ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಕವ್ಯಕ್ತಿ ಕಲಾಪ್ರದರ್ಶನಕ್ಕೆ ಚಾಲನೆ ನೀಡಿದ ಮೇಯರ್ ಗಂಗಾಂಬಿಕಾ

|
Google Oneindia Kannada News

ಬೆಂಗಳೂರು ಮೇ 11 2019: ಕಲಾವಿದ ಹಾಗೂ ಕಲಾಶಿಕ್ಷಕ ಪ್ರೊ.ಕೆ ಎಸ್ ಅಪ್ಪಾಜಯ್ಯ ಅವರ ಏಕವ್ಯಕ್ತಿ ಕಲಾಪ್ರದರ್ಶನ ಹಿಂದಿನ ಕಾಲದ ಮಹಿಳಾ ಅಸಮಾನತೆ ಹಾಗೂ ಶೋಷಣೆಗಳ ಮೇಲೆ ಬೆಳಕು ಚೆಲ್ಲುತ್ತಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಗರದ ಆರ್ಟ್ ಹೌಸ್ ನಲ್ಲಿ ಆಯೋಜಿಸಲಾಗಿರುವ ಏಕವ್ಯಕ್ತಿ ಕಲಾಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರೊ ಕೆ ಎಸ್ ಅಪ್ಪಾಜಯ್ಯ ಅವರು ವಿನೂತನ ರೀತಿಯಲ್ಲಿ ತಮ್ಮ ಗ್ರಹಿಕೆಯನ್ನು ಕೃತಿಗೆ ಇಳಿಸಿದ್ದಾರೆ. ಗ್ಯಾಲರಿಯ ನೆಲದ ಮೇಲೆ ಮೊಣಕಾಲೆತ್ತರದ ಮಣ್ಣು, ಚಾರ್ಕೋಲ್ ರೇಖಾಚಿತ್ರಗಳು ಸ್ತ್ರೀವಾದದ ನಿರೂಪಣೆಯ ಅಂಶಗಳನ್ನು ವ್ಯಾಖ್ಯಾನಕ್ಕೆ ಒಡ್ಡುವಂತೆ ನಿರೂಪಿಸಲಾಗಿದೆ ಎಂದರು.

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ "ಬೆಂಗಳೂರು ಉತ್ಸವ"

ಖ್ಯಾತ ಕಲಾವಿದ ಎಸ್ ಜಿ ವಾಸುದೇವ್ ಮಾತನಾಡಿ, ಕಲಾವಿದ ಹಾಗೂ ಕಲಾಶಿಕ್ಷಕ ಪ್ರೊ.ಕೆ ಎಸ್ ಅಪ್ಪಾಜಯ್ಯ ಅವರ ಪ್ರಸ್ತುತ ಕಾಲಬದ್ದ ಹಾಗೂ ಲಿಂಗಸಂಬಂಧಿತ ಕಲಾಕೃತಿಯು ಸ್ತ್ರೀವಾದದ ನಿರೂಪಣೆಯ ಅಂಶಗಳನ್ನು ವ್ಯಾಖ್ಯಾನಕ್ಕೆ ಒಡ್ಡುತ್ತವೆ. ಗ್ರಾಮೀಣ ಸವದತ್ತಿಯ ಆಚರಣೆಯಲ್ಲಾಗಲಿ ಅಥವಾ ನಗರೀಕೃತ ಕಾಮಾಟಿಪುರದ ದೇಹಮಾರಾಟದ ವ್ಯಾವಹಾರದಲ್ಲಿರಲಿ, ಹೆಣ್ಣನ್ನು, ಹೆಣ್ಣೆಂಬ ಪರಿಕಲ್ಪನೆಯನ್ನು ದೈವಿಕ ಆಚರಣೆ ಮತ್ತು ಆರ್ಥಿಕ ಲಾಭದ ಉದ್ದೇಶದಿಂದ ನಿರಂತರವಾಗಿ ಶೋಷಿಸಲಾಗುತ್ತಿದೆ.

Mayor Gangambika Mallikarjuna inaugurates A Unique Solo Show Art Houz gallery

ಗಂಡು ನಿರ್ಮಿತಿಯು ಈ ತೆರನಾದ ಹುನ್ನಾರದ ಉಪಾಯವನ್ನು ನಿರಂತರಗೊಳಿಸಿದಂತಿದೆ. ಪ್ರಸ್ತುತ ಕಲಾಕೃತಿಯು ಈ ಅಸಮಾನತೆಯನ್ನು ಕುರಿತಾಗಿದೆ ಹಾಗೂ ಅದನ್ನು ದೃಶ್ಯಸಂವಾದಕ್ಕೆಳೆಸುವ ನಿರೂಫಣಾ ಯತ್ನವಾಗಿದೆ ಎಂದರು. ಮುಂದಿನ ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಲಾವಿದರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದರು.

ಬಿಬಿಎಂಪಿ ಉಪ ಚುನಾವಣೆ : ಅಖಾಡಕ್ಕಿಳಿಯಲಿದ್ದಾರೆ ಮಾರಿಮುತ್ತು ಬಿಬಿಎಂಪಿ ಉಪ ಚುನಾವಣೆ : ಅಖಾಡಕ್ಕಿಳಿಯಲಿದ್ದಾರೆ ಮಾರಿಮುತ್ತು

ಕಲಾವಿದ ಕೆ ಎಸ್ ಅಪ್ಪಾಜಯ್ಯ ಮಾತನಾಡಿ, ಗೋಡೆಯ ಮೇಲೆ ನೇರವಾಗಿ ಬರೆಯಲಾಗಿರುವ ಸ್ತ್ರೀತನವ ಕುರಿತಾದ ಚಾರ್ಕೋಲ್ ರೇಖಾಚಿತ್ರಗಳು, ಗ್ಯಾಲರಿಯ ನೆಲದ ಮೇಲೆ ಸಂಯೋಜಿಸಲಾದ ಮಣ್ಣಿನ ವಿನ್ಯಾಸ, ರೆಡಿಮೇಡ್ ಗುಣದ ಸೀರೆಬಟ್ಟೆ, ಪುರಷ ಜನನಾಂಗದ ಪುನರಾವೃತ್ತ ಶಿಲ್ಪಗಳು, ಇವೆಲ್ಲವೂ ಜೆಂಡರ್ - ರಾಜಕಾರಣ ಕುರಿತಾದ ವ್ಯಕ್ತಿಗತ ಏಕತ್ರ ನಿರ್ಮಿತಿಯಾಗಿದೆ.

Mayor Gangambika Mallikarjuna inaugurates A Unique Solo Show Art Houz gallery

ಈಗಾಗಲೇ ತನ್ನದೇ ಒಂದು ಒಪ್ಪಿತ ಇತಿಹಾಸವನ್ನೇ ಹೊಂದಿರುವ ಸಮಕಾಲೀನ ಸ್ತ್ರೀವಾದದ ಸಂವಾದವನ್ನು ದೃಶ್ಯವ್ಯಾಖ್ಯೆಗೊಡ್ಡುತ್ತವೆ ಇಲ್ಲಿನ ಕೃತಿಸಮುಚ್ಚಯ, ಅಸಮತೆ ಹಾಗೂ ಶೋಷಣೆಗಳ ಕುರಿತಾದ ದೃಶ್ಯಚಿಂತನೆಯೂ ಇಲ್ಲಿದೆ. ಉದ್ದೇಶತ ವಿಷಯವನ್ನು ಕುರಿತ ಇತ್ಯಾತ್ಮಕವಾಗಿ ಪ್ರೇಕ್ಷಕರು ಭಾಗವಹಿಸಿ, ಪ್ರತಿಕ್ರಿಯಿಸುವಂತೆ ಮಾಡುವುದು ಇಲ್ಲಿನ ಕಲಾಪರಿಕರಗಳ ಸಂಯೋಜನೆಯ ತಕ್ಷಣದ ಆಶಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದ ಎಸ್ ಜಿ ವಾಸುದೇವ್ ಸೇರಿದಂತೆ ಹಲವಾರು ಕಲಾಪ್ರೇಮಿಗಳು ಭಾಗವಹಿಸಿದ್ದರು. ಈ ಕಲಾಪ್ರದರ್ಶನ ಮೇ 12 ರಿಂದ ಮೇ 15 ರ ವರೆಗೆ ನಡೆಯಲಿದೆ.

ಕಾರ್ಯಕ್ರಮ ವಿವರ
ಇಂಟರ್ವೆನ್ಶನ್ಸ್ ಅಂಡ್ ಅಪ್ರೋಪ್ರಿಯೇಶನ್ಸ್:
ಎ ಸೋಲೋ ಶೋ ಬೈ
ಪ್ರೋ. ಕೆ ಎಸ್ ಅಪ್ಪಾಜಯ್ಯ
ಪ್ರದರ್ಶನದ ದಿನಗಳು
ಮೇ 12 ರಿಂದ ಮೇ 15 2019
ಸ್ಥಳ: ಆರ್ಟ್ ಹೌಜ್ ನಂ 63, ಪ್ಯಾಲೇಸ್ ರಸ್ತೆ, ವಸಂತನಗರ,
ಮೌಂಟ್ ಕಾರ್ಮೆಲ್ ಕಾಲೇಜಿನ ಪಕ್ಕ

English summary
BBMP Mayor Gangambika Mallikarjuna today Inaugurated a unique Solo Art show " Interventions & Appropriations" organised by Prof K.S Appajaiah at Art Houz gallery. Eminent Artist, S.G Vasudev, Karnataka Chitrakala Parishath Secretary Prof M.J Kamalakshi were present on the occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X