ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ವಾತಾವರಣದಿಂದ ಶುದ್ಧ ಕುಡಿಯುವ ನೀರು ಉತ್ಪಾದನೆ

|
Google Oneindia Kannada News

ಬೆಂಗಳೂರು: ಸೆಪ್ಟೆಂಬರ್ 24: ಕುಡಿಯುವ ನೀರು ಅಪರೂಪವಾದಾಗ ಅಟ್ಮಾಸ್ಫೆರಿಕ್ ವಾಟರ್ ಜನರೇಟರ್ಸ್(ಎಡಬ್ಲ್ಯೂಜಿಸ್) ವೃದ್ಧಿಸುತ್ತಿರುವ ಬೇಡಿಕೆಯನ್ನು ಪೂರೈಸುವಲ್ಲಿ ಮುಂಚೂಣಿಯಲ್ಲಿರುತ್ತವೆ. ಭಾರತ ಮತ್ತು ವಿಶ್ವದಲ್ಲಿ ಹಲವು ನಗರಗಳು ಮತ್ತು ಪಟ್ಟಣಗಳಲ್ಲಿ ಅಂತರ್ಜಲದ ಅಲಭ್ಯತೆ ಮತ್ತು ಮಾಲಿನ್ಯದಿಂದ ಶುದ್ಧ ನೀರಿನ ಸಮಸ್ಯೆ ಉಂಟಾಗಿದೆ. ಎಡಬ್ಲ್ಯೂಜಿಗಳಿಂದ ಸೃಷ್ಟಿಸುವ ನೀರು ಶುದ್ಧ ಹಾಗೂ ಯಾವುದೇ ಸಂದರ್ಭದಲ್ಲಿ ಆರೋಗ್ಯಕರ. ಬೆಂಗಳೂರಿನ ಜವಹರಲಾಲ್ ನೆಹರೂ ತಾರಾಲಯದಲ್ಲಿ ಮೇಘ್‍ದೂತ್ ಅಟ್ಮಾಸ್ಫೆರಿಕ್ ವಾಟರ್ ಜನರೇಟರ್(ಎಡಬ್ಲ್ಯೂಜಿ) ಘಟಕ ಉದ್ಘಾಟನೆ. ಈ ಎಡಬ್ಲ್ಯೂಜಿ ವಾತಾವರಣದಿಂದ ಪಡೆದ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತದೆ.

ಜವಹರಲಾಲ್ ನೆಹರೂ ತಾರಾಲಯದಲ್ಲಿ ಈ ಎಡಬ್ಲ್ಯೂಜಿಯನ್ನು ಬೆಂಗಳೂರಿನ ಅಂತರಿಕ್ಷ ಭವನದ ಮಾನ್ಯ ಇಸ್ರೋದ ಪ್ರೊಫೆಸರ್ ಡಾ.ಟಿ.ಕೆ.ಅಲೆಕ್ಸ್ ಉದ್ಘಾಟಿಸಿದರು, ಅವರೊಂದಿಗೆ ಓರ್ಲಿಕಾನ್ ಬಾಲ್ಜರ್ಸ್ ಕೋಟಿಂಗ್ ಇಂಡಿಯಾದ ಎವಿಪಿ-ಸೆಗ್ಮೆಂಟ್ ಕಾಂಪೊನೆಂಟ್ಸ್(ಯೂನಿಟ್ ಹೆಡ್) ಎಂ.ಆರ್.ಕೆ. ಕಾರಂತ, ಆರ್‍ಐಡಿ 3190ರ ಡಿಸ್ಟ್ರಿಕ್ಟ್ ಗೌರ್ನರ್ ರೋಟರಿಯನ್ ಫಜûಲ್ ಮಹ್‍ಮೂದ್ ಮತ್ತು ಜವಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಜಿ ಗಲಗಲಿ ಉಪಸ್ಥಿತರಿದ್ದರು.

 ತಾರಾಲಯಕ್ಕೂ ಕೊವಿಡ್ 19 ನಿರ್ಬಂಧ, Live Web Castಗೆ ಮೊರೆ ತಾರಾಲಯಕ್ಕೂ ಕೊವಿಡ್ 19 ನಿರ್ಬಂಧ, Live Web Castಗೆ ಮೊರೆ

ಈ ಎಡಬ್ಲ್ಯೂಜಿ ಯೋಜನೆಯು ತಾರಾಲಯಕ್ಕೆ ಭೇಟಿ ನೀಡುವ ಸಂದರ್ಶಕರು ಮತ್ತು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಸುಧಾರಿತ ಮತ್ತು ಸುಸ್ಥಿರ ತಂತ್ರಜ್ಞಾನದ ಮೂಲಕ ನೀರು ಪಡೆಯುವ ಲಾಭರಹಿತ ಸಂಸ್ಥೆ ಎಟಿಎಫ್‍ಎಸ್‍ಸಿ ಹಾಗೂ ಜೆಎನ್‍ಪಿಯ ಕಲ್ಪನೆಯ ಕೂಸು.

MEGHDOOT plant inaugurated Jawaharlal Nehru Planetarium

ಜೆಎನ್‍ಪಿ 1989ರಲ್ಲಿ ಪ್ರಾರಂಭವಾಗಿದ್ದು ಭಾರತದ ಮುಂಚೂಣಿಯ ಸಂಸ್ಥೆಯಾಗಿ ಬೆಳೆದಿದೆ. ಇದು ವಾರ್ಷಿಕ 3 ಲಕ್ಷಕ್ಕೂ ಹೆಚ್ಚು ಜನರನ್ನು ಸೆಳೆಯುತ್ತದೆ, ಅವರಲ್ಲಿ ಬಹುತೇಕ ವಿದ್ಯಾರ್ಥಿಗಳಾಗಿದ್ದು ಅವರು ತಾರಾ ವೀಕ್ಷಣೆ, ವೈಜ್ಞಾನಿಕ ಚಲನಚಿತ್ರಗಳ ವೀಕ್ಷಣೆ, ಸ್ಕೈ-ಥಿಯೇಟರ್ ಪ್ರದರ್ಶನಗಳು ಮತ್ತು ಖಗೋಳ ಸಂಬಂಧಿ ಘಟನೆಗಳ ವೀಕ್ಷಣೆಯಲ್ಲಿ ಭಾಗವಹಿಸುತ್ತಾರೆ.

MEGHDOOT plant inaugurated Jawaharlal Nehru Planetarium

ಈ ಯೋಜನೆಯ ಉದ್ದೇಶ ಸುಸ್ಥಿರ ತಂತ್ರಜ್ಞಾನಗಳನ್ನು ಮುಂಚೂಣಿಗೆ ತರುವುದಾಗಿದೆ. ಯಾವುದೇ ಸಂದರ್ಭದಲ್ಲಿ ಭೂಮಿಯ ವಾತಾವರಣದಲ್ಲಿ 37.5 ಮಿಲಿಯನ್-ಬಿಲಿಯನ್ ಗ್ಯಾಲನ್‍ಗಳಷ್ಟು ನೀರಿನ ಆವಿ ಇದೆ ಎಂದು ವರದಿಗಳು ಹೇಳುತ್ತವೆ ಮತ್ತು ಇದನ್ನು ಕುಡಿಯುವ ನೀರಾಗಿ ಬದಲಾಯಿಸಿಕೊಳ್ಳಬಹುದು. ಮೂಲ: https://wxguys.ssec.wisc.edu/

MEGHDOOT plant inaugurated Jawaharlal Nehru Planetarium

ಎಡಬ್ಲ್ಯೂಜಿ ತಂತ್ರಜ್ಞಾನವು ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ರಕ್ಷಣಾ ಸಂಸ್ಥೆಗಳು, ರೈಲು ನಿಲ್ದಾಣಗಳು, ಆಫ್-ಶೋರ್ ಪ್ಲಾಟ್‍ಫಾರಂಗಳು ಮತ್ತು ಹಡಗುಗಳು, ವನ್ಯಜೀವಿ ಅಭಯಾರಣ್ಯಗಳು, ವಸತಿ ನಿಲಯಗಳಯ ಮತ್ತು ಗೇಟೆಡ್ ಸಮುದಾಯಗಳು, ಬಾಟಲಿಯ ಜಲ ಘಟಕಗಳು, ಪ್ರಾಕೃತಿಕ ವಿಕೋಪ ನಿರ್ವಹಣೆಯ ತಾಣಗಳು, ಔಷಧದ ಕಂಪನಿಗಳು, ಹೋಟೆಲ್‍ಗಳು, ಶಾಪಿಂಗ್ ಮಾಲ್‍ಗಳು, ಟೆಕ್ ಪಾರ್ಕ್‍ಗಳು ಮತ್ತು ಕಛೇರಿಗಳಲ್ಲಿ ಉಪಯುಕ್ತವಾಗಿವೆ.

ಭಾರತದಲ್ಲಿ 76 ಮಿಲಿಯನ್ ಜನರಿಗೆ ಕುಡಿಯುವ ನೀರು ಲಭ್ಯವಿಲ್ಲ ಮತ್ತು ಎಡಬ್ಲ್ಯೂಜಿ ರೀತಿಯ ತಂತ್ರಜ್ಞಾನಗಳು ಈ ಅಂತರ ತುಂಬಬಲ್ಲವು.

Recommended Video

ಉಗ್ರರನ್ನು ಸಾಕ್ತಿರೋ ಟೆರರಿಸ್ತಾನಕ್ಕೆ ಕಮಾಲಾ ಹ್ಯಾರಿಸ್ ಖಡಕ್ ಎಚ್ಚರಿಕೆ | Oneindia Kannada

ಮೇಘ್‍ದೂತ್ ಎಡಬ್ಲ್ಯೂಜಿ ಕುರಿತು ಹೆಚ್ಚಿನ ಮಾಹಿತಿಗೆ: [email protected]

English summary
Advanced technology-based MEGHDOOT Atmospheric Water Generator (AWG) plant inaugurated at the Jawaharlal Nehru Planetarium (JNP), Bengaluru. The AWG provides pure drinking water sourced from the atmosphere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X