ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬೆಂಗಳೂರಿನ ಹೆದ್ದಾರಿಯಲ್ಲಿ ಈಜಾಡೋಣ ಬಾ ಗೆಳೆಯ'- ಟ್ವಿಟ್ಟರ್ ಮೀಮ್ಸ್

|
Google Oneindia Kannada News

ಬೆಂಗಳೂರು, ಮೇ 18: ಬೇಸಿಗೆ ಬಿಸಿಲಿಗೆ ಹೈರಾಣಾಗಿದ್ದ ಸಿಲಿಕಾನ್ ಸಿಟಿ ಮಂದಿಗೆ ವರುಣ ಸಾಕು ಎನ್ನುವಷ್ಟು ತಂಪೆರೆದಿದ್ದಾನೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಹೈರಾಣಾಗಿ ಹೋಗಿದ್ದಾರೆ. ಕೆಲ ದಿನಗಳಿಂದ ಹಾನಿಗೊಳಗಾದ ಪ್ರದೇಶಗಳಿಂದ ಜಲಾವೃತ ಫೋಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಅದೇನೋ ಸ್ಲೋ ಮೋಷನ್‌ನಲ್ಲಿ ಆರಂಭಗೊಂಡಿದ್ದ ಮಳೆ ಇದ್ದಕ್ಕಿದ್ದಂತೆ ಮಂಗಳವಾರ ಸಂಜೆ ಧಾರಾಕಾರವಾಗಿ ಸುರಿದಿದೆ. ಇದರಿಂದ ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಹಲವು ಭಾಗಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ಇದೀಗ ಭಾರತೀಯ ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನ ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ 'ಆರೆಂಜ್' ಅಲರ್ಟ್ ಘೋಷಿಸಿದೆ. ಈ ನಡುವೆ ಮಳೆಯ ಆವಾಂತರದ ಬಗ್ಗೆ ಟ್ವಿಟ್ಟರ್‌ನಲ್ಲಿ ಹಾಸ್ಯವನ್ನು ಕಂಡುಹಿಡಿಯಲು ನೆಟ್ಟಿಗರು ಮುಂದಾಗಿದ್ದಾರೆ.

Memes in Twittter on Bengaluru Rains and Floods

ಜಲಾವೃತಗೊಂಡ ನಗರದ ವಿಡಿಯೊಗಳು ಟ್ವಿಟರ್‌ನಲ್ಲಿ ಬರಲು ಪ್ರಾರಂಭಿಸಿದಾಗ ನೆಟ್ಟಿಗರು ಈ ವಿಷಯದ ಬಗ್ಗೆ ತಮ್ಮ ವಿನೋದಮಯವಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಐಕಾನಿಕ್ 'ಝುಕೆಗಾ ನಹಿ' ಡೈಲಾಗ್ ಅನ್ನು ಬಳಸುವುದರಿಂದ ಹಿಡಿದು ಹೆದ್ದಾರಿಗಳಲ್ಲಿ ಬೀಚ್ ತರಹದ ಅಲೆಗಳು ಸೃಷ್ಟಿಯಾಗಿವೆ ಎಂದು ಹಂಚಿಕೊಳ್ಳುವವರೆಗೆ ವಿಡಿಯೋ ಪೋಸ್ಟ್‌ಗಳನ್ನು ಮಾಡಿದ್ದಾರೆ. ಬೆಂಗಳೂರಿನ ಹಲವು ಭಾಗಗಳಲ್ಲಿ ನೀರು ಕಡಿಮೆಯಾಗಿ ಸದ್ಯಕ್ಕೆ ಪರಿಸ್ಥಿತಿ ಉತ್ತಮವಾಗಿದೆ. ಆದರೆ ಇನ್ನೇನು ಮೂರು ದಿನ ಮಳೆಯಾಗುವ ಸುದ್ದಿ ಜನರಲ್ಲಿ ಆತಂಕ ಮೂಡಿಸಿದೆ.

ಕೆಲ ಮೀಮ್‌ಗಳು ಮತ್ತು ವಿಡಿಯೊಗಳ ಸಂಗ್ರಹ ಇಲ್ಲಿದೆ ಒಮ್ಮೆ ನೋಡಿ:

English summary
Many Areas of Bengaluru are flooded with rain water, looking like swimming pools. Twitter is flooded with memes on Bengaluru rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X