ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 1: ದಣಿವರಿಯದ ಕಾರ್ಮಿಕನಿಗೊಂದು ಸಲಾಂ!

By ದಿವ್ಯಶ್ರೀ.ವಿ ಬೆಂಗಳೂರು
|
Google Oneindia Kannada News

ಮೇ ಎಂದರೆ ಎಲ್ಲರಿಗೂ ನೆನಪಾಗುವುದು ಕಾರ್ಮಿಕರು. ಏಕೆಂದರೆ ಮೇ 1 ವಿಶ್ವದೆಲ್ಲೆಡೆ ಅನೇಕ ರಾಷ್ಟ್ರಗಳಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಆಚರಿಸುತ್ತಾರೆ.

Recommended Video

#InternationalLaboursDay: ಇಂದು ವಿಶ್ವ ಕಾರ್ಮಿಕರ ದಿನ | Oneindia Kannada

ಈ ದಿನದ ಇತಿಹಾಸವೆಂದರೆ 1886 ಮೇ ನಲ್ಲಿ ನಡೆದ ಒಂದು ಘಟನೆ ಚಿಕಾಗೋದ ಇಲಿನಾಯ್ಡ್ ಎಂಬ ಪ್ರದೇಶದ ಒಂದು ಮಾರುಕಟ್ಟೆಯಲ್ಲಿ ಓರ್ವ ಕಾರ್ಮಿಕನ ಮೇಲೆ ನಡೆದ ಒಂದು ದುರ್ಘಟನೆ. ಆ ದುರ್ಘಟನೆಯ ಹಿನ್ನೆಲೆಯಾಗಿ ಅಂದು ಒಂದು ಸಮಾವೇಶದಲ್ಲಿ ಪ್ಯಾರಿಸ್ ನಗರವು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಮೇ 1 ಜಾರಿಗೆ ಬರಲಿ ಎಂದು ನಿರ್ಧರಿಸಲಾಯಿತು. ಅಂದಿನಿಂದ ಇಡೀ ಪ್ರಪಂಚದ ಕಾರ್ಮಿಕರಿಗೆ ರಜಾ ದಿನವಾಗಿ ನಿರ್ಧಾರ ಕೈಗೊಂಡರು.

ಅರ್ಜೆಂಟಿನಾ, ಆಸ್ಟ್ರಿಯಾ, ಬಾಂಗ್ಲಾದೇಶ, ಭಾರತ, ಇಂಡೋನೇಷಿಯಾ, ಬ್ರೆಜಿಲ್, ಬೆಲ್ಜಿಯಂ, ಇಟಲಿ, ಮೆಕ್ಸಿಕೋ, ಮಲೇಶಿಯಾ, ಸಿಂಗಾಪೂರ ಇನ್ನು ಅನೇಕ ದೇಶಗಳಲ್ಲಿ ಮೇ 1 ಕಾರ್ಮಿಕ ದಿನಾಚರಣೆಯಾಗಿ ಆಚರಿಸುತ್ತಾರೆ ಮತ್ತು ಅಂದು ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ.

 May Day: Why Celebrating Labours Day In The World

ಕಾಯಕವೇ ಕೈಲಾಸ ಎಂದು ಹಗಲು ರಾತ್ರಿ ಎನ್ನದೆ ಸಮಾಜಕ್ಕಾಗಿ, ದೇಶಕ್ಕಾಗಿ ದುಡಿಯುತ್ತಿರುವ ಕಾರ್ಮಿಕರಿಗೆ ಮತ್ತು ಈ ಕೊರೊನಾ ಅಂತಹ ಮಾರಾಮಾರಿ ತುರ್ತು ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ತಮ್ಮ ಕಾರ್ಯವನ್ನು ಮಾಡುತ್ತಿರುವ ಎಲ್ಲಾ ಕಾರ್ಮಿಕರಿಗೆ ನಮ್ಮದೊಂದು ಸಲಾಂ.

ಈ ಕಾರ್ಮಿಕರು ಇಲ್ಲದೆ ನಮ್ಮ ದೇಶವಾಗಲಿ, ನಾವಾಗಲಿ ಸುರಕ್ಷಿತವಾಗಿರಲು ಅಸಾಧ್ಯವೇ ಸರಿ. ಮೇ 1ಅನ್ನು ವರ್ಕರ್ಸ್ ಡೇ, ಲೇಬರ್ಸ್ ಡೇ, ಮೇ ಡೇ ಎಂದು ಕೂಡ ಕರೆಯುತ್ತಾರೆ.

ಈ ಕಾರ್ಮಿಕರ ದಿನಾಚರಣೆ ಮೊಟ್ಟಮೊದಲು ಅಮೆರಿಕಾದಲ್ಲಿ ಮೊದಲು ಆರಂಭವಾಗಿತ್ತು. ಈ ಲೇಬರ್ ಡೇ ಯನ್ನು ನಮಗಾಗಿ ಕಾಯಕ ಮಾಡುವ ಕಾರ್ಮಿಕರಿಗೆ ಗೌರವವನ್ನು ಸಲ್ಲಿಸುವ ದಿನವಾಗಿದೆ.

 May Day: Why Celebrating Labours Day In The World

ನಮ್ಮ ಸಮಾಜಕ್ಕೆ ಕಾರ್ಮಿಕ ಎಂದರೆ ಕೇವಲ ಹಣಕ್ಕಾಗಿ ಕೆಲಸ ಮಾಡುವವನು ಎಂದು ಅನೇಕರು ತಾತ್ಸಾರದಿಂದ ನೋಡುತ್ತಾರೆ. ಆದರೆ ಆ ಕಾರ್ಮಿಕರಿಲ್ಲದೆ ತಮ್ಮ ಎಲ್ಲಾ ಕಾರ್ಯವು ಶೂನ್ಯ ರೂಪವಾಗುವುದು ಎಂದು ಅವರಿಗೆ ಗೊತ್ತಿಲ್ಲ ದೇಶದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿ ಕಾರ್ಮಿಕರೇ.

ಕೆಲವರು ಮನೆಯಲ್ಲಿ ಕೆಲಸ ಮಾಡುತ್ತಾರೆ, ಇನ್ನು ಇತರರು ಹೊರಗಡೆ ಕೆಲಸ ಮಾಡುತ್ತಾರೆ. ಕೆಲವರಿಗೆ ದೊಡ್ಡ ಸಂಭಾವನೆ ಇನ್ನು ಕೆಲವರಿಗೆ ಚಿಕ್ಕ ಸಂಭಾವನೆ. ಹಾಗಂತ ಕಾರ್ಮಿಕರಲ್ಲಿ ಮೇಲು-ಕೀಳು ಎಂಬ ಭೇದ ಭಾವ ಮಾಡಬಾರದು. ಎಲ್ಲಾ ವರ್ಗದ ಕಾರ್ಮಿಕರಿಗೆ ಸಮಾನವಾದ ಗೌರವವನ್ನು ನೀಡಲೇಬೇಕು. ಉದ್ಯೋಗಿ ಮತ್ತು ಉದ್ಯಮಿಗೆ ಒಂದೇ ಗೌರವ ಇರಬೇಕು.

ಇನ್ನು ಈ ಕೊರೊನಾ ಅಂತಹ ತುರ್ತು ಸಂದರ್ಭದಲ್ಲಿ ವಿಶೇಷವಾಗಿ ಈ ಸಮಾಜಕ್ಕೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ, ಪೊಲೀಸ್ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ, ಹೋಟೆಲ್ ಸಿಬ್ಬಂದಿ ವರ್ಗದವರಿಗೆ ಈ ದೇಶದ ಜನತೆಯ ಪರವಾಗಿ ಧನ್ಯವಾದಗಳು. ಒಟ್ಟಾರೆ ಇಡೀ ದೇಶದ ಗೌರವಾತ್ಮಕ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆಯ ಅನಂತ ಅನಂತ ಶುಭಾಶಯಗಳು.

English summary
Labour Day: Here is history of Celebrating Labours Day In The World. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X