ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಧಿಕೃತ ಪೋಸ್ಟರ್‌ಗಳನ್ನು ಹರಿದುಹಾಕಿದ ಮೇಯರ್‌ ಸಂಪತ್‌ರಾಜ್‌

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 11: ಬೆಂಗಳೂರಲ್ಲಿರುವ ಅನಧಿಕೃತ ಫ್ಲೆಕ್ಸ್‌, ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸಲು ಹೈಕೋರ್ಟ್‌ ಬಿಬಿಎಂಪಿಗೆ ನೀಡಿದ್ದ ಸೂಚನೆ ಮೇರೆಗೆ ಮೇಯರ್‌ ಸಂಪತ್‌ರಾಜ್‌ ಸ್ವತಃ ತೆರವು ಕಾರ್ಯಕ್ಕೆ ಮುಂದಾದರು.

ಬಿಬಿಎಂಪಿ ನಗರದಲ್ಲಿರುವ ಫ್ಲೆಕ್ಸ್‌, ಬ್ಯಾನರ್‌, ಪೋಸ್ಟರ್‌ಗಳ ವಿರುದ್ಧ ಸಮರ ಸಾರಿದ್ದು, ಕೇವಲ ರಸ್ತೆಗಳಲ್ಲಿ ಮಾತ್ರವಲ್ಲ ಇನ್ನುಮುಂದೆ ಸಮಾರಂಭಗಳಲ್ಲೂ ಕೂಡ ಬ್ಯಾನರ್‌ ಹಾಕುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ, ಆದರೂ ನಗರದ ಕೆಲವೆಡೆ ಇನ್ನೂ ಅಕ್ರಮ ಫ್ಲೆಕ್ಸ್‌ಗಳು ರಾರಾಜಿಸುತ್ತಿರುವ ಹಿನ್ನೆಲೆಯಲ್ಲಿ ಖುದ್ದಾಗಿ ಮೇಯರ್‌ ಈ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ.

ಹೋಟೆಲ್‌, ಮಾಲ್‌ಗಳಲ್ಲೂ ಫ್ಲೆಕ್ಸ್‌ ನಿಷೇಧ: ಬಿಬಿಎಂಪಿ ಖಡಕ್‌ ನಿರ್ಧಾರ ಹೋಟೆಲ್‌, ಮಾಲ್‌ಗಳಲ್ಲೂ ಫ್ಲೆಕ್ಸ್‌ ನಿಷೇಧ: ಬಿಬಿಎಂಪಿ ಖಡಕ್‌ ನಿರ್ಧಾರ

ಶನಿವಾರ ಬೆಳಗ್ಗೆ ಗಾಂಧಿನಗರ ಸುತ್ತಮುತ್ತಲ ಪ್ರದೇಶದಲ್ಲಿ ಅಕ್ರಮ ಹೋರ್ಡಿಂಗ್ಸ್‌, ಬ್ಯಾನರ್‌, ಫ್ಲೆಕ್ಸ್ ಗಳನ್ನು ಬಿಬಿಎಂಪಿ ಇತರೆ ಅಧಿಕಾರಿಗಳ ಜತೆ ತೆರಳಿ ತೆರವುಗೊಳಿಸಿದ್ದಾರೆ. ಇತ್ತೀಚೆಗೆ ಅಕ್ರಮ ಫ್ಲೆಕ್ಸ್‌ ಹಾಗೂ ಹೋರ್ಡಿಂಗ್‌ಗಳ ವಿರುದ್ಧ ಹೈಕೋರ್ಟ್‌ ಸಮರ ಸಾರಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ನಗರದ ಎಲ್ಲೆಡೆ ಅಕ್ರಮ ಫ್ಲೆಕ್ಸ್‌ ಹಾಗೂ ಹೋರ್ಡಿಂಗ್‌ ತೆರವುಗೊಳಿಸಲು ಮುಂದಾಗಿತ್ತು.

ಇದೀಗ ನಗರದಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ಜಾಹೀರಾತು ಕಂಪನಿಗಳು ಹಾಗೂ ಖಾಸಗಿ ಸಂಸ್ಥೆ, ವಾಣಿಜ್ಯ ಹಾಗೂ ಧಾರ್ಮಿಕ ಭಿತ್ತಿಪತ್ರಗಳನ್ನು ಪಾಲಿಕೆಯ ನಿಯಮ ಪಾಲಿಸದೆ ಅಂಟಿಸುತ್ತಿರುವುದರ ವಿರುದ್ಧ ಕ್ರಮಕ್ಕೂ ಕೂಡ ಮುಂದಾಗಿದೆ.

ಅಕ್ರಮ ಫ್ಲೆಕ್ಸ್ : ಸಿಎಸ್ ಮುಚ್ಚಳಿಕೆ ಪತ್ರಕ್ಕೆ ಹೈಕೋರ್ಟ್ ಚಾಟಿಯೇಟು ಅಕ್ರಮ ಫ್ಲೆಕ್ಸ್ : ಸಿಎಸ್ ಮುಚ್ಚಳಿಕೆ ಪತ್ರಕ್ಕೆ ಹೈಕೋರ್ಟ್ ಚಾಟಿಯೇಟು

Mayor Sampath Raj leads operation remove illegal flex and hoardings

ಮರ ಹಾಗೂ ಗೋಡೆ ಮೇಲೆ ಭಿತ್ತಪತ್ರ ಅಂಟಿಸುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ಅಂತವರಿಗೆ 1 ಲಕ್ಷ ರೂ. ದಂಡ ವಿಧಿಸಲು ಚಿಂತನೆ ನಡೆಸಿದೆ. ಅಕ್ರಮವಾಗಿ ಎಲ್ಲೆಂದರಲ್ಲಿ ಇನ್ನುಮುಂದೆ ಭಿತ್ತಿಪತ್ರಗಳನ್ನು ಅಂಟಿಸುವಂತಿಲ್ಲ, ಭಿತ್ತಿಪತ್ರ ಅಂಟಿಸಿದರೆ ಬೀಳಲಿದೆ ಭಾರಿ ಪ್ರಮಾಣದ ದಂಡ, ಮರಕ್ಕೆ ಸೀರಿಯಲ್‌ ಸೆಟ್‌ ಹಾಕಿದರೂ ದಂಡಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಕ್ರಿಮಿನಲ್‌ ಮೊಕದ್ದಮೆ ಕೂಡ ದಾಖಲಿಸಲಾಗುತ್ತದೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

English summary
Mayor Smapath Raj has taken himself an initiation of operation remove illegal flex and hoardings in Bangalore as high court has set a target for flex free city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X