ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಣ್ಣು ಕುಟುಂಬದ ಕಣ್ಣು: ಇದು ಆಟೋ ಹಿಂದಿನ ಬರಹವಲ್ಲ!

By Mahesh
|
Google Oneindia Kannada News

ಬೆಂಗಳೂರು, ಮಾ.16: 'ಹೆಣ್ಣು ಕುಟುಂಬದ ಕಣ್ಣು' ಎಂಬುದು ಆಟೋ ರಿಕ್ಷಾ ಹಿಂದಿನ ಬರಹವಲ್ಲ ಬದಲಿಗೆ ಬೆಂಗಳೂರಿನ ಮಹಿಳಾ ಆಟೋರಿಕ್ಷಾ ಚಾಲಕಿಯ ಜೀವನಗಾಥೆಯಾಗಿದೆ. ಮಹಿಳಾ ದಿನಾಚರಣೆ ಸಂಭ್ರಮ ಮುಗಿದಿರಬಹುದು. ಅದರೆ, ಮಹಿಳೆಯರ ಛಲ, ಬಲ, ಧೈರ್ಯದ ಬಗ್ಗೆ ಬರೆಯಲು ವಿಶೇಷ ದಿನವೇನು ಬೇಕಿಲ್ಲ.ಕುಟುಂಬ ನಿರ್ವಹಣೆ, ಮಗಳ ವಿದ್ಯಾಭ್ಯಾಸಕ್ಕಾಗಿ ರಿಕ್ಷಾ ಚಾಲಕಿಯಾದ ಗಿರಿಜಾ ಅವರು ಒನ್ ಇಂಡಿಯಾ ಪ್ರತಿನಿಧಿಗೆ ನೀಡಿದ ಚುಟುಕು ಸಂದರ್ಶನದ ಸಾರಾಂಶ ಇಲ್ಲಿದೆ...

35 ವರ್ಷ ವಯಸ್ಸಿನ ಗಿರಿಜಾ ತನ್ನ ಕುಟುಂಬ ನಿರ್ವಹಣೆಗಾಗಿ ಆಟೋರಿಕ್ಷಾ ಚಾಲಕಿಯಾಗಿ ಯಶಸ್ವಿಯಾದ ಕಥೆ ಇದು. 9 ವರ್ಷ ವಯಸ್ಸಿನ ಹೆಣ್ಣು ಮಗಳನ್ನು ಹೊಂದಿರುವ ಗಿರಿಜಾ ಅವರು ಐಟಿ ರಾಜಧಾನಿ ಬೆಂಗಳೂರಿನಲ್ಲಿ ನಿರ್ಭೀತಿಯಿಂದ ಆಟೋ ಚಲಾಯಿಸುತ್ತಿದ್ದಾರೆ. ಪುರುಷ ಪ್ರಧಾನ ಕ್ಷೇತ್ರವಾದ ವಾಹನ ಚಾಲನೆಯಲ್ಲಿ ಎಲ್ಲಾ ಕಷ್ಟಗಳನ್ನು ಬದಿಗೊತ್ತಿ ಧೈರ್ಯವಾಗಿ ದಿನನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.

ಏನು ವಿಶೇಷ: ಬೆಂಗಳೂರಿನಲ್ಲಿ ಚಾಲಕಿಯರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ನಮ್ಮ ಮೆಟ್ರೋನಿಂದ ಹಿಡಿದು ಬಿಎಂಟಿಸಿ ತನಕ ಮಹಿಳಾ ಚಾಲಕಿಯರು ಸಿಗುತ್ತಾರೆ. ಇನ್ನೂ ಪಿಂಕ್ ಟ್ಯಾಕ್ಸಿಗಳು ಬಂದಿಲ್ಲವಾದ್ದರಿಂದ ಟ್ಯಾಕ್ಸಿ, ಕ್ಯಾಬ್ ಗಳಲ್ಲಿ ಚಾಲಕಿಯರ ಸಂಖ್ಯೆ ಹೆಚ್ಚಾಗಿಲ್ಲ.

Meet Girija, an auto-rickshaw driver in Bengaluru and her family's hero

ಐಟಿ ಸಿಟಿಯಲ್ಲಿ ಸಾಫ್ಟ್ ವೇರ್ ಸಂಸ್ಥೆ ಉದ್ಯೋಗಿಗಳಿಗೂ ಆಟೋರಿಕ್ಷಾ ಚಾಲಕರಿಗೂ ಸದಾ ಕಾಲ ಒಂದಲ್ಲ ಒಂದು ವಿಷ್ಯಕ್ಕೆ ಗಲಾಟೆ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಮಹಿಳಾ ಟೆಕ್ಕಿಗಳು ಮುಖ ಸಿಂಡರಿಸಿಕೊಂಡೇ ಆಟೋ ಹತ್ತುತ್ತಾರೆ. ಇಂಥ ಸಂದರ್ಭದಲ್ಲಿ ಗಿರಿಜಾ ಅವರು ಆಟೋಚಾಲಕಿಯಾಗಿ ಯಶಸ್ವಿಯಾಗಿದ್ದಾರೆ.

ಸ್ವಂತ ಆಟೋರಿಕ್ಷಾ ಕನಸು ನನಸು: ಬನಶಂಕರಿಯ ಜರಗನಹಳ್ಳಿ ನಿವಾಸಿಯಾದ ಗಿರಿಜಾ ಅವರು ತಮ್ಮದೇ ಆದ ಸ್ವಂತ ಎಲ್ ಪಿಜಿಯಿಂದ ಓಡುವ ಆಟೋರಿಕ್ಷಾವನ್ನು ಖರೀದಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಾಡಿಗೆಗೆ ಆಟೋ ಓಡಿಸಿದ ಅನುಭವವಿದೆ.

ಇದು ಇನ್ನೂ ನನ್ನ ಆಟೋರಿಕ್ಷಾವಲ್ಲ. ಬ್ಯಾಂಕಿನಿಂದ ಸಾಲ ಪಡೆದಿದ್ದೇನೆ. ಆದಷ್ಟು ಬೇಗ ಸಾಲ ತೀರಿಸುತ್ತೇನೆ ಎಂದಿದ್ದಾರೆ. ದಿನವೊಂದಕ್ಕೆ 500 ರು ದುಡಿಯುವ ಗಿರಿಜಾ ಅವರು ದಿನದ ದುಡಿಮೆ ಹೆಚ್ಚುಕಮ್ಮಿಯಾಗುವ ಸಾಧ್ಯತೆಯಿದೆ ಎಂದರು.

ಪತಿ ಬೆಂಬಲ: ನನ್ನ ಗಂಡ ರಮೇಶ್ ವೆಲ್ಡಿಂಗ್ ಕೆಲಸ ಮಾಡುತ್ತಾರೆ. ನನ್ನ ಮಗಳು ಕೀರ್ತನಾ ಜೆಪಿ ನಗರದ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದಾಳೆ. ಕುಟುಂಬ ನಿರ್ವಹಣೆಗಾಗಿ ನಾನು ನಿತ್ಯ ಆಟೋ ಓಡಿಸುವುದು ಅನಿವಾರ್ಯ ಎಂದರು.

10ನೇ ಕ್ಲಾಸ್ ತನಕ ಓದಿರುವ ಗಿರಿಜಾ ಅವರಿಗೆ ತಮ್ಮ ಮಗಳು ಉತ್ತಮ ವಿದ್ಯಾಭ್ಯಾಸ ಹೊಂದುವ ತನಕ ಆಟೋರಿಕ್ಷಾ ಓಡಿಸುವುದನ್ನು ಮುಂದುವರೆಸುತ್ತೇನೆ ಎಂದಿದ್ದಾರೆ. ಅಷ್ಟರಲ್ಲಿ ಯಾರೋ ಪ್ಯಾಸೆಂಜರ್ ಸಿಕ್ಕಿದ್ದರಿಂದ ಮಾರ್ಚ್ ತಿಂಗಳ ಮಧ್ಯಾಹ್ನದ ಬಿಸಿಲಿನಲ್ಲಿ ನಿಂತಿದ್ದ ಗಿರಿಜಾ ಅವರನ್ನು ಬೀಳ್ಕೊಟ್ಟ ನಮ್ಮ ಪ್ರತಿನಿಧಿ ಜಯನಗರ ನಾಲ್ಕನೇ ಬ್ಲಾಕಿನಿಂದ ನಮ್ಮ ಸೌತ್ ಎಂಡ್ ಬಳಿ ನಮ್ಮ ಕಚೇರಿ ಬಂದು ಹೇಳಿದ್ದಿಷ್ಟು: ಭಾರತ ಬದಲಾಗುತ್ತಿದೆ.. ಹೆಣ್ಮಕ್ಕಳೇ ಸ್ಟ್ರಾಂಗೂ ಗುರು..

English summary
The International Women's Day might have just gone but there is no shortage of the occasion to celebrate the heroes in our womenfolk. Namma Bengaluru's auto-rickshaw driver Girija is one of them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X