ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಎಡಿಎಫೈ ಶಾಲೆ ಉದ್ಘಾಟನೆ

By Mahesh
|
Google Oneindia Kannada News

ಬೆಂಗಳೂರು, ಮೇ.12: ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಅವರು ಎಂಡಿಎನ್ ಎಡಿಫೈ ಎಜುಕೇಷನ್ ಪ್ರೈ.ಲಿನ ಸಹಭಾಗಿತ್ವದ ಎಡಿಫೈ ಶಾಲೆಯನ್ನು ಉದ್ಘಾಟಿಸಿದ್ದಾರೆ. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶಾಲೆ ಆರಂಭದೊಂದಿಗೆ ಕೆ12 ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗಲಿದೆ ಎಂದು ಎಡಿಫೈ ಸಂಸ್ಥೆ ಹೇಳಿದೆ.

ಎಡಿಫೈ ಶಾಲೆಗಳು ಶೈಕ್ಷಣಿಕ ಉತ್ಕೃಷ್ಟತೆ, ಕ್ರೀಡಾ ಸೌಲಭ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಎಡಿಫೈ ಶಾಲೆಗಳು ವಿಶಾಲವಾದ ಗ್ರಂಥಾಲಯ, ಸಂಗೀತ ಶಾಲೆ, ಇಂಗ್ಲೀಷ್ ಪ್ರಯೋಗಾಲಯ, ವಂಡರ್ ರೂಮ್, ಮ್ಯಾಥ್ ಲ್ಯಾಬ್, ಇವಿಎಸ್ ಲ್ಯಾಬ್ ಹಾಗೂ ವಿಜ್ಞಾನ ಪ್ರಯೋಗಾಲಯಗಳನ್ನು ಹೊಂದಿದೆ.

ಎಡಿಫೈ ಶಾಲೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಪಠ್ಯಕ್ರಮ ಪದ್ಧತಿಯ ಮಿಶ್ರಣವನ್ನು ಕಾಣಬಹುದಾಗಿದೆ. ಸಿಬಿಎಸ್ ಇ, ಐಸಿಎಸ್ ಇ, ಐಜಿಸಿಎಎಸ್ ಇ ಹಾಗೂ ಐಬಿ ಹೀಗೆ ವಿವಿಧ ಮಾದರಿ ಪಠ್ಯಕ್ರಮಗಳನ್ನು ಎಡಿಎನ್ ಎಡಿಫೈ ಎಜುಕೇಷನ್ ವಿನ್ಯಾsಸಗೊಳಿಸಿ ಅಭಿವೃದ್ಧಿಪಡಿಸಿದೆ. ಕ್ರಮಬದ್ಧ ಅಧ್ಯಯನದ ಹೊರತಾಗಿ ವಿದ್ಯಾರ್ಥಿಗಳು ಈಜು, ಬಾಡ್ಮಿಂಟನ್, ಲಾನ್ ಟೆನಿಸ್, ಕರಾಟೆ, ಸ್ಕೇಟಿಂಗ್, ಕುದುರೆ ಸವಾರಿ, ಟ್ರಿನಿಟಿ ಸ್ಕೂಲ್ ಆಫ್ ಲಂಡನ್‍ನಿಂದ ಸಂಗೀತ ಪಾಠ, ಭಾಷಾ ಕಲಿಕೆ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ತಜ್ಞರಾಗಬಹುದಾಗಿದೆ.

ಶಾಲೆಯ ಸಲಹಾ ಸಮಿತಿಯಲ್ಲಿ ಪ್ರೊ.ರಾಜೀವ್ ಗೌಡ, ನಿರ್ದೇಶಕ ಪವನ್ ಕುಮಾರ್, ಡಾ. ಜಗದೀಶ್ ಮುಂತಾದವರಿದ್ದಾರೆ. ಶಾಲೆಯ ಬಗ್ಗೆ ಇನ್ನಷ್ಟು ಮಾಹಿತಿ ಚಿತ್ರಸರಣಿಯಲ್ಲಿದೆ ತಪ್ಪದೇ ಓದಿ...

ನ್ಯಾ.ಗೋಪಾಲ ಗೌಡರಿಂದ ಶಾಲೆ ಉದ್ಘಾಟನೆ

ನ್ಯಾ.ಗೋಪಾಲ ಗೌಡರಿಂದ ಶಾಲೆ ಉದ್ಘಾಟನೆ

ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಅವರು ಎಂಡಿಎನ್ ಎಡಿಫೈ ಎಜುಕೇಷನ್ ಪ್ರೈ.ಲಿನ ಸಹಭಾಗಿತ್ವದ ಎಡಿಫೈ ಶಾಲೆಯನ್ನು ಉದ್ಘಾಟಿಸಿದ್ದಾರೆ. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶಾಲೆ ಆರಂಭದೊಂದಿಗೆ ಕೆ12 ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗಲಿದೆ ಎಂದು ಎಡಿಫೈ ಸಂಸ್ಥೆ ಹೇಳಿದೆ.

ಪ್ರವೇಶ ದಾಖಲಾತಿ ಆಹ್ವಾನಿಸಲಾಗಿದೆ

ಪ್ರವೇಶ ದಾಖಲಾತಿ ಆಹ್ವಾನಿಸಲಾಗಿದೆ

ಶಾಲೆ ಆರಂಭದ ಮೊದಲ ಶೈಕ್ಷಣಿಕ ವರ್ಷದಲ್ಲಿ ಗ್ರೇಡ್ IK-I ನಿಂದ ಗ್ರೇಡ್ Vತನಕ ಪ್ರವೇಶ ದಾಖಲಾತಿ ಆಹ್ವಾನಿಸಲಾಗುತ್ತದೆ. ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು ಪೋಷಕರು ಶಾಲೆಗೆ ಭೇಟಿ ಕೊಟ್ಟು ಪ್ರಿನ್ಸಿಪಾಲ್ ಹಾಗೂ ಪ್ರವೇಶ ಸಲಹೆಗಾರ ಮತ್ತು ವಿದೇಶಿ ಶಿಕ್ಷಕರೊಡನೆ ಸಮಾಲೋಚನೆ ನಡೆಸಬಹುದು ಹಾಗೂ ಶಾಲೆಯ ವಾತಾವರಣ, ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬಹುದು. ಪೋಷಕರರಿಗೆ ಶಾಲೆ ಮುಕ್ತ ಆಹ್ವಾನ ನೀಡುತ್ತಿದೆ.

ಹೆಚ್ಚಿನ ಮಾಹಿತಿಗೆ ತಪ್ಪದೇ ಸಂಪರ್ಕಿಸಿ

ಹೆಚ್ಚಿನ ಮಾಹಿತಿಗೆ ತಪ್ಪದೇ ಸಂಪರ್ಕಿಸಿ

ವಂದನಾ ಸಂಜಯ್ ಪ್ರಿನ್ಸಿಪಾಲ್, ಎಡಿಫೈ ಸ್ಕೂಲ್ ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು. ಹೆಚ್ಚಿನ ಮಾಹಿತಿಗೆ ಭೇಟಿಕೊಡಿ : ಎಡಿಫೈ ವೆಬ್ ತಾಣ
ದೂ: +9199000 77178, +9198454 59413

ಆಡಳಿತ ಮಂಡಳಿಯ ಅಶೋಕ್ ಅವರ ಭಾಷಣ

ಆಡಳಿತ ಮಂಡಳಿಯ ಅಶೋಕ್ ಅವರ ಭಾಷಣ

ಶಿಕ್ಷಣ, ಕ್ರೀಡೆ ಹಾಗೂ ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳತ್ತ ಗಮನ ಹರಿಸುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಒತ್ತು ಕೊಟ್ಟು ವಿಶ್ವಮಟ್ಟದಲ್ಲಿ ಯಶಸ್ವಿಯಾಗುವಂತೆ ಮಾಡಲು ಬೇಕಾದ ಸೌಲಭ್ಯ ಒದಗಿಸುವುದು ನಮ್ಮ ಗುರಿ.

ನಮ್ಮ ಶಾಲೆಯಲ್ಲಿ ಬೆಳಗ್ಗೆ ಉಪಾಹಾರ, ಊಟ ಹಾಗೂ ಸಂಜೆ ತಿಂಡಿ ಕೂಡಾ ನೀಡಲಾಗುತ್ತದೆ ಹೀಗಾಗಿ ಅಮ್ಮಂದಿರು ನಿಶ್ಚಿಂತರಾಗಿರಬಹುದು. ಶಾಲಾ ಅವಧಿಯ ನಂತರ ಯಾವುದೇ ವಿದ್ಯಾರ್ಥಿಗೆ ಪ್ರತ್ಯೇಕ ಮನೆಪಾಠದ ಅಗತ್ಯ ಬೀಳುವುದಿಲ್ಲ. ಶಾಲಾ ಅವಧಿಯ ಕಲಿಕೆ ವಿನ್ಯಾಸ ವಿದ್ಯಾರ್ಥಿಸ್ನೇಹಿಯಾಗಿದ್ದು ವಿದ್ಯಾರ್ಥಿಗಳು ಆನಂದದಿಂದ ಕಲಿಕೆ ನಡೆಸಬಹುದು

ಎಂಡಿಎನ್ ಎಡಿಫೈ ಎಜುಕೇಷನ್ ಪ್ರೈ.ಲಿ ಬಗ್ಗೆ

ಎಂಡಿಎನ್ ಎಡಿಫೈ ಎಜುಕೇಷನ್ ಪ್ರೈ.ಲಿ ಬಗ್ಗೆ

ಎಂಡಿಎನ್ ಎಡಿಫೈ ಎಜುಕೇಷನ್ ಪ್ರೈ.ಲಿ ಭಾರತದ ಹೈದರಾಬಾದಿನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಪ್ರೀ ಪ್ರೈಮರಿ ಪ್ರೈಮರಿ, ಸೆಕಂಡರಿ ಹಾಗೂ ಹೈಯರ್ ಸೆಕಂಡರಿ ಎಜುಕೇಷನ್ ನೀಡುತ್ತಿದೆ. ದೇಶದಾದ್ಯಂತ ಎಡಿಫೈ ಶಾಲೆಗಳಿದ್ದು, ಸುಮಾರು 160 ಪ್ರೀಸ್ಕೂಲ್ ಹಾಗೂ 52 ಕೆ12 ಶಾಲೆಗಳಿವೆ. ಅಂತಾರಾಷ್ಟ್ರೀಯ ಶಿಕ್ಷಣ ಮಾರುಕಟ್ಟೆಗೆ ತನ್ನ ಜಾಲವನ್ನು ಶೀಘ್ರದಲ್ಲೇ ವಿಸ್ತರಿಸಲಿದೆ.

ಶಾಲೆಯಲ್ಲಿ ಸಾಂಸ್ಕೃತಿಕ ವಿನಿಮಯ

ಶಾಲೆಯಲ್ಲಿ ಸಾಂಸ್ಕೃತಿಕ ವಿನಿಮಯ

ಎಡಿಫೈ ಶಾಲೆಯಲ್ಲಿ ಸಾಂಸ್ಕೃತಿಕ ವಿನಿಮಯ ಕೂಡಾ ಇದ್ದು, ಜಾಗತಿಕ ಮಟ್ಟದ ವಿದೇಶಿ ಶಿಕ್ಷಕರು ಬೋಧಿಸುತ್ತಾರೆ. ಎಡಿಫೈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಐಐಟಿ ಖರಗಪುರ್, ಅಮಿಟಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಐಎಚ್‍ಎಂ ಲೀಲಾ ಕೆಂಪೆನ್ಸ್ಕಿ, ಮಣಿಪಾಲ್ ವಿಶ್ವವಿದ್ಯಾಲಯ, ಪುಣೆ ಮೆಡಿಕಲ್ ಕಾಲೇಜ್, ಯೂನಿವರ್ಸಿಟಿ ಆಫ್ ಇಲಿನಾಯ್ ಯು.ಕೆ, ಸಿನ್ಸಿನಾಟಿ ಯೂನಿವರ್ಸಿಟಿ ಮುಂತಾದ ಪ್ರತಿಷ್ಠಿತ ವಿವಿಗಳಿಗೆ ಸೇರಿದ್ದಾರೆ.

ಗೋಪಾಲ ಗೌಡ ಅವರಿಂದ ಶುಭ ಹಾರೈಕೆ

ಗೋಪಾಲ ಗೌಡ ಅವರಿಂದ ಶುಭ ಹಾರೈಕೆ

ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಅವರಿಂದ ಶುಭ ಹಾರೈಕೆ

ವಂದನಾ ಸಂಜಯ್ ಪ್ರಿನ್ಸಿಪಾಲ್

ವಂದನಾ ಸಂಜಯ್ ಪ್ರಿನ್ಸಿಪಾಲ್

ಜೀವನದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವುದು ಮುಖ್ಯ ಎಂದು ಎಡಿಫೈ ಶಾಲೆ ತಿಳಿದಿದೆ. ಶಿಕ್ಷಣದ ಮೂಲಕ ಜೀವನ ಕಲೆ ಕಲಿಸುವುದು, ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವುದು, ಸಮಾಜದಲ್ಲಿ ಬದಲಾವಣೆ ತರುವುದು ಮುಖ್ಯ ಎಂದು ನಂಬಲಾಗಿದೆ. ಪದವಿ ಸಂಪಾದನೆ, ಹಣ ಹಾಗೂ ಆರ್ಥಿಕ ಗುಣಮಟ್ಟ ಹೆಚ್ಚಳಕ್ಕೆ ಮಹತ್ವ ನೀಡುವುದಕ್ಕಿಂತ ಸಾರ್ಥಕ ಬದುಕು ಕಾಣುವ ನಾಗರಿಕರನ್ನು ಬೆಳೆಸಲು ಬದ್ಧರಾಗಿದ್ದೇವೆ ಎಂದು ಶಾಲಾ ಪ್ರಿನ್ಸಿಪಾಲ್ ವಂದನಾ ಹೇಳಿದ್ದಾರೆ.

English summary
Hon'ble Supreme Court Justice Mr V. Gopala Gowda Inaugurated the Edify School in Electronic City, Bengaluru on 11th May 2014. The school has opened admissions from Grade IK-I to Grade V in the first year and will be affiliated to CBSE.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X