ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಸ್ಟರಿ ಟಿವಿ18ಯಲ್ಲಿ ವೀಕ್ಷಿಸಿ ಬೆಂಗಳೂರಿನ ಜ್ಯೂಸ್ ರಾಜಾ ಕಥೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 2: ಭಾರತೀಯರು ಪ್ರತಿ ವರ್ಷ ಅಂದಾಜು 40% ಆಹಾರವನ್ನು ವ್ಯರ್ಥವಾಗಿ ಎಸೆಯುತ್ತಾರೆ. ಇದು ಒಂದು ವರ್ಷದಲ್ಲಿ 6.7 ಕೋಟಿ ಟನ್ ಕಸಕ್ಕೆ ಎಸೆದ ಹಾಗೆ ಎಂದು ಭಾವಿಸಬಹುದು. ಇದು ನಿಮಗೆ ಆಘಾತ ನೀಡಿದರೆ, ಚಿಂತೆ ಮಾಡಬೇಡಿ! ಯಾಕೆಂದರೆ ನಮ್ಮ ಬೆಂಗಳೂರಿನಲ್ಲಿ ಒಬ್ಬರು ಶೂನ್ಯ ತ್ಯಾಜ್ಯದ ಹೀರೋ ಇದ್ದಾರೆ.

ಈ ಆನಂದ್‌ ರಾಜ್‌ ಜ್ಯೂಸ್ ರಾಜಾ ಎಂದೇ ಹೆಸರಾಗಿದ್ದಾರೆ. ಈ ಸೋಮವಾರ ರಾತ್ರಿ 8 ಗಂಟೆಗೆ HistoryTV18 ಟ್ಯೂನ್ ಮಾಡಿ ಮತ್ತು ಆನಂದ್‌ ಅವರ ಬಗ್ಗೆ 'OMG! Yeh Mera India' ದಲ್ಲಿ ವೀಕ್ಷಿಸಬಹುದು.

ಈ ಮಾಜಿ ರೇಡಿಯೋ ಜಾಕಿ ತನ್ನ ಜನಪ್ರಿಯ ಜ್ಯೂಸ್ ಶಾಪ್‌ನಲ್ಲಿ ಹಣ್ಣಿನ ಜ್ಯೂಸ್ ಅನ್ನು ಅವುಗಳ ಚಿಪ್ಪಿನಲ್ಲೇ ಒದಗಿಸುವ ಅಪರೂಪದ ಕಲ್ಪನೆಯನ್ನು ಸಾಕಾರಗೊಳಿಸಿದ್ದು, ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ಫೂರ್ತಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಹದಿಮೂರು ವರ್ಷಗಳವರೆಗೆ ಆರ್‌ಜೆ ಆಗಿ ಕೆಲಸ ಮಾಡಿದ್ದ ಆನಂದ್‌ ರಾಜ್‌, ತನ್ನ ತಂದೆ ನಡೆಸುತ್ತಿದ್ದ ಜ್ಯೂಸ್ ಶಾಪ್‌ 'ಈಟ್‌ ರಾಜಾ' ಅನ್ನು ವಹಿಸಿಕೊಂಡರು. ಅವರ ವಿಶಿಷ್ಟ ಕಾನ್ಸೆಪ್ಟ್‌ನಿಂದ ಶಾಪ್‌ ಹೆಸರಾಯಿತು. ಅತ್ಯಂತ ಜನಪ್ರಿಯ ಪರಿಸರ ಸ್ನೇಹಿ ಕೆಫೆಯಾಗಿ ಇದು ಮಾರ್ಪಟ್ಟಿತು.

Meet Bengalurus Juice Raja, the zero-waste hero on HistoryTV18’s ‘OMG! YEH MERA INDIA’

ರುಚಿಕರವಾದ ಜ್ಯೂಸ್ ಅನ್ನು ಹೀರಲು ನೂರಾರು ಜನರು ನಿತ್ಯವೂ ಇಲ್ಲಿಗೆ ಆಗಮಿಸುತ್ತಾರೆ. ಅಷ್ಟೇ ಅಲ್ಲ, ಇಲ್ಲಿ ಗ್ರಾಹಕರಿಗೆ ಆತ್ಮತೃಪ್ತಿಯೂ ಆಗುತ್ತದೆ. ರುಚಿಕರವಾದ 99 ವಿಧದ ಜ್ಯೂಸ್‌ ಅನ್ನು ತಯಾರಿಸುವ ಇವರು ಬಾಳೆಹಣ್ಣು, ಕ್ಯಾಪ್ಸಿಕಂ, ಕಲ್ಲಂಗಡಿ, ಕಿತ್ತಳೆ ಮತ್ತು ಇತರ ಹಲವು ವಿಧದ ಹಣ್ಣಿನ ಚಿಪ್ಪಿನಲ್ಲೇ ಜ್ಯೂಸ್ ಅನ್ನು ಗ್ರಾಹಕರಿಗೆ ಒದಗಿಸುತ್ತಾರೆ. ಈ ಮೂಲಕ ಇವರು ತ್ಯಾಜ್ಯವನ್ನೂ ಕಡಿಮೆ ಮಾಡುತ್ತಾರೆ.

ಬಿರ್ಯಾನಿ ಇಷ್ಟವೇ, ಉತ್ತರಹಳ್ಳಿಯ ದಿಂಡಿಗಲ್ ತಲಪ್ಪಾಕಟ್ಟಿಗೆ ಬನ್ನಿ ಬಿರ್ಯಾನಿ ಇಷ್ಟವೇ, ಉತ್ತರಹಳ್ಳಿಯ ದಿಂಡಿಗಲ್ ತಲಪ್ಪಾಕಟ್ಟಿಗೆ ಬನ್ನಿ

Recommended Video

ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ಏನ್ ಇದೆ ಗೊತ್ತಾ!! | Oneindia Kannada

ಜ್ಯೂಸ್‌ನ ತ್ಯಾಜ್ಯವನ್ನು ಬಳಸಿ ನಗರದಾದ್ಯಂತ ಜಾನುವಾರುಗಳಿಗೆ ಪೌಷ್ಠಿಕಾಂಶವನ್ನೂ ಒದಗಿಸುತ್ತಾರೆ. ಉಳಿದ ಹಣ್ಣಿನ ಭಾಗಗಳನ್ನು ಬಳಸಿ ಜೈವಿಕ ಕಿಣ್ವಗಳ ಮೂಲಕ ನೈಸರ್ಗಿಕ ಸ್ವಚ್ಛತಾ ದ್ರಾವಣವನ್ನು ತಯಾರಿಸುತ್ತಾರೆ. ಜ್ಯೂಸ್‌ ಅನ್ನು ಗ್ರಾಹಕರಿಗೆ ಒದಗಿಸಲು ಗ್ಲಾಸ್‌ಗಳನ್ನು ಬಳಸದೇ, ಜ್ಯೂಸ್ ರಾಜಾ ಪ್ರತಿ ವರ್ಷ ಅಂದಾಜು 54,750 ಲೀಟರ್ ನೀರನ್ನು ಉಳಿತಾಯ ಮಾಡುತ್ತಾರೆ!

English summary
Meet Bengaluru's Juice Raja, the zero-waste hero on HistoryTV18’s ‘OMG! YEH MERA INDIA’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X