ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆತ್ತಲೆ ವಿಡಿಯೋ ಜಾಲ: ವೈದ್ಯ ವಿದ್ಯಾರ್ಥಿ ಸಾವಿಗೆ ಕಾರಣವಾದ ವಂಚಕ ಅಂದರ್

|
Google Oneindia Kannada News

ಬೆಂಗಳೂರು, ಜ. 18: ಮರ್ಯಾದೆಗೆ ಅಂಜಿ ಕೆಂಗೇರಿ- ಹೆಜ್ಜಾಲ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ 25 ವರ್ಷದ ವೈದ್ಯನ ಸಾವಿಗೆ ಬೆಂಗಳೂರು ಸಿಟಿ ರೈಲ್ವೆ ಪೊಲೀಸರು ನ್ಯಾಯ ಕೊಡಿಸಿದ್ದಾರೆ. ಆದರೆ ಮಗನನ್ನು ಕಳೆದುಕೊಂಡ ನೋವು, ಸಮಾಜದ ಎದುರು ಬದುಕಲಾಗದೇ ಮೃತ ವೈದ್ಯನ ಹೆತ್ತವರು ಮನೆಯನ್ನೇ ಮಾರಿ ಜಾಗ ಖಾಲಿ ಮಾಡುತ್ತಿದ್ದಾರೆ.

ಕೆಂಗೇರಿ ಹೆಜ್ಜಾಲ ರೈಲು ಮಾರ್ಗದಲ್ಲಿ 25 ವರ್ಷ ವಯಸ್ಸಿನ ಯುವಕನ ಮೃತದೇಹ ಸಿಕ್ಕಿತ್ತು. ಪರಿಶೀಲನೆ ನಡೆಸಿದಾಗ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ್ದ ಎಂಬಿಬಿಎಸ್ ವಿದ್ಯಾರ್ಥಿ ಎಂಬ ವಿಚಾರ ಬಯಲಾಗಿತ್ತು. ಈ ಕುರಿತು ಬೆಂಗಳೂರು ಸಿಟಿ ರೈಲ್ವೇ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದ ತನಿಖೆ ನಡೆಸಿದಾಗ, ವೈದ್ಯ ಒಂದು ಎಡವಟ್ಟು ಮಾಡಿಕೊಂಡಿದ್ದ. ನ್ಯೂಡ್ ಕಾಲ್ ಆಸೆಗೆ ಬಿದ್ದಿದ್ದ ಈ ವೈದ್ಯ ವಿದ್ಯಾರ್ಥಿ ಯನ್ನೇ ಸೈಬರ್ ವಂಚಕನೊಬ್ಬ ಬೆತ್ತಲೆ ಮಾಡಿ ವಿಡಿಯೋ ಮಾಡಿದ್ದ. ಯುವತಿ ಸೋಗಿನಲ್ಲಿ ಕರೆ ಮಾಡಿದ್ದ ವೈದ್ಯ ವಿದ್ಯಾರ್ಥಿಯ ಬೆತ್ತಲೆ ವಿಡಿಯೋ ಮಾಡಿಕೊಂಡಿದ್ದ ಸೈಬರ್ ವಂಚಕ ಹಣ ನೀಡುವಂತೆ ಪೀಡಿಸಿದ್ದ. ಆರಂಭದಲ್ಲಿ ಒಂದಷ್ಟು ಹಣ ಪಾವತಿಸಿದ್ದ ವಿದ್ಯಾರ್ಥಿ ಆ ಬಳಿಕ ನಿರಾಕರಣೆ ಮಾಡಿದ್ದ. ಅಂತಿಮವಾಗಿ 67 ಸಾವಿರ ರೂ. ಹಣ ನೀಡದಿದ್ದರೆ ನಿನ್ನ ವಿಡಿಯೋ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದ. ಹಣ ನೀಡದ ಕಾರಣ ವೈದ್ಯನ ಸಂಪರ್ಕ ಸಂಖ್ಯೆ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಬೆತ್ತಲೆ ವಿಡಿಯೋ ಬಿಡುಗಡೆ ಆಗಿತ್ತು.

Bengaluru: Medical Student Commits Suicide After Falling Into a Naked Video Network

ಇದರಿಂದ ಮರ್ಯಾದೆಗೆ ಅಂಜಿ ಕೆಂಗೇರಿ- ಹೆಜ್ಜಾಲ ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೂ ಮುನ್ನ ತನ್ನ ಐಪೋನ್‌ನಲ್ಲಿ ಸಾವಿನ ಎಲ್ಲಾ ವಿಚಾರವನ್ನು ಬರೆದಿಟ್ಟಿದ್ದ. ಐಪೋನ್ ಕರೆ ಜಾಡು ಹಿಡಿದು ತನಿಖೆ ನಡೆಸಿದ ಸಿಟಿ ರೈಲ್ವೇ ಪೊಲೀಸರು, ಭೋಪಾಲ್‌ನಲ್ಲಿರುವ ವಂಚಕನನ್ನು ಬಂಧಿಸಿದ್ದಾರೆ. ಆತನನ್ನು ಬಂಧಿಸುವ ವೇಳೆ ಆತನ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಭಯ ಬಿದ್ದು ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

Bengaluru: Medical Student Commits Suicide After Falling Into a Naked Video Network

ಬದುಕಿಗೆ ಆಧಾರ ಸ್ಥಂಭವಾಗಿದ್ದ ಮಗ ಇಲ್ಲ. ಒಂದೆಡೆ ಮಗನಿಲ್ಲದ ಸೂತಕದ ಛಾಯೆ. ಏನೂ ಮಾಡದ ತಪ್ಪಿಗೆ ಸಮಾಜದ ಎದುರು ತಲೆ ಬಾಗುವಂಥ ಕಣ್ಣೀರ ಜೀವನ. ಇದರಿಂದ ಹೊರ ಬರಲಾರದೇ ಇರುವ ಮನೆಯನ್ನೇ ಮಾರಿಕೊಂಡು ಹೊರ ಹೋಗುವ ಮಟ್ಟಿಗೆ ಮೃತ ವೈದ್ಯನ ಕುಟಂಬ ಮುಂದಾಗಿದೆ. ಅದೊಂದು ಸೈಬರ್ ವಂಚನೆ ಎಂದು ಭಾವಿಸಿ ಪರಿಸ್ಥಿತಿ ಎದುರಿಸಬೇಕಿದ್ದ ವೈದ್ಯ ವಿದ್ಯಾರ್ಥಿ ಸೈಬರ್ ಕ್ರಿಮಿನಲ್‌ಗಳ ಜಾಲಕ್ಕೆ ಬಿದ್ದು ಜೀವವೇ ಕಳೆದುಕೊಂಡಿದ್ದು ವಿಪರ್ಯಾಸ. ಇಂತಹ ಸಂದರ್ಭ ಎದುರಾದರೂ ಧೈರ್ಯವಾಗಿ ಎದುರಿಸಬೇಕು. ಒಂದು ವೇಳೆ ತಪ್ಪು ನಡೆದು ಹೋಗಿದ್ದರೂ ಅದೇನು ಕ್ಷಮಿಸಲಾರ್ಹದಂಥ ಅಪರಾಧವೇನಲ್ಲವಲ್ಲ, ಈ ರೀತಿಯ ಸಂದರ್ಭ ಎದುರಾದರೂ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಕೈಗೊಳ್ಳಬಾರದು ಎಂದು ಮನೋವೈದ್ಯ ಡಾ. ಎ. ಶ್ರೀಧರ್ ಸಲಹೆ ಮಾಡಿದ್ದಾರೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.

English summary
Bengaluru: Medical student commits suicide after falling into a naked video network by cyber criminal. City Railway Police station arrest accused in Bhopal. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X