೆಗೆ ಚಿಂತನೆ: ಪರಮೇಶ್ವರ್

ಡಿಸೆಂಬರ್ 22 ಮತ್ತು ಡಿಸೆಂಬರ್ 23 ರಂದು ಯಾವುದೇ ಅಡೆ-ತಡೆ ಇಲ್ಲದೆ ಮೆಟ್ರೋ ರೈಲು, ಟ್ರಿನಿಟಿ ಮತ್ತು ಆ ಹಾದಿಯಲ್ಲಿ ಸಂಚಾರ ನಡೆಸುತ್ತದೆ ಎಂದು ಬಿಎಂಆರ್‌ಸಿಎಲ್‌ ಖಚಿತಪಡಿಸಿದೆ.

Metro will run as usual on December 22 and 23

ಕ್ರಿಸ್‌ಮಸ್‌ ಸಮಯ ಆಗಿರುವ ಕಾರಣ ಜನಸಂದಣಿ ಹೆಚ್ಚಿರುತ್ತದೆ. ಈ ಸಮಯದಲ್ಲಿ ಮೆಟ್ರೋ ಸ್ಥಗಿತಗೊಳಿಸಿದರೆ ಜನರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಮೆಟ್ರೋ ಸಂಚಾರ ಮಾಮೂಲಿನಂತೆ ಮುಂದುವರೆಸಲಾಗುತ್ತಿದೆ.

ದೆಹಲಿಯಲ್ಲಿ ಹದಗೆಟ್ಟ ಹವಾಗುಣ: ಖಾಸಗಿ ವಾಹನಗಳಿಗೆ ನಿರ್ಬಂಧ ಸಾಧ್ಯತೆದೆಹಲಿಯಲ್ಲಿ ಹದಗೆಟ್ಟ ಹವಾಗುಣ: ಖಾಸಗಿ ವಾಹನಗಳಿಗೆ ನಿರ್ಬಂಧ ಸಾಧ್ಯತೆ

ಟ್ರಿನಿಟಿ ವೃತ್ತದ ಮೆಟ್ರೋ ಪಿಲ್ಲರ್ ಸಂಖ್ಯೆ 155 ರಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಅದನ್ನು ನಾಳೆ ಮತ್ತು ನಾಡಿದ್ದು ರಿಪೇರಿ ಮಾಡಲಾಗುತ್ತದೆ. ಮೆಟ್ರೋ ಸಂಚಾರದ ನಡುವೆಯೇ ಬಿರುಕು ಬಿಟ್ಟಿರುವ ಕಂಬದ ರಿಪೇರಿ ಕಾರ್ಯ ನಡೆಯಲಿದೆ.

ಟ್ರಿನಿಟಿ ವೃತ್ತದ ಬಳಿ ರಿಪೇರಿ ಕಾರ್ಯ ನಡೆಯುವ ಕಾರಣ ಈ ಭಾಗದಲ್ಲಿ ಮೆಟ್ರೋ ನಿಧಾನಗತಿಯಲ್ಲಿ ಸಂಚರಿಸಲಿದೆ.

English summary
BMRCL earlier told that Metro transport will not there on Trinity root on December 22 and 23. But It takes the order back and says Metro will run in all roots as usual.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X