ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ 2ನೇ ಹಂತ: ಆರಂಭದಿಂದಲೇ ಆರು ಬೋಗಿ

|
Google Oneindia Kannada News

ಬೆಂಗಳೂರು, ಏ.11: ನಮ್ಮ ಮೆಟ್ರೋ 2ನೇ ಹಂತದ ಯೋಜನೆಯಲ್ಲಿ ಆರಂಭದಿಂದಲೇ ಆರು ಬೋಗಿಯನ್ನು ಅಳವಡಿಸಲು ಬಿಎಂಆರ್‌ಸಿಎಲ್ ಮುಂದಾಗಿದ್ದು ಈಗಾಗಲೇ ಟೆಂಡರ್ ಕರೆದಿದೆ.

ಎಲ್ಲಾ ಮೆಟ್ರೋ ರೈಲುಗಳನ್ನು ಆರು ಬೋಗಿಗಳಾಗಿ ಪರಿವರ್ತನೆ ಮಾಡಿ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈಗಾಗಲೇ ಎರಡನೇ ಹಂತದ ಮೆಟ್ರೋಗೆ ಆರು ಬೋಗಿಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ. ಆದರೆ ಮೊದಲ ಹಂತದಲ್ಲಿಯೇ ಎರಡೂ ಮಾರ್ಗಗಳು ಸಂಪೂರ್ಣವಾಗಿ ಆರು ಬೋಗಿಗಳಾಗಿ ಪರಿತರ್ವನೆಯಾಗಿಲ್ಲ.

ಇದುವರೆಗೆ ಒಟ್ಟು 10 ಆರು ಬೋಗಿಗಳ ಮೆಟ್ರೋ ಸಂಚಾರ ಆರಂಭಗೊಂಡಿದೆ. ನೇರಳೆ ಮಾರ್ಗದಲ್ಲಿ 9 ಹಾಗೂ ಹಸಿರು ಮಾರ್ಗದಲ್ಲಿ ಕೇವಲ ಒಂದು ಆರು ಬೋಗಿಯ ಮೆಟ್ರೋ ಸಂಚರಿಸುತ್ತಿದೆ.

Metro passengers miffed over delay in switching to 6-car trains

ಮಾರ್ಚ್ ಅಂತ್ಯದೊಳಗೆ ಒಟ್ಟು 25 ರೈಲುಗಳನ್ನು ಆರು ಬೋಗಿಯ ರೈಲುಗಳನ್ನಾಗಿ ಪರಿವರ್ತಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ಭರವಸೆ ನೀಡಿತ್ತು. ಆಗಸ್ಟ್ ಒಳಗೆ 50 ರೈಲುಗಳನ್ನು ಪರಿವರ್ತಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಆರು ಬೋಗಿಗಳ ರೈಲಿನಲ್ಲಿ 2002 ಮಂದಿ ಪ್ರಯಾಣಿಸಬಹುದು ಆದರೆ ಮೂರು ಬೋಗಿಯ ರೈಲಿನಲ್ಲಿ ಕೇವಲ 975 ಮಂದಿ ಮಾತ್ರ ಪ್ರಯಾಣಿಸಬಹುದಾಗಿದೆ. ಆದರೆ ಎರಡನೇ ಹಂತದ ಮೆಟ್ರೋ ಯೋಜನೆಯಲ್ಲಿ ಆರಂಭದಿಂದಲೇ ಆರು ಬೋಗಿಯ ಮೆಟ್ರೋ ಸಂಚರಿಸಲಿದೆ.

English summary
While the Bangalore Metro Rail Corporation Ltd (BMRCL) recently invited tenders for six-car trains for Phase 2 of Namma Metro, many commuters are irked over the delay in conversion of existing three-car trains under Phase 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X