ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

#MeToo ಆರೋಪ: ಬೆಂಗಳೂರಿನ ಐಐಎಸ್‌ಸಿ ಪ್ರೊಫೆಸರ್‌ಗೆ ಕಡ್ಡಾಯ ನಿವೃತ್ತಿ ಶಿಕ್ಷೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ತನ್ನ ಹಿರಿಯ ಪ್ರೊಫೆಸರ್‌ ಒಬ್ಬರಿಗೆ ಕಡ್ಡಾಯ ನಿವೃತ್ತಿ ಪಡೆದುಕೊಳ್ಳುವಂತೆ ಆದೇಶಿಸಿದೆ.

ಸುದೀರ್ಘ ಕಾಲದಿಂದ ಐಐಎಸ್‌ಸಿ ಫ್ಯಾಕಲ್ಟಿ ಆಗಿರುವ ಪ್ರೊಫೆಸರ್ ಗಿರಿಧರ್ ಮದ್ರಾಸ್ ಜಗತ್ತಿನಲ್ಲಿ ಅತಿ ಹೆಚ್ಚು ವಿಜ್ಞಾನ ಸಂಬಂಧಿ ವಿಚಾರಗಳಲ್ಲಿ ಉಲ್ಲೇಖಕ್ಕೆ ಒಳಗಾಗುವ ಕೆಲವೇ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ.

ಎಫ್‌ಐಆರ್‌ ರದ್ದು ಕೋರಿ ಕೋರ್ಟ್‌ ಮೊರೆ ಹೋದ ಅರ್ಜುನ್ ಸರ್ಜಾಎಫ್‌ಐಆರ್‌ ರದ್ದು ಕೋರಿ ಕೋರ್ಟ್‌ ಮೊರೆ ಹೋದ ಅರ್ಜುನ್ ಸರ್ಜಾ

ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಅದರ ವಿಚಾರಣೆಗಾಗಿ ಐಐಎಸ್‌ಸಿ, ಸಮಿತಿಯೊಂದನ್ನು ರಚಿಸಿತ್ತು.

MeToo iisc professor Giridhar Madras ordered compulsory retirement on sexual harassment case

1988ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಬಿಇ ಪೂರೈಸಿದ ಗಿರಿಧರ್, 1989ರಲ್ಲಿ ಐಐಟಿ ಮದ್ರಾಸ್‌ನಿಂದ ಎಂಟೆಕ್ ಪದವಿ ಪಡೆದರು. 1993ರಲ್ಲಿ ಟೆಕ್ಸಾಸ್ ಎ&ಎಂ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದು ಬಳಿಕ ಐಐಎಸ್‌ಸಿ ಸೇರಿದ್ದರು.

ಗಿರಿಧರ್ ಅವರನ್ನು ವಿಚಾರಣೆಗೆ ಒಳಪಡಿಸಿದ ಸಮಿತಿಯು ಅವರನ್ನು ಕಡ್ಡಾಯ ನಿವೃತ್ತಿ ಪಡೆದುಕೊಳ್ಳುವಂತೆ ಆದೇಶಿಸಿದೆ ಎಂದು ಐಐಎಸ್‌ಸಿ ನಿರ್ದೇಶಕ ಪ್ರೊಫೆಸರ್ ಅನುರಾಗ್ ಕುಮಾರ್ ತಿಳಿಸಿದ್ದಾರೆ. ಆದರೆ, ಅವರು ಹೆಚ್ಚಿನ ವಿವರ ನೀಡಿಲ್ಲ.

ಒಟ್ಟಿಗೆ ಮಜಾ ಮಾಡೋಣ ಎಂದು ಕರೆದ ಸರ್ಜಾ: ಶ್ರುತಿ ಹರಿಹರನ್ ದೂರುಒಟ್ಟಿಗೆ ಮಜಾ ಮಾಡೋಣ ಎಂದು ಕರೆದ ಸರ್ಜಾ: ಶ್ರುತಿ ಹರಿಹರನ್ ದೂರು

ಗಿರಿಧರ್ ಅವರಿಗೆ ನಿವೃತ್ತಿ ನಂತರದ ಸೌಲಭ್ಯಗಳು ದೊರಕಲಿವೆಯೇ, ಭವಿಷ್ಯದಲ್ಲಿ ಬೇರೆ ರೀತಿಯಲ್ಲಿ ಸಂಸ್ಥೆಯೊಂದಿಗೆ ಅವರು ಸಂಪರ್ಕ ಹೊಂದಬಹುದೇ ಎಂಬುದು ತಿಳಿದಿಲ್ಲ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಆರೋಪದಲ್ಲಿ ಪ್ರೊಫೆಸರ್ ತಪ್ಪಿತಸ್ಥರೆಂಬುದು ಕಂಡುಬಂದಿತ್ತು.

ಲೈಂಗಿಕ ಕಿರುಕುಳ: 48 ಸಿಬ್ಬಂದಿಯನ್ನು ಕಿತ್ತೆಸೆದ ಗೂಗಲ್ಲೈಂಗಿಕ ಕಿರುಕುಳ: 48 ಸಿಬ್ಬಂದಿಯನ್ನು ಕಿತ್ತೆಸೆದ ಗೂಗಲ್

ಸಮಿತಿಯು ಇನ್ನೂ ಇತರೆ ಪ್ರಕರಣಗಳಲ್ಲಿ ತೀರ್ಪು ನೀಡಿದೆ. ಅವೆಲ್ಲವೂ ಹಳೆಯ ಪ್ರಕರಣಗಳು. ಇದು ಮಾತ್ರ ಇತ್ತೀಚಿನ ಪ್ರಕರಣ. ಹಳೆಯ ಪ್ರಕರಣಗಳ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ಸಂಸ್ಥೆಯು ಇಂತಹ ಪ್ರಕರಣಗಳನ್ನು ನಿಭಾಯಿಸಲು ಸೂಕ್ತ ಮತ್ತು ದಕ್ಷ ವ್ಯವಸ್ಥೆ ಹೊಂದಿದೆ. ಯಾರ ದೂರನ್ನೂ ನಿರ್ಲಕ್ಷಿಸುವುದಿಲ್ಲ ಎಂದು ಅನುರಾಗ್ ಕುಮಾರ್ ತಿಳಿಸಿದ್ದಾರೆ.

English summary
IISC Bengaluru Senior professor Giridhar Madras was ordered to take compulsory retirement after he found guilty in a sexual harassment case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X