ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಲಮಟ್ಟಿಯ ಕಥೆ ವ್ಯಥೆ ಚಿತ್ರಣ -ಕೃಷ್ಣಾ ಕಾಸ್ಮಿಕ್ ಸರ್ಕಲ್ ಆಫ್ ಲೈಫ್

|
Google Oneindia Kannada News

ವಿಶ್ವ ಪರಿಸರ ದಿನ 2019 ಅಂಗವಾಗಿ 'ಕೃಷ್ಣಾ ಕಾಸ್ಮಿಕ್ ಸರ್ಕಲ್ ಆಫ್ ಲೈಫ್- ಮನುಷ್ಯ ಹಾಗೂ ಪ್ರಕೃತಿ ನಡುವಿನ ದೈವಿಕ ಸಹ-ಅಸ್ತಿತ್ವ' ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಯಿತು. ಮಾಯಾ ಫಿಲ್ಮ್ಸ್ ಹಾಗೂ ಬೆಂಗಳೂರು ಪರಿಸರ ಟ್ರಸ್ಟ್ ನವರು ವಾರ್ತಾ ಭವನದಲ್ಲಿ ಇದರ ಪ್ರದರ್ಶನ ಆಯೋಜಿಸಿದ್ದರು. ಕರ್ನಾಟಕದ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದ ಪರಿಸರ ಪುರುಜ್ಜೀವನ ಕುರಿತು ಬೆಳಕುಚೆಲ್ಲುವ ಕಾರ್ಯವನ್ನು ಈ ಸಾಕ್ಷ್ಯಚಿತ್ರ ಮಾಡಿದೆ.

ಬಾಗಲಕೋಟೆ: ಮಳೆ ಬಂದರೆ ಈ ಹತ್ತು ಹಳ್ಳಿ ಜನರ ಸಂಚಾರಕ್ಕೆ ದೋಣಿಯೇ ಗತಿ ಬಾಗಲಕೋಟೆ: ಮಳೆ ಬಂದರೆ ಈ ಹತ್ತು ಹಳ್ಳಿ ಜನರ ಸಂಚಾರಕ್ಕೆ ದೋಣಿಯೇ ಗತಿ

ದೇಶದ ಅತ್ಯಂತ ಪ್ರಮುಖ ತಾಣಗಳಲ್ಲಿ ಒಂದಾಗಿ ಈ ತಾಣವನ್ನು ಚಿತ್ರಿಸುವ ಹಾಗೂ ಪ್ರತಿಫಲಿಸುವ ಕಾರ್ಯ ಆಗಿದೆ. ಈ ಆವಾಸಸ್ಥಾನವು ರಾಮ್ಸರ್ ಪ್ರದೇಶ ಎಂದು ಘೋಷಿಸುವ ಕಲ್ಪನೆ ಹಾಗೂ ರಾಮ್ಸರ್ ಕನ್ವೆನ್ಶನ್ ಮಾನದಂಡವನ್ನು ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ತೇವಾಂಶಯುಕ್ತ ಪ್ರದೇಶವೆಂದು ಪರಿಗಣಿಸುವ ಗುರಿ ಹೊಂದಿದೆ.

ಆಧುನಿಕ ಕರ್ನಾಟಕದ ಹನ್ನೆರಡು ದೇಗುಲಗಳುಆಧುನಿಕ ಕರ್ನಾಟಕದ ಹನ್ನೆರಡು ದೇಗುಲಗಳು

ಕೃಷ್ಣಾ ನದಿ ಉತ್ತರ ಕರ್ನಾಟಕದ ಜೀವನದಿಯಾಗಿ ಗುರುತಿಸಲ್ಪಟ್ಟಿದ್ದು, ಈ ಪ್ರದೇಶದ ಆಹರ ಉತ್ಪಾದನೆಗೆ ಸ್ಥಿರವಾದ ಪರಿಸರ ಒದಗಿಸುತ್ತದೆ. ಆದರೆ ನೀರಿನ ಲಭ್ಯತೆಯ ಕೊರತೆಯಿಂದಾಗಿ ಇದು ಇಂದು ಒಣಗಿದೆ.

ಆಲಮಟ್ಟಿ ಹಾಗೂ ನಾರಾಯಣಪುರ ಅಣೆಕಟ್ಟು ಹಿನ್ನೀರು ಪ್ರದೇಶ

ಆಲಮಟ್ಟಿ ಹಾಗೂ ನಾರಾಯಣಪುರ ಅಣೆಕಟ್ಟು ಹಿನ್ನೀರು ಪ್ರದೇಶ

ಆಲಮಟ್ಟಿ ಹಾಗೂ ನಾರಾಯಣಪುರ ಅಣೆಕಟ್ಟು ಹಿನ್ನೀರು ಪ್ರದೇಶ ಗ್ರೇಟರ್ ಪ್ಲೆಮಿಂಗೋ ಪಕ್ಷಿಗಳಿಗೆ ವಲಸೆ ತಾಣವಾಗಿ ಅತ್ಯಂತ ಪ್ರಶಸ್ತವಾಗಿ ಲಭಿಸಿದೆ. ಇದೇ ಸ್ಥಳದಲ್ಲಿ ಬಂದು ತಂಗಲು ಇವು ಇಷ್ಟಪಡುತ್ತಿವೆ. ಇವು ಬಹುಷಃ ಗುಜರಾತ್‍ನ ಕಚ್ ಪ್ರದೇಶದಿಂದ ಇಲ್ಲಿಗೆ ವಲಸೆ ಬರುತ್ತವೆ. ಹಲವು ವರ್ಷಗಳಿಂದ ಆಲಮಟ್ಟಿ ಪ್ರದೇಶವನ್ನು ಈ ಪ್ಲೆಮಿಂಗೊ ಪಕ್ಷಿಗಳು ಮನೆಯನ್ನಾಗಿಸಿಕೊಂಡಿದ್ದು, ನೂರಾರು ಸಂಖ್ಯೆಯಲ್ಲಿ ಸದಾ ಕಾಣಸಿಗುತ್ತವೆ.

ತಜ್ಞರ ಮಾಹಿತಿ ಪ್ರಕಾರ, ಈ ಪಕ್ಷಿ ಸಂಕುಲಗಳಿಗೆ ಸುರಕ್ಷಿತ ಹಾಗೂ ಭದ್ರತೆಯ ಆಹಾರ ಹಾಗೂ ನೀರನ್ನು ಒದಗಿಸುವ ತಾಣವಾಗಿದೆ. ಆದಾಗ್ಯೂ ಮಾನವ ಹಸ್ತಕ್ಷೇಪದಿಂದಾಗಿ, ಸುತ್ತಲಿನ ಕಾರ್ಖಾನೆಗಳಿಂದ ಹೊರಬೀಳುವ ಮಲೀನ ನೀರು ನದಿಗೆ ಸೇರುತ್ತಿರುವುದರಿಂದಾಗಿ ಸಮಸ್ಯೆ ಎದುರಾಗುತ್ತಿದೆ. ಇದರ ಪರಿಣಾಮ ಪರಿಸರದಲ್ಲಿ ಬದಲಾವಣೆ ಆಗುತ್ತಿದೆ. ಪಕ್ಷಿ ಸಂಕುಲ ಅಸ್ತಿತ್ವ ಹಾಗೂ ಅಳಿವಿನ ಆತಂಕ ಎದುರಿಸುತ್ತಿವೆ.

ದಿ ಕೃಷ್ಣಾ ಕಾಸ್ಮಿಕ್ ಸರ್ಕಲ್ ಆಫ್ ಲೈಫ್ ಸಾಕ್ಷ್ಯಚಿತ್ರದ ಸಂಶೋಧನೆ

ದಿ ಕೃಷ್ಣಾ ಕಾಸ್ಮಿಕ್ ಸರ್ಕಲ್ ಆಫ್ ಲೈಫ್ ಸಾಕ್ಷ್ಯಚಿತ್ರದ ಸಂಶೋಧನೆ

ಈ ಸಾಕ್ಷ್ಯಚಿತ್ರದ ಕುರಿತು ವಿವರಿಸಿದ ದಿ ಕೃಷ್ಣಾ ಕಾಸ್ಮಿಕ್ ಸರ್ಕಲ್ ಆಫ್ ಲೈಫ್ ಸಾಕ್ಷ್ಯಚಿತ್ರದ ಸಂಶೋಧನೆ, ಬರೆಹ ಹಾಗೂ ಸಹ ನಿರ್ದೇಶನ ಮಾಡಿರುವ ಮಾಯಾ ಚಂದ್ರ ಮಾತನಾಡಿ, "ಈ ಸಾಕ್ಷ್ಯಚಿತ್ರ ನಿರ್ಮಾಣ ನಮಗೆ ಒಂದು ವಿನೂತನ ಅನುಭವ ಒದಗಿಸಿತು. ಇದು ಪರಿಸರ ಸಂಸರಕ್ಷಣೆಯ ಉದ್ಯಮದಲ್ಲಿ ನಮ್ಮ ಮೊದಲ ಯತ್ನವಾಗಿದೆ. ಈ ಚಿತ್ರವನ್ನು ಪ್ರಸ್ತುತಪಡಿಸಲು ನಾನು ಮತ್ತು ನನ್ನ ತಂಡ ಅತ್ಯಂತ ಸಂತೋಷ ವ್ಯಕ್ತಪಡಿಸುತ್ತಿದ್ದೇವೆ.

ಪ್ರತಿಕ್ಷಣವನ್ನೂ ಪ್ರೇಕ್ಷಕರು ಬಹಳ ಸಂತೋಶದಿಂದ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಅಲ್ಲದೇ ಜನ ಮರೆತುಹೋಗದ ಸಂದೇಶವನ್ನು ಇದರ ಮೂಲಕ ನೀಡಲು ನಾನು ಬಯಸಿದ್ದೇನೆ. ನಾವಿಂದು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕಾಗಿದೆ. ಇದರಿಂದಾಗಿ ಈ ರೀತಿಯ ಭವ್ಯ ಪಕ್ಷಿ ಸಂಕುಲವನ್ನು ನಮ್ಮ ಮನೆಯ ಜತೆ ಹಂಚಿಕೊಳ್ಳುವ ಕಾರ್ಯ ಮುಂದುವರಿಸಬೇಕು' ಎಂದರು.

ಬೆಂಗಳೂರು ಪರಿಸರ ಟ್ರಸ್ಟ್ ಮುಖ್ಯಸ್ಥ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ

ಬೆಂಗಳೂರು ಪರಿಸರ ಟ್ರಸ್ಟ್ ಮುಖ್ಯಸ್ಥ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ

ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟು ಸುತ್ತಲಿನ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಕುರಿತು ಮಹತ್ವದ ಕುರಿತು ಚರ್ಚಿಸಿದ ಸಂದರ್ಭ ಮಾತನಾಡಿದ ಜನಪ್ರಿಯ ಪರಿಸರ ತಜ್ಞ ಹಾಗೂ ಬೆಂಗಳೂರು ಪರಿಸರ ಟ್ರಸ್ಟ್ ಮುಖ್ಯಸ್ಥ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ, ಈ ಅಣೆಕಟ್ಟು ನಿರ್ಮಾಣ ಸಮಯದಲ್ಲಿ ಪ್ರದೇಶದ ನೈಸರ್ಗಿಕ ಲಕ್ಷಣಗಳ ಬೃಹತ್ ಸ್ಥಳಾಂತರದ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಸವಿವವರವಾಗಿ ವಿವರಿಸಿ ವರದಿ ಸಲ್ಲಿಸಲಾಗಿತ್ತು. ಆದರೆ ಪ್ರಕೃತಿ ತಮ್ಮದೇ ಆದ ಬದಲಾವಣೆಯನ್ನು ಅಳವಡಿಸಿಕೊಂಡಿದೆ. ಮತ್ತು ರಾಮ್ಸರ್ ಅಧಿವೇಶನದ ಮಾರ್ಗದರ್ಶನ ಸೂಚಿಸುವ ಭೂಮಿಯನ್ನು ಭೂಕುಸಿತದಿಂದಾಗಿ ವಿಕಸನಗೊಳಿಸಲಾಗಿದೆ.

ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುವ ಅಗತ್ಯ

ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುವ ಅಗತ್ಯ

ಈ ಸ್ಥಳ ಪಕ್ಷಿಗಳನ್ನು ಅಪರವಾಗಿ ಆಕರ್ಷಿಸುತ್ತಿದ್ದು, ಆದ್ದರಿಂದ ಅನುಕೂಲಕರ ಪ್ರವಾಸಿತಾಣವಾಗಿ ಜನಪ್ರಿಯವಾಗಿದೆ. ಹೇಗಾದರೂ ಈ ಪರಿಸರಕ್ಕೆ ಎದುರಾಗಿರುವ ಆತಂಕವನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಇದಕ್ಕೆ ಎದುರಾಗಿರುವ ಆತಂಕ ತಗ್ಗಿಸಲು ಹಾಗೂ ಇಲ್ಲಿನ ತೇವಾಂಶ ಕಾಪಾಡಲು ಪ್ರದೇಶದ ಅಧ್ಯಯನ ನಡೆಸಲು ಅವಕಾಶ ಕೊಡುವಂತೆ ಸರ್ಕಾರವನ್ನು ಕೋರಿದ್ದೇವೆ. ಈ ಪ್ರದೇಶದ ಶ್ರೀಮಂತ ಪರಿಸರ ವಿಜ್ಞಾನ ಸಂಪತ್ತು ಮತ್ತು ಅದನ್ನು ಕಾಪಾಡುವ ಅಗತ್ಯತೆಯ ಬಗ್ಗೆ ಈ ಸಾಕ್ಷ್ಯಚಿತ್ರ ಕೂಡ ವಿವರ ನೀಡುವ ಕಾರ್ಯ ಮಾಡುತ್ತದೆ' ಎಂದು ವಿವರಿಸಿದರು.

ಈ ಪ್ರದೇಶದ ಮತ್ತು ಸುತ್ತಲಿನ ಭಾಗಗಳ ಮತ್ತಷ್ಟು ಅಧ್ಯಯನಕ್ಕೆ ಅನುಮತಿ ಸಿಕ್ಕರೆ ರಾಮ್ಸರ್ ಸಮಾವೇಶದ ಅಡಿಯಲ್ಲಿಯೇ ಸ್ಥಳಗಳನ್ನು ಪಟ್ಟಿ ಮಾಡಲು ಸಹಾಯಕವಾಗಲಿದೆ. ಅಲ್ಲದೇ ಸ್ಥಳೀಯ ಸಮುದಾಯಗಳೊಂದಿಗೆ ಸ್ಥಳ ಅಭಿವೃಧ್ಧಿಯ ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುವುದರ ಜತೆಗೆ ಅವರಿಗೆ ಗುಣಮಟ್ಟದ ಜೀವನ ಒದಗಿಸುವುದರ ಕಾರ್ಯಕ್ಕೆ ಸಹಾಯ ಮಾಡುತ್ತದೆ ಎಂದರು.

ಮಾಯಾ ಫಿಲ್ಮ್ಸ್ ಕುರಿತು

ಮಾಯಾ ಫಿಲ್ಮ್ಸ್ ಕುರಿತು

ಮಾಯಾ ಚಂದ್ರ ಅವರಿಂದ ಆರಂಭವಾದ ಚಿತ್ರ ನಿರ್ಮಾಣ ಸಂಸ್ಥೆಯೇ ಮಾಯಾ ಫಿಲ್ಮ್ಸ್. ಚಿತ್ರ ನಿರ್ಮಾಣದಲ್ಲಿ 20 ವರ್ಷಗಳ ಸುದೀರ್ಘ ಅನುಭವ ಹೊಂದಿದೆ. ಕಂಪನಿಯು ಹಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದೆ. ಸವಾಲಿನ ವಿಚಾರಗಳ ಮೇಲೆ ಚಿತ್ರ ನಿರ್ಮಿಸಿದೆ. ಪ್ರೇಕ್ಷಕರನ್ನು ಸೆಳೆಯಲು ಸಹಾಯ ಮಾಡುವುದು ಮತ್ತ ಕತೆ ಹೇಳುವ ಮಾಯಾ ಫಿಲ್ಮ್ಸ್ ನಂಬಿಕೆಯಾಗಿದೆ. ಭಾವೋದ್ರೇಕ, ಕಲ್ಪನೆ ಮತ್ತು ಕತೆ ಹೇಳುವಿಕೆಯ ಮನಸ್ಸು, ತಂಡವು ತನ್ನ ಉದ್ದೇಶ ಮತ್ತು ಸಂದೇಶವನ್ನು ಪ್ರೇಕ್ಷಕರತ್ತ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ.

ಚಿತ್ರಕೃಪೆ: ಮಾಯಾಚಂದ್ರ ಫೇಸ್ ಬುಕ್.

English summary
World Environment Day - 2019 witnessed the release of 'THE KRISHNA COSMIC CIRCLE OF LIFE - A Divine Co-existence of Man & Nature', a documentary by MAYA Films & Bangalore Environment Trust which was screened today at Vartha Bhavan.Drawing attention to Ecological Resurgence at Almatti and Narayanapura dams, in Karnataka, this documentary
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X