ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಬಡ ಮಕ್ಕಳಿಗಾಗಿ 300 ಕೋಟಿ ಮೌಲ್ಯದ ಆಸ್ತಿ ದಾನ ಮಾಡಿದ ಮಹಿಳೆ

|
Google Oneindia Kannada News

ಬೆಂಗಳೂರು, ಜನವರಿ 02: ನಗರದ ವಾಣಿಜ್ಯ ಪ್ರದೇಶದಲ್ಲಿ ಸ್ಥಿತವಾಗಿರುವ, ಒಂದು ಕಾಲದಲ್ಲಿ ಚಿತ್ರರಂಗದವರ ಮೆಚ್ಚಿನ ಹೊಟೆಲ್ ಆಗಿದ್ದ ಲಕ್ಷ್ಮಿ ಹೋಟೆಲ್ ಇನ್ನು ಮುಂದೆ 'ಲಕ್ಷ್ಮಿ ಮಕ್ಕಳ ಆರೋಗ್ಯ ಕೇಂದ್ರ'ವಾಗಿ ಬದಲಾಗಲಿದೆ.

ಹೌದು, ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿ ಹಲವು ನಟರಿಗೆ ಅಚ್ಚು-ಮೆಚ್ಚಿನ ಹೊಟೆಲ್ ಆಗಿದ್ದ ಲಕ್ಷ್ಮಿ ಹೊಟೆಲ್ ಅನ್ನು ಅದರ ಮಾಲಕಿ ಮೀರಾ ನಾಯ್ಡು ಅವರು ಬಡ ಮಕ್ಕಳಿಗಾಗಿ ದಾನ ಮಾಡಿದ್ದಾರೆ.

ಎಂಬಿಎ ಪದವೀಧರ ದಂಪತಿಗಳ ರಸ್ತೆ ಬದಿ ಕ್ಯಾಂಟೀನ್ ಎಂಬಿಎ ಪದವೀಧರ ದಂಪತಿಗಳ ರಸ್ತೆ ಬದಿ ಕ್ಯಾಂಟೀನ್

ನಗರದ ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಗಾಂಧಿ ನಗರದಲ್ಲಿರುವ ಈ ಹೋಟೆಲ್‌ 300 ಕೋಟಿಗೂ ಹೆಚ್ಚಿನ ಬೆಲೆ ಬಾಳುತ್ತದೆ. ಈಗಾಗಲೇ ಹಲವರು 300 ಕೋಟಿ ಕೊಟ್ಟು ಹೋಟೆಲ್ ಖರೀದಿಸುವುದಾಗಿ ಹೇಳಿದ್ದರಂತೆ ಆದರೆ ಮೀರಾ ನಾಯ್ಡು ಅವರು ಈ ಹೋಟೆಲ್ ಅನ್ನು ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗಾಗಿ ದಾನ ಮಾಡಿದ್ದಾರೆ.

Meera Naidu Give Away 300 Crore Worth Property For Poor Children

ಕ್ಯಾನ್ಸರ್ ಚಿಕಿತ್ಸೆಗಾಗಿ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವವರು ತಿಂಗಳಾನುಗಟ್ಟಲೆ ನಗರದಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ. ಅದು ಅವರಿಗೆ ತ್ರಾಸದಾಯಕ, ಹಾಗಾಗಿ ಅಂತಹಾ ಬಡ ಮಕ್ಕಳಿಗೆ ಅವರ ಪೋಷಕರಿಗೆ ಉಚಿತವಾಗಿ ಉಳಿದುಕೊಳ್ಳುವ ವ್ಯವಸ್ಥೆ 'ಲಕ್ಷ್ಮಿ ಮಕ್ಕಳ ಆರೋಗ್ಯ ಕೇಂದ್ರ'ದಲ್ಲಿ ಇದೆ. ಇಲ್ಲಿಯೇ ಚಿಕಿತ್ಸಾ ಕೇಂದ್ರವೂ ಇದೆ.

ಬಡವರಿಗೆ ಉಚಿತವಾಗಿ ಕ್ಯಾನ್ಸರ್ ಚಿಕಿತ್ಸೆ ನೀಡುತ್ತಿರುವ ಶಂಕರ್ ಆಸ್ಪತ್ರೆಗೆ ಈ ಹೋಟೆಲ್ ಅನ್ನು ದಾನವಾಗಿ ಕೊಟ್ಟಿರುವ ಮೀರಾ ನಾಯ್ಡು, 'ಈ ಹೋಟೆಲ್ ನಿರ್ಮಿಸಿದ ಪತಿ ಆರ್.ಶ್ರೀನಿವಾಸ ನಾಯ್ಡು ಅವರಿಗೆ ನಿಜವಾದ ಗೌರವ' ಎಂದಿದ್ದಾರೆ.

ಪೊಲೀಸ್ ಅಧಿಕಾರಿ ಮಾನವೀಯತೆ; ವಿಡಿಯೋ ವೈರಲ್ಪೊಲೀಸ್ ಅಧಿಕಾರಿ ಮಾನವೀಯತೆ; ವಿಡಿಯೋ ವೈರಲ್

ಪತಿ ಶ್ರೀನಿವಾಸ್ ನಾಯ್ಡು ಅವರು ಬಹಳ ಕಷ್ಟಪಟ್ಟು ಈ ಹೋಟೆಲ್ ಕಟ್ಟಿಸಿದ್ದರು. ಆದರೆ ಅವರ ಕಾಲಾನಂತರ ಹೋಟೆಲ್ ಬಗೆಗಿನ ಆದ್ಯತೆಗಳು ಬದಲಾದವು, ಹಾಗಾಗಿ ಅವರ ಗೌರವಾರ್ತ ಈ ಹೋಟೆಲ್ ಅನ್ನು ಬಡವರಿಗೆ ದಾನ ಮಾಡುತ್ತಿದ್ದೇನೆ' ಎಂದಿದ್ದಾರೆ.

ಮೂರು ಅಂತಸ್ತಿನ ಈ ಹೋಟೆಲ್ ನಲ್ಲಿ 32 ಕೊಠಡಿಗಳಿವೆ. ಪ್ರತಿ ಅಂತಸ್ತಿನಲ್ಲಿಯೂ ಅಡುಗೆ ಕೋಣೆ ನಿರ್ಮಿಸಲಾಗಿದೆ. ಚಿಕಿತ್ಸೆಗೆ ಬರುವ ಮಕ್ಕಳು ಮತ್ತು ಅವರ ಪೋಷಕರು ಉಚಿತವಾಗಿ ಈ ಹೋಟೆಲ್‌ನಲ್ಲಿ ಉಳಿದುಕೊಳ್ಳಬಹುದು ಮತ್ತು ಇಲ್ಲಿಯೇ ಇರುವ ಚಿಕಿತ್ಸಾ ಕೇಂದ್ರದಲ್ಲಿ ಉಚಿತ ಚಿಕಿತ್ಸೆಯನ್ನೂ ಪಡೆಯಬಹುದು.

English summary
Meera Naidu give away 300 crore worth Lakshmi Hotel for poor children treatment. Hotel was in Bengaluru's Gandhi Nagar its market value is 300 crore rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X