ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀದಿನಾಯಿಗಳ ನಿಯಂತ್ರಣ ಬಿಟ್ಟು ತಂತ್ರ ಕಲಿಸಲು ಮುಂದಾದ ಮೇಯರ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎರಡು ತಿಂಗಳಿಂದ ಇಲ್ಲಿಯವರೆಗೆ ನಾಲ್ಕು ಮಕ್ಕಳಿಗೆ ನಾಯಿ ಕಚ್ಚಿದೆ. ಹಾಗಾದರೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಏನು ಮಾಡಬೇಕು ಎಂದು ಯೋಜನೆ ರೂಪಿಸುವುದು ಬಿಟ್ಟು ಬೀದಿನಾಯಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವ ಪಾಠ ಮಾಡಲು ಮೇಯರ್ ನಿರ್ದರಿಸಿದ್ದಾರೆ.

ಬೆಂಗಳೂರಲ್ಲಿ ಮತ್ತೆ ಬೀದಿ ನಾಯಿ ಹಾವಳಿ: 4 ವರ್ಷದ ಮಗು ಮೇಲೆ ದಾಳಿ ಬೆಂಗಳೂರಲ್ಲಿ ಮತ್ತೆ ಬೀದಿ ನಾಯಿ ಹಾವಳಿ: 4 ವರ್ಷದ ಮಗು ಮೇಲೆ ದಾಳಿ

ಬೀದಿ ನಾಯಿ ಹಾವಳಿ ಪ್ರಕರವನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ಇದಕ್ಕೆ ಪರಿಹಾರ ಕಂಡುಹಿಡಿಯುವ ದೃಷ್ಟಿಯಿಂದ ಪ್ರಾಣಿದಯಾ ಸಂಘ, ಪಶು ತಜ್ಞರೊಂದಿಗೆ ಸಭೆ ನಡೆಸಿ ಸಲಹೆ ಪಡೆದಿದ್ದಾರೆ.

ಬೀದಿಬದಿ ಪ್ರಾಣಿಗಳ ಸಂರಕ್ಷಣೆಗೆ ಮನಮಿಡಿದ ಗ್ಲೋಬಲ್ ಗಿವಿಂಗ್ ಬೀದಿಬದಿ ಪ್ರಾಣಿಗಳ ಸಂರಕ್ಷಣೆಗೆ ಮನಮಿಡಿದ ಗ್ಲೋಬಲ್ ಗಿವಿಂಗ್

ಸಭೆಯಲ್ಲಿ ತಜ್ಞರು ಪಾಲಿಕೆ ಒಪ್ಪುವುದಾದರೆ ಬಿಬಿಎಂಪಿಯ ಎಲ್ಲಾ ಶಾಲೆಗಳಿಗೆ ವಾರದಲ್ಲಿ ಕೆಲ ದಿನ ಬೀದಿ ನಾಯಿಗಳಿಂದ ಜಾಗೃತರಾಗುವುದು ಹೇಗೆ ಎಂಬ ಬಗ್ಗೆ ಕೆಲ ಗಂಟೆಗಳ ಕಾಲ ಮಕ್ಕಳಿಗೆ ತಿಳಿಸಿಕೊಡಲು ಮುಂದಾಗಿದ್ದಾರೆ.

ಬೀದಿ ನಾಯಿ ದಾಳಿಗೆ ತುತ್ತಾಗಿದ್ದ ಬಾಲಕ ಸಾವು ಬೀದಿ ನಾಯಿ ದಾಳಿಗೆ ತುತ್ತಾಗಿದ್ದ ಬಾಲಕ ಸಾವು

Mayor wants to teach children how to escape from stray dogs

ಇತ್ತೀಚೆಗೆ ಶಾಲಾ ಮಕ್ಕಳ ಮೇಲಿನ ಬೀದಿ ನಾಯಿ ಹಾವಳಿ ಪ್ರಕರಣಗಳು ಹೆಚ್ಚುತ್ತುವೆ. ವಿದ್ಯಾರ್ಥಿ ಪ್ರವೀಣ ನಾಯಿಗಳ ದಾಳಿಯಿಂದ ಸಾವನ್ನಪ್ಪಿದ ಘಟನೆಯೂ ಇನ್ನು ಮಾಸಿಲ್ಲ, ಆದರೆ ಬಿಬಿಎಂಪಿಯು ನಾಯಿಗಳನ್ನು ಕೊಲ್ಲುವುದು ಅಥವಾ ಬಂಧಿಸುವ ಕೆಲಸ ಮಾಡುವಂತಿಲ್ಲ ಹಾಗಾಗಿ ಬೀದಿ ನಾಯಿಗಳಿಂದ ರಕ್ಷಿಸಿಕೊಳ್ಳುವ ಪಾಠ ಮಾಡಲು ಮುಂದಾಗಿದೆ.

English summary
Instead control the population of stray dogs in the city, BBMP mayor has idea of teaching school children how to escape and protective from stray dogs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X