ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆಗುಂಡಿಗೆ ವೈಟ್ ಟಾಪಿಂಗ್ ಪರಿಹಾರ ಎಂದ ಮೇಯರ್ ಗಂಗಾಂಬಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23: ರಸ್ತೆಗುಂಡಿಯನ್ನು ಮುಚ್ಚುವುದು ಅಥವಾ ಗುಂಡಿಗಳಿಗೆ ಅದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲು ವೈಟ್ ಟಾಪಿಂಗ್ ಒಂದೇ ಪರಿಹಾರ ಎಂದು ಮೇಯರ್ ಗಂಗಾಂಬಿಕೆ ಹೇಳಿದ್ದಾರೆ.

ನಗರದಲ್ಲಿ ಇನ್ನೂ 628 ಗುಂಡಿಗಳು ಮುಚ್ಚುವುದು ಬಾಕಿ ಇದೆ, ಬೆಂಗಳೂರನ್ನು ರಸ್ತೆಗುಂಡಿ ಮುಕ್ತ ನಗರವನ್ನಾಗಿಸಲು ಬಿಬಿಎಂಪಿಗೆ ಸಾಧ್ಯವಿಲ್ಲ, ಮಳೆಯಿಂದಾಗಿ ರಸ್ತೆಗುಂಡಿ ಸಮಸ್ಯೆ ನಿವಾರಣೆ ಸಾಧ್ಯವಾಗುತ್ತಿಲ್ಲ, ಅಲ್ಲದೆ, ರಸ್ತೆ ದುರಸ್ತಿ ಕಾಮಗಾರಿ ಹಳತಾದಷ್ಟು ಗುಂಡಿಗಳ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ.

Mayor bats for white topping for pothole free roads in Bengaluru


ಗುಂಡಿ ಸೃಷ್ಟಿಯಾಗುವುದು, ಅದನ್ನು ಮುಚ್ಚುವುದು ಮಾಮೂಲಿ ಕಾರ್ಯ ಆದರೆ ಸಂಪೂರ್ಣವಾಗಿ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲು ಸಾಧ್ಯವಿಲ್ಲ ಹಾಗಾಗಿ ಬೆಂಗಳೂರು ಸಂಪೂರ್ಣವಾಗಿ ವೈಟ್ ಟಾಪಿಂಗ್ ರಸ್ತೆಯಾದರೆ ಈ ಗುಂಡಿಗಳಿಗೆ ಬ್ರೇಕ್ ಹಾಕಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ವೈಟ್‌ ಟಾಪಿಂಗ್‌ ಮತ್ತೆ ಶುರು: ಬಿಬಿಎಂಪಿ-ಪೊಲೀಸರ ನಡುವೆ ಸಹಮತವೈಟ್‌ ಟಾಪಿಂಗ್‌ ಮತ್ತೆ ಶುರು: ಬಿಬಿಎಂಪಿ-ಪೊಲೀಸರ ನಡುವೆ ಸಹಮತ

ಅ.21ರ ವರದಿಯಂತೆ ನಗರದಲ್ಲಿ 286 ಗುಂಡಿಗಳು ಹೊಸದಾಗಿ ಸೃಷ್ಟಿಯಾಗಿದ್ದು, ಪೂರ್ವ ವಲಯದಲ್ಲಿ ಸೃಷ್ಟಿಯಾದ 156ಗುಂಡಿಗಳಲ್ಲಿ 58 ಗುಂಡಿಗಳನ್ನು ಮಾತ್ರ ಮುಚ್ಚಲಾಗಿದೆ.

ಹೊರ ವರ್ತುಲ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ: ಟ್ರಾಫಿಕ್ ಜಾಮ್ ಭೀತಿಹೊರ ವರ್ತುಲ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ: ಟ್ರಾಫಿಕ್ ಜಾಮ್ ಭೀತಿ

ಉಳಿದಂತೆ ಯಾವುದೇ ವಲಯದಲ್ಲಿ ಒಂದೇ ಒಂದು ಗುಂಡಿಗಳನ್ನು ಮುಚ್ಚುವ ಕೆಲಸ ಬಿಬಿಎಂಪಿ ಮಾಡಿಲ್ಲ, ಒಟ್ಟು 628 ಗುಂಡಿಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಚ್ಚುವುದು ಬಾಕಿ ಉಳಿದಿದೆ ಎಂದು ವರದಿ ಹೇಳುತ್ತದೆ.

English summary
Mayor Gangambike has opined that white topping is the only solution for pothole free roads in the city and more roads will be converted to white topping soon, she added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X