ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು

|
Google Oneindia Kannada News

ಬೆಂಗಳೂರು, ಏ.15: ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಎರಡನೇ ಹಂತದಲ್ಲಿ ಬರುವ ಸುರಂಗ ಮಾರ್ಗವನ್ನು ಚಿಕ್ಕ ಗಾತ್ರದಲ್ಲಿ ನಿರ್ಮಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಎರಡನೇ ಹಂತದಲ್ಲಿ ಒಟ್ಟು 12ಸುರಂಗ ಮಾರ್ಗ ನಿಲ್ದಾಣಗಳು ಬರಲಿದೆ. ಮೊದಲ ಹಂತದ ಮೆಟ್ರೋಗಿಂತ ಚಿಕ್ಕದಾಗಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್ ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್

ಜಾಗದ ಅಭಾವದಿಂದಾಗಿ ಚಿಕ್ಕ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಎರಡನೇ ಹಂತದ ನಾಗವಾರ-ಗೊಟ್ಟಿಗೆರೆ ಮಾರ್ಗದಲ್ಲಿ 72.1 ಕಿ.ಮೀ ಸುರಂಗ ನಿಲ್ದಾಣಗಳು ಬರಲಿವೆ.

Metro phase 2 underground station will be smaller

ಬ್ಯಾಂಬೂ ಬಜಾರ್, ಪಾಟರಿ ರಸ್ತೆ, ಶಿವಾಜಿನಗರ, ಎಂಜಿ ರಸ್ತೆ, ವೆಲ್ಲಾರ ಜಂಕ್ಷನ್, ಮೈಕೋ ಲೇಔಟ್, ಲಾಂಗ್‌ಫರ್ಡ್ ಜಂಕ್ಷನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜು, ನಾಗವಾರ ನಿಲ್ದಾಣಗಳು ಸುರಂಗ ನಿಲ್ದಾಣಗಳಾಗಿವೆ.

ಸುರಂಗ ಮಾರ್ಗದ ಉದ್ದವನ್ನು 210 ಮೀಟರ್ ಕಡಿಮೆ ಮಾಡಲಾಗಿದೆ. ಮೊದಲೇ ಹಂತದ ಕಬ್ಬನ್ ಪಾರ್ಕ್, ವಿಧಾನಸೌಧ, ಸರ್‌ ಎಂವ ವಿಶ್ವೇಶ್ವರಯ್ಯ ನಿಲ್ದಾಣ, ಕೆಂಪೇಗೌಡ ನಿಲ್ದಾಣದಲ್ಲಿ 272 ಮೀ ಉದ್ದ, 24 ಮೀ ಅಗಲವಿದೆ.

English summary
The 12 underground stations of Metro Phase 2 are set to be smaller in dimension than those of Phase 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X