• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ವೈದ್ಯೆಯಿಂದ ಪ್ರೊಫೆಸರ್ ಮೇಲೆ ಲೈಂಗಿಕ ಶೋಷಣೆಯ ಆರೋಪ

|

ಬೆಂಗಳೂರು, ಅಕ್ಟೋಬರ್ 25: ಈವರೆಗೆ ಕೇವಲ ರಾಜಕಾರಣಿಗಳು ಹಾಗೂ ಕೆಲ ಚಿತ್ರರಂಗದ ಸೆಲೆಬ್ರಿಟಿಗಳನ್ನು ಸುತ್ತಿಕೊಂಡಿದ್ದ ಮಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿರುದ್ಧದ 'ಮಿಟೂ' ಅಭಿಯಾನ ಇದೀಗ ವೈದ್ಯಕೀಯ ಲೋಕಕ್ಕೂ ಸುತ್ತಿಕೊಂಡಿದ್ದು, ಬೆಂಗಳೂರಿನ ಖ್ಯಾತ ವೈದ್ಯೆಯೊಬ್ಬರು 18 ವರ್ಷಗಳ ಹಿಂದಿನ ತಮ್ಮ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ್ದಾರೆ.

ಮೀಟೂ ಕತೆಗಳ ಬಗ್ಗೆ ದಿಟ್ಟ ಪೊಲೀಸ್ ಅಧಿಕಾರಿ ರೂಪಾ ಮೌದ್ಗಿಲ್ ಪ್ರತಿಕ್ರಿಯೆ

ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸಮುದಾಯ ಆರೋಗ್ಯ ತಜ್ಞೆಯಾಗಿರುವ ಸಿಲ್ವಿಯಾ ಕರ್ಪಗಮ್ 1999-2001ರ ಅವಧಿಯಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿರುವಾಗ ಅಂದಿನ ವಿಭಾಗದ ಮುಖ್ಯಸ್ಥ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದಾರೆ.

ಏನೂ 'ಮಾಡಲಿಲ್ಲ'ವೆಂದರೆ ಎಂಜೆ ಅಕ್ಬರ್ ಏನೂ ಮಾಡಲಿಲ್ಲವೆ?

ಡಾ. ಸೆಲ್ವಿಯಾ ಅವರು ಡಾ ದಾರಾ ಎಸ್ ಅಮರ್ ವಿರುದ್ಧ ಈ ಆರೋಪ ಮಾಡಿದ್ದು, ತಾವು ವಿದ್ಯಾರ್ಥಿಯಾಗಿದ್ದಾಗ ಡಾ ಅಮರ್ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು ಹಾಗೂ ಅಶ್ಲೀಲ ಪದಗಳನ್ನು ಬಳಸಿ ಮಾತನಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಆ ಸಂದರ್ಭದಲ್ಲಿ ನಾನು ನಮ್ಮ ವಿಭಾಗದ ಮುಖ್ಯಸ್ಥರ ವಿರುದ್ಧ ದೂರು ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ ಎಂದಿದ್ದಾರೆ.

ಆ ಪ್ರಾಧ್ಯಾಪಕರ ಅಸಭ್ಯ ವರ್ತನೆ ನಿರಂತರವಾಗಿ ನಡೆಯುತ್ತಿತ್ತು, ಈ ವಿಷಯ ಕಾಲೇಜಿನ ಮುಖ್ಯಸ್ಥರಿಗೆ ಗೊತ್ತಿತ್ತು, ಹೀಗಾಗಿ ಆ ಪ್ರಾಧ್ಯಾಪಕರೊಂದಿಗೆ ಸಹನೆ ಹಾಗೂ ಎಚ್ಚರಿಕೆಯಿಂದ ವರ್ತಿಸುವಂತೆ ತಮಗೆ ಸಲಹೆಗಳನ್ನು ನೀಡಿದ್ದರು. ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಮೇಲಧಿಕಾರಿಗಳಿಗೆ ತಿಳಿಸಿದ ಬಳಿಕ ಈ ಬಗ್ಗೆ ಕಾಲೇಜಿನಲ್ಲಿ ಸಮಿತಿಯೊಂದನ್ನು ರಚಿಸಿ ಆ ನಂತರದಲ್ಲಿ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯದಂತೆ ಮೇಲುಸ್ತುವಾರಿಯನ್ನು ನೋಡಿಕೊಳ್ಳಲಾಯಿತು.

#ಮಿಟೂ: ಹಿರಿಯ ನಟ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ

2017 ಅಕ್ಟೋಬರ್ ನಲ್ಲಿ ಅಮರ್ ವಿರುದ್ಧ ದೂರು ನೀಡಿದರಾದರೂ ಈ ಕುರಿತಂತೆ ಯಾವುದೇ ಕ್ರಮ ಜರುಗಿಸಲಿಲ್ಲ. ಇದೀಗ ಅಂದು ನೀಡಿದ್ದ ದೂರಿನ ಪ್ರತಿಯನ್ನು ಮಾಧ್ಯಮಗಳಿಗೆ ಬಹಿರಂಗ ಪಡಿಸಿದ್ದಾರೆ. ಅಮರ್ ಅವರು ನನ್ನ ಜತೆ ಮಾತ್ರವಲ್ಲದೆ ನನ್ನ ಜತೆ ಇದ್ದ ಹಲವು ವಿದ್ಯಾರ್ಥಿನಿಯರನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು. ಅಶ್ಲೀಲ ಪದಗಳನ್ನು ಬಳಸಿ ಮಾತನಾಡುತ್ತಿದ್ದರು ಎಂದು ದೂರಿದ್ದಾರೆ.

ಅಮರ್ ಅವರು ಒಂದು ಸಲ "ನಿನ್ನ ಮುಖ ಸುಂದರವಾಗಿದೆ. ಆದರೆ ನಿನ್ನ ದೇಹ ನಿನ್ನ ಮುಖಕ್ಕೆ ತಕ್ಕಂತೆ ಇಲ್ಲ" ಎಂದೂ ಕೂಡ ಹೇಳಿದ್ದರಲ್ಲದೆ ಮಹಿಳೆಯರ ಬಗೆಗೆ ಅಸಭ್ಯ ಪದಗಳನ್ನು ಬಳಸಿ ಗುಪ್ತಾಂಗಗಳ ಕುರಿತಂತೆಯೂ ಕೆಲವು ವಿಚಾರಗಳನ್ನು ಹಂಚಿಕೊಂಡು ನನಗೆ ಮುಜುಗರ ಉಂಟುಮಾಡಿದ್ದರು ಎಂದು ದೂರಿನಲ್ಲಿ ಕರ್ಪಗಮ್ ಹೇಳಿಕೊಂಡಿದ್ದಾರೆ.

ರಾಖಿ ಸಾವಂತ್ ವಿರುದ್ಧ 10 ಕೋಟಿಯ ಮಾನನಷ್ಟ ಮೊಕದ್ದಮೆ ಹೂಡಿದ ತನುಶ್ರೀ ದತ್ತಾ

ಈ ಕುರಿತಂತೆ ಸೇಂಟ್ ಜಾನ್ಸ್ ಆಸ್ಪತ್ರೆಯ ಡೀನ್ ಆಗಿರುವ ಡಿಸೋಜಾ ಅವರು ಪ್ರತಿಕ್ರಿಯೆ ನೀಡಿ, ನಾವು ಈ ಪ್ರಕರಣ ಕುರಿತಂತೆ ಆಂತರಿಕ ಸಮಿತಿ ರಚಿಸಿ ಆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಡಾ ಕರ್ಪಗಮ್ ನೀಡಿರುವ ದೂರಿನ ಪರಾಮರ್ಶೆ ನಡೆಸುತ್ತೇವೆ. ಅವರು ಹೆಸರಿಸಿರುವ ವೈದ್ಯರು ಈಗಾಗಲೇ ನಿವೃತ್ತಿ ಹೊಂದಿರುವುದರಿಂದ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬಹುದು ಎಂಬ ಚಿಂತನೆ ನಡೆದಿದೆ ಎಂದಿದ್ದಾರೆ.

ಆದರೆ ಡಾ ಸೆಲ್ವಿಯಾ ನೀಡಿರುವ ಆರೋಪವನ್ನು ತಳ್ಳಿ ಹಾಕಿರುವ ಅಮರ್, ಸುಖಾಸುಮ್ಮನೆ ನನ್ನ ಮೇಲೆ ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಸಾವಿರಾರು ವಿದ್ಯಾರ್ಥಿನಿಯರಿಗೆ ನನ್ನ ವೃತ್ತಿ ಜೀವನದಲ್ಲಿ ಪಾಠ ಮಾಡಿದ್ದೇನೆ. ಆದರೆ ನನ್ನ ಮೇಲೆ ದೂರು ನೀಡಿರುವ ಮೊದಲ ವ್ಯಕ್ತಿ ಇವರೇ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
#Me Too allegation has beem extendes to medical professionals, as St. johns hospital public health expert Dr.Sylvia Karpagam alleged that her dean Dr. Dara Amar extorted during MD course in 1998.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more