ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋದಲ್ಲಿ ಇನ್ನುಮುಂದೆ ಘೋಷಣೆ ಜತೆಗೆ ಕನ್ನಡ ಕವನವನ್ನೂ ಆಲಿಸಿ

By Nayana
|
Google Oneindia Kannada News

ಬೆಂಗಳೂರು, ಮೇ 19: ಮೆಟ್ರೋ ರೈಲಿನಲ್ಲಿ ಇನ್ನುಮುಂದೆ ನಿಲ್ದಾಣದ ಘೋಷಣೆಯ ಜತೆಗೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಕವನಗಳೂ ಕೇಳಿಸಲಿವೆ.

ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿರುವವರು ಮುಂದಿನ ನಿಲ್ದಾಣದ ಬಗ್ಗೆ, ಮೆಜೆಸ್ಟಿಕ್ ಟರ್ಮಿನಲ್ ನಿಲ್ದಾಣದಲ್ಲಿ ರೈಲು ಬದಲಿಸುವ ಬಗ್ಗೆ ಹಾಗೂ ಬಾಗಿಲಿಗೆ ಅತಿ ಸಮೀಪದಲ್ಲಿ ನಿಲ್ಲದಂತೆ ಸೂಚನೆಗಳನ್ನು ನಿರಂತರ ನೀಡಲಾಗುತ್ತದೆ. ಅದರ ಜತೆಗೆ ಪ್ರಯಾಣಿಕರಲ್ಲಿ ಸಾಹಿತ್ಯದ ಅಭಿರುಚಿ ಹುಟ್ಟಿಸಲು ಹಾಗೂ ಸಾಹಿತ್ಯಯಾಸಕ್ತ ಪ್ರಯಾಣಿಕರನ್ನು ಉತ್ತೇಜಿಸಲು ಕವನಗಳ ವಾಚನವನ್ನು ಪ್ರಸಾರ ಮಾಡಲು ತೀರ್ಮಾನಿಸಲಾಗಿದೆ.

ಜೂನ್‌ 4ರಿಂದ ಮೆಟ್ರೋ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಜೂನ್‌ 4ರಿಂದ ಮೆಟ್ರೋ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಮಾಹಿತಿ ಘೋಷಣೆಗಳು ಇಳಿಕೆ: ವಿಧಾನಸೌಧ, ಕಬ್ಬನ್‌ ಪಾರ್ಕ್ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಹನಿಗವಿತೆಗಳನ್ನು, ಸಣ್ಣ ಕಥೆಗಳನ್ನು ಗೋಡೆ ಮೆಟ್ಟಿಲುಗಳ ಮೇಲೆ ಬರೆಯಲಾಗಿದೆ. ಇದೇ ರೀತಿ ಕವನಗಳನ್ನು ಪ್ರಸಾರ ಮಾಡಲಾಗುತ್ತದೆ. ಸದ್ಯಕ್ಕೆ ಪ್ರಯಾಣಿಕರಿಗೆ ನೀಡುವ ಸೂಚನೆಗಳನ್ನು ನಿಮಿಷಕ್ಕೆ ಐದಾರು ಬಾರಿ ಪ್ರಸಾರ ಮಾಡಲಾಗುತ್ತಿದೆ. ಈ ಸಂಖ್ಯೆಯನ್ನು ಕಡಿಮೆ ಮಾಡಿ ಅದರ ಬದಲು ಕವನಗಳನ್ನು ಪ್ರಸಾರ ಮಾಡಲಾಗುತ್ತದೆ.

Metro commuters may enjoy songs and slogans with less announcements

ಸ್ಪೀಕರ್‌ಗಳ ಮೂಲಕ ಹಕ್ಕಿಗಳ ಚಿಲಿಪಿಲಿ ಕಲರವ ಹಾಗೂ ಸಂಗೀತ ಸಾಧನೆಗಳ ವಾದನವನ್ನು ಪ್ರಸಾರ ಮಾಡಲಾಗುತ್ತದೆ. ನಿಲ್ದಾಣಗಳಲ್ಲಿ ರೈಲಿಗಾಗಿ ಕಾಯುವವರಿಗೆ ಇದು ಆಹ್ಲಾದ ಉಂಟು ಮಾಡುತ್ತಿದೆ. ಇದೇ ರೀತಿ ರೈಲಿನಲ್ಲಿ ಕವನ ಪ್ರಸಾರ ಮಾಡಿ ಪ್ರಯಾಣಿಕರಿಗೆ ಸಾಹಿತ್ಯದ ಗೀಳು ಹುಟ್ಟಿಸುವ ಉದ್ದೇಶವಿದೆ.

English summary
Now onwards Namma Metro commuters can enjoy songs and slogans in metro trains and stations with less slogans. The BMRCL has decided to air some Kannada and English songs rather announcement only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X