ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಗಮೆಚ್ಚಿದ ಬೆಂಗಳೂರು ಹುಡ್ಗ ರಿಯಾಜ್ ಬಾಷಾ

By ಮಹೇಶ್ ಮಲ್ನಾಡ್
|
Google Oneindia Kannada News

"Choose a passion you love pursuing and you won't have to work a single day" - ಎಂಬ ಸ್ವಾಮಿ ವಿವೇಕಾನಂದರ ಉಕ್ತಿಯ ಮೇಲೆ ನಂಬಿಕೆ ಇರಿಸಿಕೊಂಡಿರುವ ಬೆಂಗಳೂರಿನ ಹುಡುಗ ರಿಯಾಜ್ ಬಾಷಾ ಮಾಂತ್ರಿಕ ಧ್ವನಿಗೆ ಮರುಳಾಗದೆ ಇರಲು ಸಾಧ್ಯವೇ ಇಲ್ಲ.

ಮಾತಿನ ಗಾರುಡಿಗ ರಿಯಾಜ್ ಅವರು ಇದುವರೆವಿಗೂ ಸರಿ ಸುಮಾರು 550 ಶೋಗಳ ಮೂಲಕ 2,00,000 ಕ್ಕೂ ಅಧಿಕ ಕಾರ್ಪೊರೇಟ್ ಉದ್ಯೋಗಿಗಳು, 10,000ಕ್ಕೂ ಅಧಿಕ ಕುಟುಂಬಗಳನ್ನು ರಂಜಿಸಿದ್ದಾರೆ, ಕಳೆದ 12 ವರ್ಷಗಳಿಂದ ಮಾತನ್ನೇ ಬಂಡವಾಳ ಮಾಡಿಕೊಂಡು ಜೀವಿಸುತ್ತಿರುವ ರಿಯಾಜ್ ಬಹುಭಾಷಾ ಪಟು.

ವರ್ಡ್ ಸ್ಪೇಸ್ ಸ್ಯಾಟಲೈಟ್ ರೇಡಿಯೋ, 92.7ಬಿಗ್ ಎಫ್ ಎಂನಲ್ಲಿ ಆರ್ ಜೆ ಆಗಿದ್ದ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ಈ ಪ್ರತಿಭೆಗೆ ಕನ್ನಡ ಸೇರಿದಂತೆ ಹಿಂದಿ,ಇಂಗ್ಲೀಷ್, ಉರ್ದು, ತಮಿಳು, ತೆಲುಗು ಅಲ್ಪ ಸ್ವಲ್ಪ ಪಂಜಾಬಿ ಭಾಷೆ ಪರಿಚಯವೂ ಇದೆ.[ಜಾಹೀರಾತಿನಲ್ಲಿ ಬ್ಲಿಕಿಂಗ್ ಸ್ಟಾರ್ ಶೀತಲ್ ಶೆಟ್ಟಿ]

ಎ.ಆರ್ ರೆಹಮಾನ್ ಲೈವ್ ಶೋಗಾಗಿ ಮಾಡಿದ ನಿರೂಪಣೆಯನ್ನು ನೆನಪಿಸಿಕೊಂಡ ರಿಯಾಜ್, ಸ್ಟಾರ್ ಪೋಗ್ರಾಂಗಳಲ್ಲಿ ಜನರಿಗೆ ಬೋರ್ ಆಗದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸ. ರೆಹಮಾನ್ ಸಾರ್ ಪೋಗ್ರಾಂನಲ್ಲಿ ರೆಹಮಾನ್ ಅವರು ಬರುವುದು ತುಂಬಾ ತಡವಾಗಿತ್ತು. ಅಷ್ಟು ಕಾಲ ಜನರನ್ನು ರಂಜಿಸುವ ಹೊಣೆ ನನ್ನ ಮೇಲಿತ್ತು. ಆದರೆ, ಇಂಥ ಚಾಲೆಂಜ್ ಗಳಿದ್ದರೆ ನಮ್ಮ ನೈಜ ಸಾಮರ್ಥ್ಯ ಪ್ರದರ್ಶನ ಸಾಧ್ಯ ಎಂದರು. [ಕಿರುತೆರೆ ರಾಕಿಂಗ್ ಸ್ಟಾರ್ ಅಕುಲ್ ಬಾಲಾಜಿ ಸಂದರ್ಶನ]

ಖ್ಯಾತ ಸಂಗೀತಗಾರರ ಶೋ ಇರಲಿ, ಹೊಸ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮವಿರಲಿ, ಫ್ಯಾಮಿಲಿ ಗೆಟ್ ಟುಗೆದರ್ ಇರಲಿ ರಿಯಾಜ್ ಇದ್ದರೆ ಅಲ್ಲಿ ಮನರಂಜನೆಗೆ ಮೋಸವಿಲ್ಲ.. ರಿಯಾಜ್ ಬಗ್ಗೆ ಇನ್ನಷ್ಟು ವಿವರ ಮುಂದಿನ ಚಿತ್ರಸರಣಿಯಲ್ಲಿ ಕಾಣಿರಿ...

ನನ್ನ ತಂದೆಯೇ ನನಗೆ ಪ್ರೇರಣೆ

ನನ್ನ ತಂದೆಯೇ ನನಗೆ ಪ್ರೇರಣೆ

ಬೆಂಗಳೂರಿನ ಐಟಿಐ ಸಂಸ್ಥೆಯಲ್ಲಿ ನನ್ನ ತಂದೆ ಮೆಹಬೂಬ್ ಬಾಷಾ ಉದ್ಯೋಗಿಯಾಗಿದ್ದರು. ಅವರಿಗೆ ಹಲವು ಭಾಷೆಗಳ ಪರಿಚಯವಿತ್ತು. ನಾನು ಓದಿದ ಜೋಸೆಫ್ ಕಾಲೇಜಿನಲ್ಲೂ ಇದೇ ರೀತಿ ವಾತಾವರಣವಿತ್ತು. ಹೀಗಾಗಿ ನನಗೆ ಹಲವು ಭಾಷೆಗಳು ಮಾತುಗಾರಿಕೆ ಎಲ್ಲವೂ ನನ್ನ ತಂದೆ ಹಾಗೂ ಕಾಲೇಜಿನಿಂದ ಬಂದ ಬಳುವಳಿ. ಕನ್ನಡ ಸಾಹಿತ್ಯ, ಜನಪದ ಗೀತೆಗಳ ಪರಿಚಯವನ್ನು ನಾನಿದ್ದ ಪರಿಸರ ಕಲಿಸಿಕೊಟ್ಟಿದೆ. ಬಿಗ್ ಎಫ್ ಎಂನಲ್ಲಿದ್ದಾಗಲೂ ನಾನು ಸಾಕಷ್ಟು ಕಲಿತೆ ಎಂದಿದ್ದಾರೆ.

ಜಾಹೀರಾತುಗಳಲ್ಲಿ ವಾಯ್ಸ್ ಓವರ್ ಆರ್ಟಿಸ್ಟ್

ಜಾಹೀರಾತುಗಳಲ್ಲಿ ವಾಯ್ಸ್ ಓವರ್ ಆರ್ಟಿಸ್ಟ್

ಏರ್ ಟೆಲ್, ಫ್ಯೂಚರ್ ಗ್ರೂಪ್, ಸೇರಿದಂತೆ ವಿವಿಧ ಜಾಹೀರಾತುಗಳಲ್ಲಿ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಅನೇಕ ನಾಯಕ ನಟರಿಗೆ, ಸೆಲೆಬ್ರಿಟಿಗಳಿಗೆ ವಾಯ್ಸ್ ಓವರ್ ನೀಡಿದ್ದೇನೆ. ವಾಯ್ಸ್ ಓವರ್ ಮೊದಮೊದಲು ಇಷ್ಟವಾಗುತ್ತಿತ್ತು. ಎಫ್ ಎಂ ವಾಹಿನಿಯಲ್ಲಿ ಆರ್ ಜೆಯಾಗಿ ಬೆಳೆಯಲು ಸಹಕಾರಿಯಾಗಿತ್ತು. ಅದರೆ, ಇದಕ್ಕಿಂತ ದೊಡ್ಡ ವೇದಿಕೆ ನನಗಾಗಿ ಕಾದಿತ್ತು. ಸತತ ಪ್ರಯತ್ನದಿಂದ ಸಣ್ಣ ಪುಟ್ಟ ಕಾರ್ಪೊರೇಟ್ ಶೋಗಳಿಗೆ ಹೋಸ್ಟ್ ಆಗಿ ಕಾರ್ಯನಿರ್ವಹಿಸಿದೆ ಈಗ ಸುಮಾರು 550ಕ್ಕೂ ಅಧಿಕ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಹೆಮ್ಮೆಯಿದೆ.

ಊರೂರು ಸುತ್ತುವುದರಿಂದ ವಿವಿಧತೆಯನ್ನು ಕಂಡೆ

ಊರೂರು ಸುತ್ತುವುದರಿಂದ ವಿವಿಧತೆಯನ್ನು ಕಂಡೆ

ಅನೇಕ ಶೋಗಳಿಗಾಗಿ ವಿವಿಧ ದೇಶಗಳಿಗೆ ಭೇಟಿ ನೀಡಬೇಕಾಗುತ್ತದೆ. ಪ್ರತಿ ದೇಶಕ್ಕೆ ಹೋಗುವ ಮುನ್ನ ಆ ದೇಶದ ಇತಿಹಾಸ, ಸಂಸ್ಕೃತಿಯ ಸ್ಥೂಲ ಪರಿಚಯವನ್ನು ಪಡೆದುಕೊಳ್ಳುತ್ತೇನೆ. ಊರೂರು ಸುತ್ತುವುದರಿಂದ ವೈವಿಧ್ಯಮಯ ಜಗತ್ತು ಹಾಗೂ ಜನರ ಪರಿಚಯ ಸ್ನೇಹ ಸಿಕ್ಕಿದೆ.

ಸಮಾರಂಭ ಯಾವುದೇ ಇರಲಿ ಎಷ್ಟೇ ಸಣ್ಣದಾಗಿರಲಿ ಸರಿಯಾದ ಪೂರ್ವ ತಯಾರಿ ಇಲ್ಲದೆ ನಿರೂಪಣೆ ಮಾಡುವುದು ಕಷ್ಟ ಎಂದು ರಿಯಾಜ್ ಹೇಳುತ್ತಾರೆ. ಬಹುಶಃ ಹಲವು ಭಾಷೆಗಳ ಪರಿಚಯವಿರುವ ಕಾರಣಕ್ಕೆ ರಿಯಾಜ್ ಭಾರತದ ಅತ್ಯಂತ ಬೇಡಿಕೆಯ Host ಎನಿಸಿಕೊಂಡಿದ್ದಾರೆ.

ಶೋ ಯಾವುದಾದರೂ ನಮ್ಮತನವಿರಬೇಕು

ಶೋ ಯಾವುದಾದರೂ ನಮ್ಮತನವಿರಬೇಕು

ನಿರೂಪಣೆಯಲ್ಲಿ ಸತ್ತ್ವವಿರಬೇಕು, ಲವಲವಿಕೆಯಿರಬೇಕು, ಅಸ್ಖಲಿತ ಮಾತುಗಾರಿಕೆಯೇ ಬಂಡವಾಳ. ಉಚ್ಚಾರಣೆ ಜೊತೆಗೆ ಇಡೀ ಶೋನ ಮುನ್ನಡೆಸುವ ಜವಾಬ್ದಾರಿಯಿರುತ್ತದೆ. ಒಂದರ್ಥದಲ್ಲಿ ಆಯೋಜಕರ ಕನಸಿಗೆ ತಕ್ಕಂತೆ ಪ್ರೇಕ್ಷಕರ ಮನಸಿಗೆ ನೀಡುವಂಥ ಸೂತ್ರಧರನ ಪಾತ್ರವಹಿಸಬೇಕಾಗುತ್ತದೆ.

ಅದರೆ, ಯಾವುದೇ ಶೋ ಇದ್ದರೂ ಅದರಲ್ಲಿ ನಮ್ಮತನವಿರಬೇಕು. ಶೋಗೆ ತಕ್ಕ ಹಾವಭಾವ, ವೇಷ ಭೂಷಣ ಜೊತೆಗೆ ನಮ್ಮದೇ ಆದ ಮ್ಯಾನರಿಸಂ ಅಥವಾ ಶೈಲಿ ಬೆಳೆಸಿಕೊಳ್ಳುವುದು ಉತ್ತಮ. ಇದರಿಂದಲೆ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯ.

ವೈವಿಧ್ಯಮಯ ಶೋಗಳ ನಿರೂಪಕ

ವೈವಿಧ್ಯಮಯ ಶೋಗಳ ನಿರೂಪಕ

ಕಾರ್ಪೋರೇಟ್ ಕಾರ್ಯಕ್ರಮಗಳು, ಕ್ರೀಡೆಯಲ್ಲಿ ಐಪಿಲ್, ಕೆಪಿಎಲ್, ಚಾಂಪಿಯನ್ಸ್ ಲೀಗ್, ಟಿ20 ವಿಶ್ವಕಪ್ ಕಾರ್ಯಕ್ರಮ, ಕಿಂಗ್ ಫಿಷರ್ ಫ್ಯಾಷನ್ ಶೋಗಳು, ಮ್ಯಾಕ್ಸ್ ಮಿಸ್ ಬೆಂಗಳೂರು, ಬಾಂಬ್ ಸಿಂಹ್ಲೇರ್ ಟೂರ್, ಎಆರ್ ರೆಹಮಾನ್ 3ಡಿ ಟೂರ್, ಟಿವಿ ಶೋ, ರೇಡಿಯೋ ಶೋಗಳನ್ನು ನಡೆಸಿಕೊಟ್ಟಿದ್ದಾರೆ.

ಐಬಿಎಂ, ಐಟಿಸಿ, ರಿಲೆಯನ್ಸ್, ಸ್ಯಾಮ್ ಸಂಗ್, ಟೈಟಾನ್, ಲಾಕ್ಮೆ, ಬಿರ್ಲಾ, ವೋಡಾಫೋನ್, ಏರ್ ಟೆಲ್, ಜೀ ನೆಟ್ವರ್ಕ್, ತನಿಷ್ಕ್, ಸೋನಾಟಾ, ಬಕಾರ್ಡಿ, ಕಿಂಗ್ ಫಿಷರ್, ಗೋಲ್ಡ್ ಮನ್ ಸಾಚ್ಸ್ ಸೇರಿದಂತೆ ಅನೇಕ ಕಂಪನಿಗಳ ಕಾರ್ಯಕ್ರಮಕ್ಕೆ ರಿಯಾಜ್ ನಿರೂಪಕರಾಗಿದ್ದರು.

ರಿಯಾಜ್ ಬಾಷಾ ಸಣ್ಣ ಝಲಕ್ ಇಲ್ಲಿದೆ

ರಿಯಾಜ್ ಬಾಷಾ ಪ್ರತಿಭೆಯ ಸಣ್ಣ ಝಲಕ್ ಇಲ್ಲಿದೆ ನೋಡಿ

ವಾಯ್ಸ್ ಓವರ್ ನಲ್ಲೂ ಪ್ರಾವಿಣ್ಯತೆ

ವಾಯ್ಸ್ ಓವರ್ ನಲ್ಲೂ ಪ್ರಾವಿಣ್ಯತೆ ಪಡೆದಿರುವ ರಿಯಾಜ್ ರನ್ನು ಸಂಪರ್ಕಿಸಲು ಅವರ ವೆಬ್ ತಾಣಕ್ಕೆ ಭೇಟಿ ಕೊಡಿ
ಇಲ್ಲವೇ ಫೇಸ್ ಬುಕ್
ಟ್ವಿಟ್ಟರ್ ನಲ್ಲಿ ಹಿಂಬಾಲಿಸಿ

English summary
Meet Riaz Basha, Compere, Dreamer, Audience Engagement Specialist and above all He is Namma Bengaluru's proud son. With over 550 shows, more than 200,000 corporate employees, 10,000 families entertained so far to his repertoire, Riaz has engaged audiences in India and around the world over the past 12 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X