• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಆಗಸ್ಟ್ 6ರಂದು 1 ರೂ.ಗೆ ಊಟ

|

ಬೆಂಗಳೂರು, ಆಗಸ್ಟ್ 04 : ಬೆಂಗಳೂರು ನಗರದಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭವಾಗಿ ಮೂರು ವರ್ಷಗಳು ಕಳೆಯುತ್ತಿವೆ. ಆದ್ದರಿಂದ, ಆಗಸ್ಟ್ 6 ರಂದು 1 ರೂ.ಗೆ ಮಧ್ಯಾಹ್ನದ ಊಟ ನೀಡಲಾಗುತ್ತದೆ.

ಜೆಡಿಎಸ್ ನಾಯಕ, 'ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್' ರೂವಾರಿ ಟಿ. ಎ. ಶರವಣ ಈ ಕುರಿತು ಘೋಷಣೆ ಮಾಡಿದ್ದಾರೆ. ಕ್ಯಾಂಟೀನ್‌ನಲ್ಲಿ ಇನ್ನು ಮುಂದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ಸಿಗಲಿದೆ ಎಂದು ಹೇಳಿದ್ದಾರೆ.

ದೇವೇಗೌಡರ ಅಭಿಮಾನಿಯಿಂದ ಮಂಡ್ಯದಲ್ಲಿ ಅಪ್ಪಾಜಿ ಕ್ಯಾಂಟೀನ್

ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಸ್ಯಾನಿಟೈಸರ್, ಸ್ವಚ್ಛತೆ ಹಾಗೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತೇವೆ. ಕ್ಯಾಂಟೀನ್ ಎಂದಿನಂತೆ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಕು.ರಮ್ಯಾ, ಅಪ್ಪಾಜಿ ಬಳಿಕ ಈಗ ಮಂಡ್ಯದಲ್ಲಿ ಬಿಎಸ್‌ವೈ ಕ್ಯಾಂಟೀನ್!

ಅಪ್ಪಾಜಿ ಕ್ಯಾಂಟೀನ್ ಆರಂಭವಾಗಿ 3 ಮೂರು ವರ್ಷಗಳು ಕಳೆದಿವೆ. ಈ ಹಿನ್ನಲೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಆಗಸ್ಟ್ 6 ರಂದು 12ಗಂಟೆಯಿಂದ ಮಧ್ಯಾಹ್ನದ ಊಟವನ್ನು 1 ರೂ.ಗೆ ವಿತರಣೆ ಮಾಡಲಾಗುತ್ತಿದೆ.

ಆಹಾ ಇಡ್ಲಿ ವಡೆ ಸಾಂಬಾರ್, ನಾನೇ ಮಾಡೋ ಬಟ್ಲರ್!

ಬೆಂಗಳೂರಿನ ಹನುಮಂತನಗರದ 50 ಅಡಿ ರಸ್ತೆಯಲ್ಲಿ ಅಪ್ಪಾಜಿ ಕ್ಯಾಂಟೀನ್ ಇದೆ. ಇಲ್ಲಿಯೇ 1 ರೂ.ಗೆ ಊಟ ನೀಡಲಾಗುತ್ತದೆ ಎಂದು ಟಿ. ಎ. ಶರವಣ ಹೇಳಿದ್ದಾರೆ.

English summary
Appaji canteen in Bengaluru completing 3 years. On August 6, 2020 meals will be given for 1 Rs at canteen at Hanumantha Nagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X