ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯಕೀಯ ಸೀಟು : ರಾಜ್ಯದಲ್ಲೇ ಕನ್ನಡಿಗರಿಗೆ ಅನ್ಯಾಯ!

By Prasad
|
Google Oneindia Kannada News

ಬೆಂಗಳೂರು, ಜುಲೈ 11 : ವೈದ್ಯಕೀಯ ಸೀಟುಗಳಿಗಾಗಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಮಲ್ಲೆಶ್ವರಂ 18ನೇ ಕ್ರಾಸ್ ನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ 13ನೇ ಜುಲೈ ಗುರುವಾರ, ಬೆಳಗ್ಗೆ 10.30ಕ್ಕೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆಯಲ್ಲಿ ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಯುವ ವೈದ್ಯರ ಸಂಘ (ಆರ್) ಕನ್ನಡಿಗರ ಹಕ್ಕಿಗಾಗಿ ಹೋರಾಟ ಮಾಡಲಿದ್ದಾರೆ.

ಕರ್ನಾಟಕ ವೈದ್ಯಕೀಯ ಶಿಕ್ಷಣ ಪ್ರವೇಶ ಶುಲ್ಕ ಶೇ 10ರಷ್ಟು ಹೆಚ್ಚಳಕರ್ನಾಟಕ ವೈದ್ಯಕೀಯ ಶಿಕ್ಷಣ ಪ್ರವೇಶ ಶುಲ್ಕ ಶೇ 10ರಷ್ಟು ಹೆಚ್ಚಳ

ವಿದ್ಯಾರ್ಥಿಗಳೆ, ಪೋಷಕರೆ ಹಾಗೂ ಕನ್ನಡ ಪರ ಕಾಳಜಿ ಉಳ್ಳವರೆ ದಯಮಾಡಿ ಬನ್ನಿ ನಮ್ಮ ಹಕ್ಕಿಗಾಗಿ ಹೋರಾಡೋಣ. ಇಲ್ಲವಾದರೆ ನಿಮ್ಮ ಸರಿ ಸುಮಾರು 1500-2000 ಸೀಟು ಬೇರೆ ರಾಜ್ಯದವರ ಪಾಲಾಗಲಿವೆ ಎಂದು ಪ್ರತಿಭಟನಾಕಾರರು ಕನ್ನಡಿಗರಿಗೆ ಕರೆ ನೀಡಿದ್ದಾರೆ.

ಎಂ.ಬಿ.ಬಿ.ಎಸ್ ಮತ್ತು ಬಿ.ಡಿ.ಎಸ್ ಕೋರ್ಸ್ಗಳಿಗೆ ನೀಟ್ ಪದವಿಪೂರ್ವ ಕೌನ್ಸಿಲಿಂಗ್ ಕರ್ನಾಟಕ ರಾಜ್ಯ ಹಾಗೂ ಇತರ ರಾಜ್ಯಗಳಲ್ಲೂ ಪ್ರಾರಂಭವಾಗಲಿದೆ. ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಎಂ.ಬಿ.ಬಿ.ಎಸ್/ ಬಿ.ಡಿ.ಎಸ್ ಕೋರ್ಸ್ಗೆ, ನೀಟ್ ಅರ್ಹತೆ ಹೊಂದಿದವರು ಭಾರತದಾದ್ಯಂತ ಅರ್ಜಿ ಸಲ್ಲಿಸುವಂತೆ ಕರೆ ನೀಡಿದೆ.

ಇಲ್ಲಿನ ಸಮಸ್ಯೆ ಏನೆಂದರೆ, ಪ್ರಾಧಿಕಾರ ಭಾರತದಾದ್ಯಂತ ಅರ್ಜಿ ಸಲ್ಲಿಸಲು ಕರೆ ನೀಡಿದೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಎಂಬಿಬಿಎಸ್ / ಬಿಡಿಎಸ್ ಕೋರ್ಸ್ಗೆ ಅರ್ಜಿ ಸಲ್ಲಿಸುವಂತೆ ಕೇಳಿದೆ.

ಕರ್ನಾಟಕ ಎಂಬಿಬಿಎಸ್, ಬಿಡಿಎಸ್ ಮೆರಿಟ್ ಪಟ್ಟಿ ಪ್ರಕಟಕರ್ನಾಟಕ ಎಂಬಿಬಿಎಸ್, ಬಿಡಿಎಸ್ ಮೆರಿಟ್ ಪಟ್ಟಿ ಪ್ರಕಟ

ಹೀಗಾದರೆ ಕನ್ನಡಿಗರಿಗೆ ಆಗುವ ಅನ್ಯಾಯವೇನು?

1) ಕರ್ನಾಟಕದ ವಿದ್ಯಾರ್ಥಿಗಳು ತಮ್ಮ ರಾಜ್ಯದಲ್ಲಿ ಸಾವಿರಾರು ಎಂಬಿಬಿಎಸ್ / ಬಿಡಿಎಸ್ ಸ್ಥಾನಗಳನ್ನು ಕಳೆದುಕೊಳ್ಳುತ್ತಾರೆ.

2) ಎಂಬಿಬಿಎಸ್ / ಬಿಡಿಎಸ್ ಮುಗಿದ ಹೊರಗಿನವರು ಸ್ನಾತಕೋತ್ತರ ಕೋರ್ಸ್ (MD/MS/MDS) ಮತ್ತು DM/MCh ಕೋರ್ಸ್ಗಳಿಗೆ ಅರ್ಹರಾಗುತ್ತಾರೆ. ಇದರ ಕಾರಣವಾಗಿ ಕರ್ನಾಟಕ ವಿದ್ಯಾರ್ಥಿಗಳು ಈಗ ತಮ್ಮ ಅವಕಾಶ ಕಳೆದುಕೊಳ್ಳುತ್ತಾರೆ ಮತ್ತು ಭವಿಷ್ಯದಲ್ಲಿ ಕೂಡ ಇದು ಮುಂದುವರಿಯುತ್ತದೆ.

3) ಇದು ಕರ್ನಾಟಕ ರಾಜ್ಯದಲ್ಲಿ ವೈದ್ಯರ ಕೊರತೆಯನ್ನು ಉಂಟುಮಾಡುತ್ತದೆ. ಕರ್ನಾಟಕದಲ್ಲಿ ವೈದ್ಯರ ಜನಸಂಖ್ಯೆ ಕಡಿಮೆ ಇರುವುದರಿಂದ ಕರ್ನಾಟಕ ಜನರನ್ನು ಆರೋಗ್ಯದಿಂದ ವಂಚಿತಗೊಳಿಸಲಾಗುತ್ತದೆ.

4) ವಿದ್ಯಾರ್ಥಿಗಳು ಮತ್ತು ಪಾಲಕರು MBBS/BDS/MD/MS/MDS/DM/Mch ಕೋರ್ಸ್ ಪಡೆಯದಿರುವ ಕಾರಣದಿಂದ ನಿರಾಶೆಗೊಳ್ಳುತ್ತಾರೆ.

5) ಅಂತಿಮವಾಗಿ ಕನ್ನಡಿಗರು ತಮ್ಮ ಹಕ್ಕುಗಳು ಮತ್ತು ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ.

6) ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಯುವ ವೈದ್ಯರ ಸಂಘ (ಕೆ.ಎಂ.ಎಸ್ .ವೈ.ಡಿ.ಎ) (ರಿ) ಈ ಒಂದು ವಿನಂತಿಯನ್ನು ಕೆಇಎ ಮತ್ತು ಸರ್ಕಾರ ಖಾಸಗಿ ಕಾಲೇಜಿನಲ್ಲಿ, ಕರ್ನಾಟಕ ರಾಜ್ಯ ಕೋಟಾವನ್ನು ಸಂಪೂರ್ಣವಾಗಿ ಕನ್ನಡಿಗರಿಗೆ ನೀಡಬೇಕು.

ಈಗಾಗಲೇ ಕನ್ನಡೇತರರಿಗೆ ಅಖಿಲ ಭಾರತ ಕೋಟಾ, ಮ್ಯಾನೇಜ್ಮೆಂಟ್ ಕೋಟಾ ಮತ್ತು NRI ಕೋಟಾದಲ್ಲಿ ಸ್ಥಾನವನ್ನು ನೀಡಿರುತ್ತಾರೆ.

ಈ ವಿಷಯವನ್ನ ತುರ್ತಾಗಿ ಪರಿಗಣಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. ಎಲ್ಲಾ ವೈದ್ಯಕೀಯ / ದಂತ ವೈದ್ಯಕೀಯ ಆಕಾಂಕ್ಷೆಯುಳ್ಳ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಕನ್ನಡಪರ ಹೋರಾಟಗಾರರು ನಮ್ಮ ಪ್ರತಿಭಟನೆಗೆ ಬೆಂಬಲವನ್ನು ನೀಡಬೇಕಾಗಿ ವಿನಂತಿಸುತ್ತೇವೆ.

ಈ ಹೋರಾಟಕ್ಕೆ ಯಶಸ್ಸು ಸಿಗುವುದು ಕನ್ನಡದ ಜನತೆ ಬೀದಿಗಿಳಿದಾಗ. ನಮಗ್ಯಾಕೆ ಎಂದು ಮನೆಯಲ್ಲೇ ಕುಳಿತಿದ್ದರೆ ನಿಮ್ಮ ಮಕ್ಕಳಿಗೆ ಅಥವಾ ನಿಮಗೆ ತಿಳಿದಿರುವ ವಿದ್ಯಾರ್ಥಿಗೆ ಸೀಟು ತಪ್ಪುವ ಸಾಧ್ಯತೆ ಸಹ ಇದೆ. ಹಾಗಾಗಿ ಎದ್ದು ಬನ್ನಿ ಕನ್ನಡದ ಶಕ್ತಿಯನ್ನು ತೋರಿಸೋಣ. ಸರ್ಕಾರವನ್ನು ಎಚ್ಚರಿಸೋಣ. ಇದು ನಿಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ.

ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಯುವ ವೈದ್ಯರ ಸಂಘ (ಆರ್)
ಡಾ. ಭರತ್ ಕುಮಾರ್ - 9535177064 (ಅಧ್ಯಕ್ಷರು).
ಡಾ. ಜಸ್ಫಾಲ್ - 9448139330 (ಪೋಷಕರು).

English summary
Karnataka medical students and Yourth Doctors Association will be protesting against Karnataka Examination Authority in Bengaluru on 13th July. KEA has called for applications from all who have NEET qualified. This would hurt the Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X