ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಂಸ ಪ್ರಿಯರಿಗೆ ಆಘಾತ ನೀಡಿದ ನಮ್ಮ ಮೆಟ್ರೋ!

|
Google Oneindia Kannada News

Recommended Video

ಮೆಟ್ರೋದಲ್ಲಿ ಮಾಂಸ ಒಯ್ಯುವಂತಿಲ್ಲ | Namma Metro

ಬೆಂಗಳೂರು, ಫೆಬ್ರವರಿ 14: ಮಾಂಸ ಪ್ರಿಯರಿಗೆ ನಮ್ಮ ಮೆಟ್ರೋ ಆಘಾತವೊಂದನ್ನು ನೀಡಿದೆ. ಸರಿಯಾಗಿ ಪ್ಯಾಕ್‌ ಮಾಡದ ಯಾವುದೇ ರೀತಿಯ ಮಾಂಸವನ್ನು ಇನ್ಮುಂದೆ ನಮ್ಮ ಮೆಟ್ರೊ ರೈಲಿನಲ್ಲಿ ಒಯ್ಯುವಂತಿಲ್ಲ ಎಂದು ಹೇಳಿದೆ.

ಹೌದು, ಈ ಕುರಿತು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೆಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌) ಆದೇಶ ಮಾಡಿದೆ. ಬೆಂಗಳೂರಿನ ನಮ್ಮ ಮೆಟ್ರೊ ರೈಲಿನಲ್ಲಿ ಮೀನಿನ ಮಾಂಸ ಒಯ್ಯಲು ಭದ್ರತಾ ಸಿಬ್ಬಂದಿ ಬಿಡದಿರುವ ಬಗ್ಗೆ ಪ್ರಯಾಣಿಕ ಪವನ್‌ಕುಮಾರ್ ಎಂಬುವರು ಬಿಎಂಆರ್‌ಸಿಎಲ್‌ಗೆ ಟ್ವಿಟರ್‌ನಲ್ಲಿ ದೂರು ನೀಡಿದ್ದರು.

ಈ ಮೆಟ್ರೋ ನಿಲ್ದಾಣದಿಂದ ಎಲ್ಲೇ ಇಳಿದರೂ ಆಟೋಗೆ 30 ರೂ. ಮಾತ್ರಈ ಮೆಟ್ರೋ ನಿಲ್ದಾಣದಿಂದ ಎಲ್ಲೇ ಇಳಿದರೂ ಆಟೋಗೆ 30 ರೂ. ಮಾತ್ರ

ಮೆಟ್ರೊ ರೈಲಿನಲ್ಲಿ ಯಾವುದೇ ಬಗೆಯ ಮಾಂಸ ತೆಗೆದುಕೊಂಡು ಹೋಗುವುದಕ್ಕೆ ನಿರ್ಬಂಧ ವಿಧಿಸಿ, 2018ರ ರಲ್ಲೇ ಆದೇಶ ಹೊರಡಿಸಲಾಗಿದೆ. ಆದರೆ, ಮಾಂಸವನ್ನು ಸರಿಯಾಗಿ ಪ್ಯಾಕ್‌ ಮಾಡಿದ್ದರೆ, ಅದರಿಂದ ದುರ್ವಾಸನೆ ಬಾರದಂತಿದ್ದರೆ ಅಂತಹ ಮಾಂಸ ಒಯ್ಯಲು ಅಭ್ಯಂತರವಿಲ್ಲ ಎಂದು ಬಿಎಂಆರ್‌ಸಿಎಲ್‌ ಸ್ಪಷ್ಟಪಡಿಸಿದೆ.

Meat Ban In Bengaluru Namma Metro

ಮಾಂಸ ತೆಗೆದುಕೊಂಡ ಹೋಗುವುದರ ವಿಷಯವಾಗಿ ಗುರುವಾರ ಮೆಟ್ರೋ ಭದ್ರತಾ ಸಿಬ್ಬಂದಿಯೊಂದಿಗೆ ಪವನಕುಮಾರ್ ಎಂಬುವರು ವಾಗ್ವಾದ ನಡೆಸಿದ್ದರು. ಈ ವಿಷಯದಲ್ಲಿ ಭದ್ರತಾ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡಿ ಎಂದು ಬಿಎಂಆರ್‌ಸಿಎಲ್‌ಗೆ ಅವರು ಮನವಿ ಮಾಡಿದ್ದಾರೆ.

English summary
Meat Ban In Bengaluru Namma Metro. On Thursday A Passenger named Pavankumar Posted A Tweet to BMRCL About Meat Carrying.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X