ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಸ್ಮಾರ್ಟ್‌ಕಾರ್ಡ್‌ಗೆ ಡಿಮ್ಯಾಂಡೋ ಡಿಮ್ಯಾಂಡು, ಪ್ರಯಾಣಿಕರೂ ಹೆಚ್ಚಳ

|
Google Oneindia Kannada News

ಬೆಂಗಳೂರು, ಜೂನ್ 27: ಮೆಟ್ರೋ ಸ್ಮಾರ್ಟ್‌ ಕಾರ್ಡ್‌ಗೆ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ, ಇದೀಗ ಬೇಡಿಕೆಯಂತೆ 6 ಲಕ್ಷ ಮೆಟ್ರೋ ಕಾರ್ಡ್ ಖರೀದಿ ಪ್ರಕ್ರಿಯೆ ಆರಂಭವಾಗಿದೆ.

2019ರ ಆರಂಭದಿಂದ ಮೆಟ್ರೋದಲ್ಲಿ ಸ್ಮಾರ್ಟ್‌ ಕಾರ್ಡ್ ಬಳಕೆದಾರರ ಪ್ರಮಾಣ ಹೆಚ್ಚಾಗಿದೆ. ಈ ಹಿಂದೆ ಒಟ್ಟು ಪ್ರಯಾಣಿಕರಲ್ಲಿ ಕಾರ್ಡ್ ಬಳಸಿ ಪ್ರಯಾಣಿಸುವವರ ಸಂಖ್ಯೆ ಶೇ.50ರಷ್ಟಿತ್ತು ಇದೀಗ ಅದು ಶೇ.60ಕ್ಕೆ ಬಂದು ತಲುಪಿದೆ.

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ

ವಾಹನಗಳನ್ನು ಪಾರ್ಕಿಂಗ್‌ನಲ್ಲಿರಿಸಿ ಮೆಟ್ರೋ ಬಳಸುವವರ ಸಂಖ್ಯೂ ಹೆಚ್ಚಿದೆ. ಸ್ಮಾರ್ಟ್‌ಕಾರ್ಡ್‌ಗಳು ಬೇಗ ಖಾಲಿಯಾಗಿರುವುದರಿಂದ 6 ಲಕ್ಷ ಕಾರ್ಡ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

Metro commuters increase huge demand for smart card

ಕಾರ್ಡ್ ತಯಾರಿಗೆ 18 ರೂ ಖರ್ಚಾಗಲಿದೆ. 2013ರಲ್ಲಿ 15,586, 2014ರಲ್ಲಿ 41,149, 2015ರಲ್ಲಿ 46,670 ಸ್ಮಾರ್ಟ್‌ ಕಾರ್ಡ್ ಮಾರಾಟವಾಗಿತ್ತು. 2016ರಿಂದ ಸ್ಮಾರ್ಟ್‌ ಕಾರ್ಡ್ ಖರೀದಿ 2 ಲಕ್ಷಕ್ಕೂ ಹೆಚ್ಚಾಗಿದೆ.

ಆರು ಬೋಗಿಗಳ ರೈಲುಗಳ ಕಾರ್ಯಾಚರಣೆಯಿಂದಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ದಿನ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ.

2019ರ ಫೆಬ್ರವರಿಯಲ್ಲಿ 1.06 ಕೋಟಿ, ಮಾರ್ಚ್ ನಲ್ಲಿ 1.13 ಕೋಟಿ, ಏಪ್ರಿಲ್‌ನಲ್ಲಿ 1.10 ಕೋಟಿ , ಮೇನಲ್ಲಿ 1.18 ಕೋಟಿ ಮಂದಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ.

2016ರ ಬಳಿಕ 6-7 ತಿಂಗಳಿಗೊಮ್ಮೆ ಕಾರ್ಡ್ ಉತ್ಪಾದಿಸಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಡ್ ಖರೀದಿಸುತ್ತಿದ್ದಾರೆ. ಈ ವರ್ಷಕ್ಕೆ ಸರಾಸರಿ 5-6 ಲಕ್ಷ ಕಾರ್ಡ್ ಖರೀದಿಯಾಗುತ್ತಿದೆ.

English summary
Metro commuters increase huge demand for smart card, Since its inception in 2010, Bengaluru’s Namma Metro has been able to shell out 15 lakh smart-cards to commuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X