• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಮಪತ್ರ ತಿರಸ್ಕಾರ: ಕಾನೂನು ಹೋರಾಟ ಎಂದ ನೌಹೀರಾ ಶೇಖ್

|

ಬೆಂಗಳೂರು, ಏಪ್ರಿಲ್ 25: ಎಂಇಪಿ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡದೆ ಅಡ್ಡಿಪಡಿಸಿದವರ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಎಂಇಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಖ್ ಹೇಳಿದ್ದಾರೆ.

ನಗರದಲ್ಲಿ ಖಾಸಗಿ ಹೋಟೆಲ್‌ ಒಂದರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೌಹೀರಾ ಶೇಖ್, ಕೆಲವು ಕಡೆ ನಡೆದಿರುವ ಘಟನೆಗಳನ್ನು ನೋಡಿದರೆ ಸರ್ವಾಧಿಕಾರಿ ವರ್ತನೆ ಕಂಡುಬಂದಿದೆ ಇದನ್ನು ಬಲವಾಗಿ ಖಂಡಿಸುತ್ತೇನೆ. ನಿನ್ನೆ ರಾಜ್ಯದ ಐದು ಕಡೆಗಳಲ್ಲಿ ಎಂಇಪಿ ಅಭ್ಯರ್ಥಿಗಳು ನಾಮಪತ್ರಸಲ್ಲಿಸಲು ಅವಕಾಶ ಸಿಕ್ಕಿಲ್ಲ ಇದರ ವಿರುದ್ಧ ಪಕ್ಷ ಮುಖ್ಯಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ ಎಂದರು.

'ನರ್ಸ್' ಜಯಲಕ್ಷ್ಮೀ ಬಿಟಿಎಂ ಲೇಔಟ್‌ನಿಂದ ಕಣಕ್ಕೆ!

ಯಾವ ಕಾರಣಕ್ಕಾಗಿ ಎಂಇಪಿ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಟ್ಟಿಲ್ಲ ಎಂಬುದರ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ವಿವರ ನೀಡುವುದಾಗಿ ರಾಜ್ಯ ಮುಖ್ಯಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಭರವಸೆ ಕೊಟ್ಟಿದ್ದಾರೆ.

ಅವರು ನೀಡುವ ವರದಿ ಆಧಾರದ ಮೇಲೆ ಎಂಇಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅಡ್ಡಿಪಡಿಸಿದವರ ವಿರುದ್ಧ ನ್ಯಾಯಲಯದಲ್ಲಿ ಮೊಕದ್ದಮೆ ದಾಖಲು ಮಾಡುವುದಾಗಿ ಅವರು ಹೇಳಿದರು.

ಮಂಗಳವಾರ ಬೆಳಗಾವಿ, ತುಮಕೂರಿನ ತುರುವೆಕೆರೆ, ಶಿರಾ, ಕೋಲಾರ ಜಿಲ್ಲೆಯ ಮಾಲೂರು, ರಾಮನಗರ ಜಿಲ್ಲೆಯ ಕನಕಪುರದಲ್ಲಿ ಎಂಇಪಿ ಅಭ್ಯರ್ಥಿಗಳು ನಾಮಪ್ತರ ಸಲ್ಲಿಸಲು ಕೆಲವರು ಅಡ್ಡಿಪಡಿಸಿದ್ದಾರೆ ಇದಕ್ಕೆ ಕಾರಣಾರದವರ ವಿರುದ್ಧ ಅಗತ್ಯ ಕ್ರಮ ಜರುಗಿಸುವಂತೆ ಮನವಿ ಮಾಡಲಾಗಿದೆ ಎಂದರು.

ದುಡ್ಡಿಯಿಲ್ಲದವರು, ಬಡವರು, ರೈತರು, ಕೂಲಿಕಾರರು ವಿಧಾನಸಭೆಗೆ ಮತ್ತು ಲೋಕಸಭೆಗೆ ಆಯ್ಕೆಯಾಗಿ ಬರಬೇಕು ಎಂಬ ಉದ್ದೇಶದಿಂದ ಎಂಇಪಿ ಸಮಾಜದ ಎಲ್ಲ ವರ್ಗ, ಸಮುದಾಯದವರಿಗೆ ಟಿಕೆಟ್ ಕೊಟ್ಟಿದೆ . ಬಿಜೆಪಿ ಪಟ್ಟಿಯನ್ನು ನೋಡಿದರೆ ಅವರು ಹೇಳುವ ಸಭ್ ಕಾ ಸಾತ್ ಸಬ್ ಕಾ ವಿಕಾಸ್ ನೀತಿ ಏನು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ.

ಬಿಜೆಪಿ ಹೇಳುವುದೊಂದು ಮಾಡುವುದೊಂದು ಎಂಬುದು ಎಲ್ಲರಿಗೂ ಮನವರಿಕೆ ಆಗಿದೆ ಎಂದರು ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾ, ಲಂಡನ್, ದುಬೈ, ಅಬುದಾಬಿ ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ನಗರಗಳಲ್ಲಿ ಭಾಷಣ ಮಾಡುತ್ತಾರೆ ಆದರೆ ಮಹಿಳೆಯರು ಮತ್ತು ಮಕ್ಕಳ ಮೇಲೆ ನಿತ್ಯವೂ ಅತ್ಯಾಚಾರ ಅನಾಚರ ಆಗುತ್ತಿರುವ ಬಗ್ಗೆ ಚಕಾರ ಎತ್ತುವುದಿಲ್ಲ ಇದು ಸರಿಯೇ?ಅವರಿಗೆ ಶೋಭೆ ತರುತ್ತದೆಯೇ ಎಂದು ಪ್ರಶ್ನೆ ಮಾಡಿದರು.

ಒಟ್ಟಾರೆ ಎಂಇಪಿ 52 ಮಹಿಳೆಯರಿಗೆ ಟಿಕೆಟ್ ನೀಡಿದೆ ಒಂದೆರೆಡು ದಿನದಲ್ಲಿ ತಾರಾ ಪ್ರಚಾರಕಾರ ಪಟ್ಟಿ ಬಿಡುಗಡೆ ಆಗಲಿದೆ ಇದೇ 26ರಿಂದ ಮೇ 10ರ ವರೆಗೂ ರಾಜ್ಯದ ಉದ್ದಾಗಲಕ್ಕೂ ಪ್ರವಾಸ ಮಾಡುವುದಾಗಿ ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All India Mahila Empowerment Party Chief Dr Nowhera Shaik said the party will file against district election officers who were denied accept nomination filed by the party candidates.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more