ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರಗ್ಸ್ ಗೆ ನೋ, ಬದುಕಿಗೆ ಯೆಸ್ ಹೇಳಿ ಅಂತಾರೆ ಬೆಂಗಳೂರು ಪೊಲೀಸರು

|
Google Oneindia Kannada News

ಬೆಂಗಳೂರು, ಸೆ.27: ಬೆಂಗಳೂರು ನಗರ ಪೊಲೀಸರು ಬೃಹತ್ ಮಾದಕ ದ್ರವ್ಯ ವ್ಯಸನ ವಿರೋಧಿ ಅಭಿಯಾನ' ಡ್ರಗ್ಸ್ ಗೆ ನೋ ಹೇಳಿ, ಬದುಕಿಗೆ ಯೆಸ್ ಹೇಳಿ' ಸೆ.27ರಂದು ಗುರುವಾರ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಆಯೋಜಿಸಿದೆ.

ಸ್ಯಾರಿಡಾನ್ ಹಾಗೂ ಮತ್ತೆರಡು ಡ್ರಗ್ಸ್ ಮೇಲಿನ ನಿಷೇಧ ತೆರವುಸ್ಯಾರಿಡಾನ್ ಹಾಗೂ ಮತ್ತೆರಡು ಡ್ರಗ್ಸ್ ಮೇಲಿನ ನಿಷೇಧ ತೆರವು

ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜ್ಯ ಅಬಕಾರಿ ಇಲಾಖೆ ಆಯುಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರಿಕೆಟ್ ಆಟಗಾರ ಹಾಗೂ ಐಸಿಸಿ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಅವರು ಅಧ್ಯಕ್ಷತೆವಹಿಸಲಿದ್ದಾರೆ.

ಡ್ರಗ್ಸ್ ಮುಕ್ತ ತುಮಕೂರು ವಿವಿ: ಡಿಸಿಎಂ ಕಟ್ಟುನಿಟ್ಟಿನ ಸೂಚನೆಡ್ರಗ್ಸ್ ಮುಕ್ತ ತುಮಕೂರು ವಿವಿ: ಡಿಸಿಎಂ ಕಟ್ಟುನಿಟ್ಟಿನ ಸೂಚನೆ

ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಗಳು ಪಾಲ್ಗೊಳ್ಳಲಿವೆ, ದೇಹದಾರ್ಢ್ಯ ಪ್ರದರ್ಶನ, ಸಂಗೀತ ರಸಮಂಜರಿ, ಕಳರಿಪಯಟ್ಟು ಸಮರ ಕಲೆ ಹಾಗೂ ಮಾದಕದ್ರವ್ಯ ವ್ಯಸನದ ದುಷ್ಪರಿಣಾಮಗಳ ಕುರಿತು ಬೆಂಗಳೂರು ಪೊಲೀಸರು ನಿರ್ಮಿಸಿರುವ ಕಿರು ವಿಡಿಯೋ ಪ್ರದರ್ಶನ ನಡೆಯಲಿದೆ.

ಮಂಗಳೂರು: ಗಾಂಜಾ ಮಾರಾಟ ಪ್ರಕರಣ ನಾಲ್ವರ ಬಂಧನಮಂಗಳೂರು: ಗಾಂಜಾ ಮಾರಾಟ ಪ್ರಕರಣ ನಾಲ್ವರ ಬಂಧನ

Mega anti drugs campaign by Bengaluru police

ಇತ್ತೀಚೆಗೆ ಶಾಲಾ, ಕಾಲೇಜು ಮಕ್ಕಳು ಮಾದಕವ್ಯಸನಕ್ಕೆ ಒಳಗಾಗಿ ತಮ್ಮ ಜೀವನವನ್ನು ನರಕಕ್ಕೆ ತಳ್ಳುತ್ತಿದ್ದಾರೆ, ಆದ್ದರಿಂದ ಬೆಂಗಳೂರು ಪೊಲೀಸರು ಈಗಾಗಲೇ ಹಲವು ಅಭಿಯಾನವನ್ನು ಶಾಲಾ ಕಾಲೇಜುಗಳಲ್ಲಿ ಆಯೋಜಿಸುತ್ತಾ ಬಂದಿದೆ. ಅದರ ಮತ್ತೊಂದು ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ.

English summary
Bengaluru police have organised mega anti drugs campaign on September 27 at phoenix market to create awareness among the general public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X