ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಘಾಟಿ ಮೇಟಿ ಬಗ್ಗೆ ಯಾರು ಏನು ಹೇಳಿದರು ?

By Ananthanag
|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ರಾಸಲೀಲೆ ಸಿಡಿ ಬಿಡುಗಡೆ, ಎಚ್.ವೈ ಮೇಟಿ ರಾಜಿನಾಮೆ ನೀಡಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಸಿಡಿ ನೋಡಿಯೇ ಇಲ್ಲ. ಸಿಡಿ ಬಿಡುಗಡೆ ಮುಂಚೆಯೇ ಮೇಟಿ ರಾಜಿನಾಮೆ ನೀಡಿದ್ದರು ಎಂದಿದ್ದಾರೆ. ಅಲ್ಲದೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್, ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.[ಮೇಟಿ ಸಿಡಿ ಆಯ್ತು, ಇನ್ನೆರಡು ಸಿಡಿ ಯಾವ ಶಾಸಕರದ್ದು ?]

ರಾಸಲೀಲೆ ಆರೋಪ ಕುರಿತು ಮೇಟಿಯವರು ರಾಜಿನಾಮೆ ನೀಡಿದ್ದಾರೆ. ಈ ಸಂಬಂಧ ರಾಜಶೇಖರ್ ಅವರು ದೆಹಲಿಯಲ್ಲಿ ಸಿಡಿಯನ್ನು ಬಿಡುಗಡೆಗೊಳಿಸಿದ್ದು, ಪ್ರತ್ರಿಕಾಗೋಷ್ಠಿಯಲ್ಲಿ ತನ್ನಲ್ಲಿದ್ದ ಎಲ್ಲ ಆಕ್ರೋಶವನ್ನು ಹೊರಹಾಕಿದ್ದಾರೆ. ರಾಸಲೀಲೆ ಆರೋಪದಿಂದ ಕರ್ನಾಟಕ ಸರ್ಕಾರದ ವಿರುದ್ಧ ಎಲ್ಲ ಬೆಟ್ಟು ಮಾಡುತ್ತಿದ್ದು ಕೆಲ ಮುಖಂಡರು ಹೇಳಿಕೆ ಇಲ್ಲಿದೆ.[ವಿಡಿಯೋ ಬಹಿರಂಗ: ಸಚಿವ ಎಚ್ ವೈ ಮೇಟಿ ರಾಜೀನಾಮೆ ಅಂಗೀಕಾರ]

ನಾನಿನ್ನು ಸಿಡಿ ನೋಡಿಲ್ಲ: ಸಿಎಂ

ನಾನಿನ್ನು ಸಿಡಿ ನೋಡಿಲ್ಲ: ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಸಲೀಲೆ ಆರೋಪ ಸಂಬಂಧಿಸಿದಂತೆ ಪತ್ರಿಕೆಗಳಿಗೆ ಪ್ರತಿಕ್ರಿಯೆ ನೀಡಿ "ನಾನು ಸಿಡಿಯನ್ನು ಇನ್ನು ವೀಕ್ಷಿಸಿಲ್ಲ ಸಿಡಿ ಬಿಡುಗಡೆಯಾಗುವ ಮುನ್ನವೆ ವೈ ಎಚ್ ಮೇಟಿ ರಾಜಿನಾಮೆ ನೀಡಿದ್ದಾರೆ. ಅವರ ರಾಜಿನಾಮೆಯನ್ನು ಮೊದಲು ನಾನು ಅಂಗೀಕರಿಸಿರಲಿಲ್ಲ. ತೀವ್ರ ಒತ್ತಾಯದ ಮೇಲೆ ನಾನು ಅಂಗೀಕಾರ ಮಾಡಿದ್ದೇನೆ. ಅದನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಮೇಟಿಯವರ ವಿರುದ್ಧ ಷಡ್ಯಂತ್ರ ನಡೆದಿದೆ.ಈ ಆರೋಪ ಕುರಿತು ಸಿಬಿಐ ತನಿಖೆಗೆ ಒಳಪಡಿಸದ್ದೇವೆ ಎಂದರು. ಅಲ್ಲದೆ ಮೇಟಿಯರು ಅಂತಹ ಮನುಷ್ಯರಲ್ಲ ಸಂತ್ರಸ್ತ ಮಹಿಳೆ ಮೇಟಿಯವರ ಸಂಬಂಧಿಕರು ಎನ್ನಲಾಗಿದೆ. ಆಕೆಯು ಏನು ನಡೆದಿಲ್ಲ ಎನ್ನುತ್ತಿದ್ದಾರೆ. ತನಿಖೆಯಿಂದ ಎಲ್ಲ ವಿಷಯ ಹೊರಬೀಳಲಿದೆ ಎಂದು ತಿಳಿಸಿದರು.

ತನ್ವೀರ್, ಮೇಟಿಗೆ ಸಿಎಂ ಭದ್ರತೆ: ಶೋಭಾ ಕರಂದ್ಲಾಜೆ

ತನ್ವೀರ್, ಮೇಟಿಗೆ ಸಿಎಂ ಭದ್ರತೆ: ಶೋಭಾ ಕರಂದ್ಲಾಜೆ

ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ನೋಟು ದಂಧೆಯಿಂದ ಅನೇಕ ಕಾಂಗ್ರೆಸ್ ಮುಖಂಡರು ಹೊರ ಬೀಳುತ್ತಿದ್ದರೆ, ಅಶ್ಲೀಲ ಚಿತ್ರ ವೀಕ್ಷಿಸಿ ತನ್ಮೀರ್ ಸೇಟ್ ಮತ್ತು ರಾಸಲೀಲೆಯಿಂದ ಎಚ್.ವೈ.ಮೇಟಿ ಸಿಕ್ಕಿ ಬಿದ್ದಿದ್ದಾರೆ. ಇದರಿಂದ ಕಾಂಗ್ರೆಸ್ ಸಂಪುಟದ ಸಚಿವರ ನಡಾವಳಿಗಳ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ತನ್ವೀರ್ ಮತ್ತು ಮೇಟಿಯವರ ಬೆನ್ನಿಗೆ ನಿಂತು ಸಮರ್ಥನೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಹೇಯವಾದ ಕೆಲಸ. ಅಲ್ಲದೆ ರಾಜಶೇಖರ್ ಮತ್ತು ಸಂತ್ರಸ್ತ ಮಹಿಳೆಯರಿಗೆ ದಮ್ಕಿಹಾಕಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ತಿಳಿಸಿದರು.

ನೈತಿಕತೆ ಮೀರಿ ನಡೆದಿದ್ದಾರೆ: ಎಚ್ ಡಿಕೆ

ನೈತಿಕತೆ ಮೀರಿ ನಡೆದಿದ್ದಾರೆ: ಎಚ್ ಡಿಕೆ

ರಾಸಲೀಲೆ ಆರೋಪ ಸಂಬಂಧ ಜೆಡಿಎಸ್ ರಾಜ್ಯಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಮಹಿಳೆಯೊಬ್ಬಳ ಅಸಹಾಯಕತೆಯನ್ನು ಬಳಸಿಕೊಂಡ ಸಚಿವರು ನೈತಿಕತೆಯನ್ನು ಮೀರಿ ನಡೆದಿದ್ದಾರೆ. ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ರಾಜಿನಾಮೆ ನೀಡಿದ್ದು, ಪ್ರಕರಣವನ್ನು ಮುಚ್ಚಿಹಾಕಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊರಟಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಘನತೆಗೆ ಧಕ್ಕೆಯುಂಟಾಗಿದೆ ಎಂದು ಹೇಳಿದರು.

ಉಡಾಫೆಯ ಸಿದ್ದರಾಮಯ್ಯ: ಶ್ರೀನಿವಾಸ್ ಪ್ರಸಾದ್

ಉಡಾಫೆಯ ಸಿದ್ದರಾಮಯ್ಯ: ಶ್ರೀನಿವಾಸ್ ಪ್ರಸಾದ್

ರಾಜ್ಯ ಸರ್ಕಾರ ದಿವಾಳಿಯ ಕಡೆ ಹೊರಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದರೆ ಉಡಾಫೆ, ಉಡಾಫೆ ಎಂದರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರ ಈ ಉಡಾಫೆ ನೀತಿಯಿಂದಾಗಿ ರಾಜ್ಯದ ಪರಿಸ್ಥಿತಿ ಈ ರೀತಿಯಾಗಿದೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಮುಖಂಡರೊಂದಿಗೆ ಚರ್ಚಿಸಿ ಕ್ರಮ: ಸಚಿವ ಪರಂ

ಮುಖಂಡರೊಂದಿಗೆ ಚರ್ಚಿಸಿ ಕ್ರಮ: ಸಚಿವ ಪರಂ

ನಾನು ಬೆಳಗ್ಗಿನಿಂದಲೂ ಕಾರ್ಯಕ್ರಮದಲ್ಲಿದ್ದೆ ನಾನಿನ್ನು ಸಿಡಿ ನೋಡಿಲ್ಲ. ಅವರು ಒಬ್ಬ ಜವಾಬ್ದಾರಿಯುತ ಮುಖಂಡರಾಗಿದ್ದಾರೆ ಹೀಗಾಗಿ ನಾನಾ ರಾಜಕೀಯ ನಾಯಕರೊಂದಿಗೆ ಚರ್ಚೆ ಮಾಡಿ ಅಗತ್ಯಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ನಾನು ಕೇಳಿದಂತೆ ಅವರು ಆಗಲೆ ರಾಜನಾಮೆ ನೀಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಗಳೊಂದಿಗೂ ಮಾತಕತೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಮತ್ತು ಕಾಂಗ್ರೆಸ್ ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್ ತಿಳಿಸಿದರು.

English summary
H Y Meti, minister for excise in the Karnataka government resigned after a sex tape involving him was made public. What the leaders says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X