• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರನ್ನು ಸ್ವಚ್ಛ, ಸುಂದರವಾಗಿಸಲು ಕೆನರಾ 'ಗ್ರಾಫಿಟಿ' ಅಭಿಯಾನ

|

ಬೆಂಗಳೂರು, ಫೆಬ್ರುವರಿ 9, 2019: ಕೆನರಾ ಎಚ್‍ಎಸ್‍ಬಿಸಿ ಓರಿಯೆಂಟಲ್ ಬ್ಯಾಂಕ್ ಆಪ್ ಕಾಮರ್ಸ್ ಲೈಫ್ ಇನ್ಸೂರೆನ್ಸ್ 'me for my city' ಹೆಸರಿನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆರಂಭಿಸಿತು. ಈ ಕಾರ್ಯಕ್ರಮವು ನಮ್ಮ ನಗರವು ಸ್ವಚ್ಛ ಮತ್ತು ಸುಂದರವಾಗಿರಲು ನೆರವಾಗಲಿದೆ. ಇದರ ಭಾಗವಾಗಿ 135/3, ವಿಜಯು ಆರ್ಕೆಡ್, ಲಾಲ್‍ಬಾಗ್ ರಸ್ತೆ, ಬೆಂಗಳೂರು ಇಲ್ಲಿ ಗ್ರಾಫಿಟಿ ಕಲೆ ನಡೆಯಿತು.

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇಂಥದೊಂದು ಕ್ರಮಕ್ಕೆ ಮುಂದಾಗಿದ್ದು, ದೆಹಲಿ, ಗುರುಗ್ರಾಮ, ಮುಂಬೈ ಮತ್ತು ಪಂಜಾಬ್‍ನ ಮೊಹಾಲಿಯಲ್ಲಿ ಜನನಿಬಿಡ ಸ್ಥಳದ ಗೋಡೆಗಳ ಮೇಲೆ ಗ್ರಾಫಿಟಿ ಕಲೆ ಮೂಡಿಸಿದ ಬಳಿಕ ಇಲ್ಲಿ ಚಾಲನೆ ನೀಡಲಾಗಿದೆ.

ಲಾಲ್ ಬಾಗ್ ನಲ್ಲಿ ಗಾಂಧಿಜೀ ಆತ್ಮಚರಿತ್ರೆಯ ಪುಸ್ತಕಗಳ ವಿತರಣೆ

ಕೆನರಾ ಎಚ್‍ಎಸ್‍ಬಿಸಿ ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಸೂರೆನ್ಸ್ ಈ ನಿಟ್ಟಿನಲ್ಲಿ ಹೆಜ್ಜೆಯನ್ನು ಕೈಗೊಂಡಿದ್ದು, ಒಂದು ಸರಳವಾದ ಚಿತ್ರಣ, ಅಭಿವ್ಯಕ್ತಿಯು ಹೇಗೆ ನಗರವನ್ನು ಸುಂದರವಾಗಿ ಇಡಬಹುದು ಎಂಬ ಪ್ರಜ್ಞೆಯನ್ನು ಜಾಗೃತಗೊಳಿಸಲಿದೆ. ಈ ಕಾರ್ಯಕ್ರಮವು ಮೂಲಕ ನಮ್ಮ ಪರಿಸರವನ್ನು ಹೇಗೆ ಸುಂದರವಾಗಿ ಮತ್ತು ಸ್ವಚ್ಛವಾಗಿ ಇಡಬಹುದು ಎಂಬುದನ್ನು ತೋರಿಸಲಿದೆ. ಕಂಪನಿಯು ಇದರ ಜೊತೆಗೆ ಗ್ರಾಫಿಟಿ ಕಲೆಯನ್ನು ಕೊಚ್ಚಿ ಮತ್ತು ಚೆನ್ನೈನಲ್ಲಿಯೂ ಕೈಗೊಳ್ಳಲಿದೆ.

ಕೆನರಾ ಎಚ್‍ಎಸ್‍ಬಿಸಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಸೂರೆನ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅನುಜ್ ಮಾಥೂರ್ ಅವರು, 'ನಾವು ಈಮೂಲಕ ಸಮಾಜಕ್ಕೆ ಸಣ್ಣ ಕೊಡುಗೆ ನೀಡಲು ಯತ್ನಿಸುತ್ತಿದ್ದು, ಇದಕ್ಕೆ ನಮ್ಮ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು, ನಮ್ಮ ಹೊಣೆಯನ್ನು ಹೆಚ್ಚಿಸಿದ್ದು, ಜೊತೆಗೆ ನಮ್ಮ ಗ್ರಾಹಕರ ಜೊತೆಗೆ ಇನ್ನೂ ಹೆಚ್ಚಿನ ಬಾಂಧವ್ಯ ಹೊಂದಲು ನೆರವಾಗಿದೆ.

ಒಂದು ಕಂಪನಿಯಾಗಿ ಪ್ರತಿಯೊಂದು ಸಂಘಟನೆಯು ಇದರಲ್ಲಿ ಭಾಗಿಯಾಲು ನಾವು ಉತ್ತೇಜಿಸಲಿದ್ದು, ಪರಿಸರವನ್ನು ಕಾಯ್ದುಕೊಳ್ಳಲು ಸುಸ್ಥಿರಾಭಿವೃದ್ಧಿ ಕ್ರಮಗಳಿಗೆ ಒತ್ತು ನೀಡಲು ಬೆಂಬಲಿಸಲಿದೆ. ಅಲ್ಲದೆ, ನಾವು ಪರಿಸರವನ್ನು ಸ್ವಚ್ಛವಾಗಿ ಇಡುವ ಕುರಿತು ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿಯೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ' ಎಂದು ತಿಳಿಸಿದರು.

ಗಾಂಧಿಯ ಜೀವನ ಗಾಥೆ ಸಾರುವ ಲಾಲ್‌ಬಾಗ್ ಪುಷ್ಪ ಪ್ರದರ್ಶನ

ಕೆನರಾ ಎಚ್‍ಎಸ್‍ಬಿಸಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಸೂರೆನ್ಸ್‍ನ ಚೀಫ್ ಡಿಸ್ಟ್ರಿಬ್ಯೂಷನ್ ಆಫೀಸರ್ ತರನ್ನುಮ್ ಹಾಸಿಬ್ ಅವರು, 'ನಮ್ಮ ಭರವಸೆಯ ಕಾರ್ಯಗಳು ಎಂದಿಗೂ ನೆನಪಿನಲ್ಲಿ ಇರುತತವೆ. ನಗರ ಸ್ವಚ್ಛ ಮತ್ತು ಸುಂದರವಾಗಿ ಇರಲು ಸಮಾಜ ದೊಡ್ಡ ಪ್ರಮಾಣದಲ್ಲಿ ಕೈಜೋಡಿಸಬೇಕು. ಚೆನ್ನೈ, ಬೆಂಗಳೂರು ಮತ್ತು ಕೊಚ್ಚಿಯಲ್ಲಿ ಕೈಗೊಂಡ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ, ಸ್ಪಂದನೆ ದೊರೆತಿದೆ' ಎಂದರು.

ಇದುವರೆಗೂ ಕೆನರಾ ಎಚ್‍ಎಸ್‍ಬಿಸಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಸೂರೆನ್ಸ್ ಸುಮಾರು 10,000 ಚದರ ಅಡಿ ಅಳತೆಯ ಗ್ರಾಫಿಟಿ ಚಿತ್ರಕಲೆಯನ್ನು ಏಳು ನಗರಗಳಲ್ಲಿ ಕೈಗೊಂಡಿದೆ. ಸ್ವಚ್ಛ ಮತ್ತು ನಗರವನ್ನು ಸುಂದರವಾಗಿಡುವ ನಿಟ್ಟಿನಲ್ಲಿದೊಡ್ಡ ಪ್ರಮಾಣದ ಕೊಡುಗೆ ನೀಡಿದೆ ಎಂಣದು ಹೇಳಿದರು. ಕಂಪನಿಯು ಈ ಕಾರ್ಯಕ್ರಮಕ್ಕಾಗಿ ರೇಡಿಯೊ ಮಿರ್ಚಿ ಜೊತೆಗೆ ಪಾಲುದಾರಿಕೆ ಹೊಂದಿದ್ದು, ರೇಡಿಯೋ ಮೂಲಕ ಸಭಿಕರನ್ನು ತಲುಪುತ್ತಿದೆ.

English summary
Canara HSBC Oriental Bank of Commerce Life Insurance launched its “meformycity” initiative in Bengaluru. The initiative which promises to make our cities cleaner and beautiful through graffiti art held at Lalbagh road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X