ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಟೋಬರ್ 21 ರಿಂದ ನಮ್ಮ ಮೆಟ್ರೋ ಕಾಮನ್ ಮೊಬಿಲಿಟಿ ಕಾರ್ಡ್ ಲಭ್ಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 09: ನಮ್ಮ ಮೆಟ್ರೋದಲ್ಲಿ ಬಹು ಬಳಕೆಯ ನ್ಯಾಷನಲ್ ಕಾಮಲ್ ಮೊಬಿಲಿಟಿ ಕಾರ್ಡ್ ಅಕ್ಟೋಬರ್ 21ರಿಂದ ಲಭ್ಯವಾಗಲಿದೆ.

'ಒನ್‌ ನೇಷನ್‌ ಒನ್‌ ಕಾರ್ಡ್‌' ಘೋಷಣೆಯಡಿ ಕೇಂದ್ರ ಸರಕಾರ ಜಾರಿ ಮಾಡಿದ ಈ ಯೋಜನೆ ನವದೆಹಲಿಯ ಮೆಟ್ರೋದಲ್ಲಿ ಅನುಷ್ಠಾನವಾಗಿದೆ. ಮೆಟ್ರೋ ಮಾತ್ರವಲ್ಲದೆ, ಬಿಎಂಟಿಸಿ ಸಾರಿಗೆಗೆ, ಬ್ಯಾಂಕ್‌ ವಹಿವಾಟಿಗೆ ಈ ಕಾರ್ಡ್‌ ಬಳಕೆಯಾಗುವಂತಿರುತ್ತದೆ.

ಈ ವರ್ಷ ನಮ್ಮ ಮೆಟ್ರೋ, ಬಿಎಂಟಿಸಿಗೆ ಒಂದು ದೇಶ ಒಂದು ಕಾರ್ಡ್ಈ ವರ್ಷ ನಮ್ಮ ಮೆಟ್ರೋ, ಬಿಎಂಟಿಸಿಗೆ ಒಂದು ದೇಶ ಒಂದು ಕಾರ್ಡ್

ಯೋಜನೆಯ ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಎರಡು ಹೊಸ ಎಎಫ್‌‍ಸಿ ಗೇಟ್‌ಗಳನ್ನು ಅಳವಡಿಸಲಾಗಿತ್ತು. ಈಗ ಬಳಕೆಯಲ್ಲಿರುವ ಸ್ಮಾರ್ಟ್‌ಕಾರ್ಡ್‌ ಹಾಗೂ ಎನ್‌‍ಸಿಎಂಸಿ ಕಾರ್ಡ್‌ ಎರಡನ್ನೂ ಸ್ವೀಕರಿಸುವಂತಹ ತಂತ್ರಜ್ಞಾನ ಈ ಗೇಟ್‌ಗಳಲ್ಲಿದೆ. ಅಕ್ಟೋಬರ್ 25 ಸಾವಿರ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.

Bangalore Metro All Set To Launch National Common Mobility Card On October 21

ಈಗ ಬಳಕೆಯಲ್ಲಿರುವ 40 ನಿಲ್ದಾಣಗಳಲ್ಲಿರುವ ಎಎಫ್‌‍ಸಿ ಗೇಟ್‌ಗಳು ಹಳೆಯ ತಂತ್ರಜ್ಞಾನ ಹೊಂದಿವೆ. ಇವುಗಳನ್ನು ಹಂತ-ಹಂತವಾಗಿ ತೆಗೆದು ಎನ್‌‍ಸಿಎಂಸಿ ಕಾರ್ಡ್‌ ಸ್ವೀಕಾರ ಮಾಡುವ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಬ್ಯಾಂಕ್‌ಗಳು ಕಾರ್ಡ್‌ ಪೂರೈಸಿದ ಬಳಿಕ ಕೆಲ ದಿನಗಳವರೆಗೆ ಪ್ರಾಯೋಗಿಕವಾಗಿ ಬಳಸಲಾಗುತ್ತದೆ.

ಎನ್‌ಸಿಎಂಸಿ ಕಾರ್ಡ್‌ ಬಳಕೆಗೆ ಅನುಕೂಲವಾಗುವಂತೆ ಏಕೀಕೃತ ದರ ಸಂಗ್ರಹ ದ್ವಾರಗಳನ್ನು ಅಳವಡಿಸಲಾಗಿದೆ. ಈ ಮೂಲಕ ಮುಂದಿನ ಎರಡು ತಿಂಗಳಲ್ಲಿ ನಮ್ಮ ಮೆಟ್ರೋದಲ್ಲಿ ಎನ್‌ಸಿಎಂಸಿ ಕಾರ್ಡ್‌ ಬಳಕೆ ಆರಂಭಿಸುವ ಮುನ್ಸೂಚನೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌) ನೀಡಿದೆ.

ಎನ್‌ಸಿಎಂಸಿ ಕಾರ್ಡ್‌ ಒಮ್ಮೆ ಬಳಕೆಗೆ ಬಂದರೆ ಪ್ರಯಾಣಿಕರು ದೆಹಲಿ, ಚೆನ್ನೈ ಸೇರಿದಂತೆ ದೇಶದ ಯಾವುದೇ ಮೆಟ್ರೋದಲ್ಲಿ ಈ ಕಾರ್ಡ್‌ ಬಳಸಬಹುದಾಗಿದೆ. ಒಂದು ವೇಳೆ ಬಿಎಂಟಿಸಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ, ಬಿಎಂಟಿಸಿ ಪ್ರಯಾಣಿಕರು ಕೂಡ ಎನ್‌ಸಿಎಂಸಿ ಕಾರ್ಡ್‌ ಮೂಲಕ ಪ್ರಯಾಣಿಸಬಹುದಾಗಿದೆ.

ಸ್ವಯಂ ಚಾಲಿತ ಶುಲ್ಕ ಸಂಗ್ರಹ(ಎಎಫ್‌ಸಿ) ಗೇಟ್‌ ಸಮೀಪದಲ್ಲೇ 'ಸ್ವಾಗತ್‌ ಗೇಟ್‌'ಗಳನ್ನು ಅಳವಡಿಸಲಾಗಿದೆ. ತಾಂತ್ರಿಕ ಜೋಡಣೆ ಕಾರ್ಯ ಬಾಕಿ ಇದ್ದು, ಏಪ್ರಿಲ್‌ ಮೊದಲ ವಾರದೊಳಗೆ ಪ್ರಾಯೋಗಿಕ ಸೇವೆ ಆರಂಭಿಸಲು ಯೋಜಿಸಲಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತವಾಗಲಿದೆ. ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ಇರುವುದಿಲ್ಲ. ಬೆಂಗಳೂರು ಮೆಟ್ರೋ ರೈಲು ನಿಗಮ ಇಂದು ಈ ಕುರಿತು ಪ್ರಕಟಣೆ ಹೊರಡಿಸಿದೆ.

ಅಕ್ಟೋಬರ್ 9ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 10ರ ಬೆಳಗ್ಗೆ 6 ಗಂಟೆ ತನಕ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ರದ್ದುಗೊಳ್ಳಲಿದೆ ಎಂದು ಮಾಹಿತಿ ನೀಡಿದೆ.

ಅಕ್ಟೋಬರ್ 9ರಂದು ನೇರಳೆ ಮಾರ್ಗದ ಟ್ರಿನಿಟಿ ಮತ್ತು ಹಲಸೂರು ಮೆಟ್ರೋ ನಿಲ್ದಾಣಗಳ ನಡುವೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ನಡೆಸುವುದಿಲ್ಲ.

ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಅಕ್ಟೋಬರ್ 10ರ ಭಾನುವಾರ ಬೆಳಗ್ಗೆ 6 ಗಂಟೆ ಬಳಿಕ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಎಂ.ಜಿ.ರಸ್ತೆ-ಕೆಂಗೇರಿ ತನಕ ಎಂದಿನಂತೆ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ.

English summary
To mark 10 yrs of completion of Metro operations, Bengaluru Metro is all set to launch the National Common Mobility Card on Oct 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X