ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕಡಿಮೆಯಾಯ್ತು ಚಳಿ, ತುಂತುರು ಮಳೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಜನವರಿ 26: ಕಳೆದ ಒಂದು ತಿಂಗಳಿಂದ ಬೆಂಗಳೂರಲ್ಲಿ ತೀವ್ರ ಚಳಿ ಆವರಿಸಿಕೊಂಡಿತ್ತು ಆದರೆ ಕಳೆದೆರೆಡು ದಿನಗಳಿಂದ ಗರಿಷ್ಠ ತಾಪಮಾನ ಏರಿಕೆಯಾಗಿದ್ದು ಸೆಕೆ ಆರಂಭವಾಗಿದೆ.

ಕಳೆದ ಎರಡು ದಿನಗಳಲ್ಲಿ ನಗರದಲ್ಲಿದ್ದ ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯಸ್‌ನಿಂದ 17.9ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಮುಂಜಾನೆ ಬಹುತೇಕ ಪ್ರದೇಶಗಳಲ್ಲಿ ಮಂಜು ಕವಿದ ವಾತಾವರಣ ಮಾಯವಾಗಿದೆ. ಜವರಿ 27-28ರಂದು ತುಂತುರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಶರದ್ ಋತು ಆಗಮನ, ದೇಶದ 10 ಅತಿ ಹೆಚ್ಚು ಶೀತ ಪ್ರದೇಶಗಳಿವುಶರದ್ ಋತು ಆಗಮನ, ದೇಶದ 10 ಅತಿ ಹೆಚ್ಚು ಶೀತ ಪ್ರದೇಶಗಳಿವು

ಗಾಳಿ ಬೀಸುವ ದಿಕ್ಕು ಬದಲಾಗಿರುವುದರಿಂದ ಹಾಗೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ದಟ್ಟ ಮೋಡಗಳ ಸಾಲು ಸೃಷ್ಟಿಯಾಗಿರುವುದರಿಂದ ದಿಢೀರ್ ಬದಲಾವಣೆ ಗೋಚರಿಸಿದೆ. ಜನವರಿ ಅಂತ್ಯದಲ್ಲಿ ಕನಿಷ್ಠ ತಾಪಮಾನ ಇನ್ನೂ ಒಂದೆರೆಡು ಡಿಗ್ರಿಗೆ ಏರುವ ಸಾಧ್ಯತೆ ಇದೆ. ಹಾಗೆಯೇ ಗರಿಷ್ಠ ತಾಪಮಾನದಲ್ಲಿ ಕೂಡ ಬದಲಾವಣೆ ಕಂಡುಬರಲಿದೆ.

Maximum Temperature increasing across the state

ಸಂಕ್ರಾಂತಿ ಬಳಿಕ ಹೆಚ್ಚಾದ ಚಳಿ, ಒಂದು ವಾರ ಹೀಗೇನೇ!ಸಂಕ್ರಾಂತಿ ಬಳಿಕ ಹೆಚ್ಚಾದ ಚಳಿ, ಒಂದು ವಾರ ಹೀಗೇನೇ!

ಬೆಂಗಳೂರು ಕೇಂದ್ರ ಭಾಗದಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18.8 ಡಿಗ್ರಿ ಸೆಲ್ಸಿಯಸ್, ಕೆಐಎನಲ್ಲಿ ಗರಿಷ್ಠ 29.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 17.9 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 29.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

English summary
Temperature are increasing across the state, There are chances of light rain in some parts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X