ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ದಿ ರನ್' ಸಮುದಾಯ ಓಟದಲ್ಲಿ 2500 ಕ್ಕೂ ಹೆಚ್ಚು ಫಿಟ್ನೆಸ್ ಉತ್ಸಾಹಿಗಳು

|
Google Oneindia Kannada News

ಬೆಂಗಳೂರು, ಮಾರ್ಚ್ 24, 2019: ದೇಶದಲ್ಲಿ ಪ್ರಮುಖ ಖಾಸಗಿ ಲೈಫ್ ಇನ್ಸುರೆನ್ಸ್ ಕಂಪನಿಗಳಲ್ಲಿ ಒಂದಾಗಿರುವ ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ಇಂದು ತನ್ನ 'ಮ್ಯಾಕ್ಸ್ ಲೈಫ್ ಇನ್ಸುರೆನ್ಸ್ -ದಿ ರನ್' ಅನ್ನು ಬೆಂಗಳೂರಿನಲ್ಲಿ ಅಂತ್ಯಗೊಳಿಸಿತು. ಇದು ಭಾರತದ ಪ್ರೀಮಿಯರ್ ಸಮುದಾಯ ಓಟಗಳಲ್ಲಿ ಒಂದಾಗಿದ್ದು, ನಗರ ಪ್ರದೇಶದ ಸಮುದಾಯವು ಉತ್ತಮ ಆರೋಗ್ಯ, ಕ್ಷೇಮ ಮತ್ತು ಒಟ್ಟಾಗಿ ಜೀವನಶೈಲಿಯನ್ನು ಬೆಳೆಸಿಕೊಳ್ಳುವ ಮಹತ್ವವನ್ನು ಸಾರುವ ಉದ್ದೇಶದಿಂದ ಈ ಓಟವನ್ನು ಆಯೋಜಿಸಲಾಗಿತ್ತು.

ಈ ಓಟವು ಬೆಂಗಳೂರಿನ ಸುಲಿವಾನ್ ಪೊಲೀಸ್ ಮೈದಾನದಲ್ಲಿ ನಡೆದಿದ್ದು, ತಮ್ಮ ಜೀವವನ್ನು ಪಣಕ್ಕಿಟ್ಟು ಸಮುದಾಯದ ರಕ್ಷಣೆ ಮತ್ತು ಸ್ವಾತಂತ್ರ್ಯಕ್ಕಾಗಿ ಸೇವೆಯನ್ನು ಸಲ್ಲಿಸುತ್ತಿರುವವರಿಗೆ ಈ ಓಟವನ್ನು ಅರ್ಪಣೆ ಮಾಡಲಾಯಿತು. ಈ ಸೇವಾವಲಯದಲ್ಲಿ ದೇಶ ಮತ್ತು ಸಮುದಾಯವನ್ನು ಸುರಕ್ಷಿತವಾಗಿಡುವಲ್ಲಿ ಸೇವೆ ಸಲ್ಲಿಸುತ್ತಿರುವ ಪುರುಷರು ಮತ್ತು ಮಹಿಳೆಯರಿಗೆ ಓಪನ್ ಪ್ರಶಸ್ತಿ ವಿತರಿಸಲಾಯಿತು.

ಐರನ್‍ಮ್ಯಾನ್ ಟ್ರಯಥ್ಲಾನ್ ಅನ್ನು ಪೂರ್ಣಗೊಳಿಸಿದ ಭಾರತೀಯ ಸೇನಾ ಅಧಿಕಾರಿಗಳಲ್ಲಿ ಒಬ್ಬರಾದ ಮೇಜರ್ ಜನರಲ್ ವಿಕ್ರಂ ದೋಗ್ರಾ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಭಾಸ್ಕರ್‍ರಾವ್ ಅವರು ಈ ಸಂದರ್ಭದಲ್ಲಿದ್ದು, ಓಟಗಾರರನ್ನು ಪ್ರೇರೇಪಿಸಿದರು.

Max Life Insurance The Run Bengaluru

ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್-ದಿ ರನ್' ಅನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿತ್ತು. 5 ಕಿಲೋಮೀಟರ್ ರನ್ ಅನ್ನು ಕುಟುಂಬ ಸದಸ್ಯರಿಗೆ (8 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ) ಮತ್ತು 10 ಕಿಲೋಮೀಟರ್ ರನ್ (15 ವರ್ಷ ಮೇಲ್ಪಟ್ಟವರಿಗೆ) ನಡೆದಿದ್ದು, ಇದರಲ್ಲಿ ವಿಜೇತರಾದವರಿಗೆ 2 ಲಕ್ಷ ರೂಪಾಯಿ ಮೊತ್ತದ ಬಹುಮಾನಗಳನ್ನು ನೀಡಲಾಯಿತು. ಜಯನಗರ ಜಾಗ್ವಾರ್ಸ್‍ನ ಪ್ರಮೋದ್ ದೇಶಪಾಂಡೆ, ಖ್ಯಾತಿ ಓಟಗಾರ್ತಿ ಶ್ವೇತಾ ಮೌರ್ಯ ಸೇರಿದಂತೆ ಹಲವಾರು ಮಂದಿ ಖ್ಯಾತ ಓಟಗಾರರು ಈ ರನ್‍ನಲ್ಲಿ ಭಾಗವಹಿಸಿದ್ದರು.

ಪುರುಷರ ಸೇವಾ ವಿಭಾಗದಲ್ಲಿ ಬಿ.ಕೆ.ಕುಮಾರಸ್ವಾಮಿ ಅವರು 36 ನಿಮಿಷ ಮತ್ತು 21 ಸೆಕೆಂಡುಗಳಲ್ಲಿ 10 ಕಿಲೋಮೀಟರ್ ದೂರವನ್ನು ಓಡಿ ಪ್ರಥಮ ಸ್ಥಾನ ಗಳಿಸಿ ವಿಜೇತರಾದರೆ, ಮಹಿಳೆಯರ ಓಪನ್ ವಿಭಾಗದಲ್ಲಿ ಪ್ರೀಣು ಯಾದವ್ ಅವರು 10 ಕಿಲೋಮೀಟರ್ ದೂರವನ್ನು 40 ನಿಮಿಷ ಮತ್ತು 55 ಸೆಕೆಂಡುಗಳಲ್ಲಿ ಓಡಿ ಪ್ರಥಮ ಸ್ಥಾನ ಪಡೆದರು.

ನೋಂದಣಿ ಮಾಡಿಸಿಕೊಂಡಿದ್ದ ಪ್ರತಿಯೊಬ್ಬ ಓಟಗಾರರ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಕಾಂಪ್ಲಿಮೆಂಟರಿ ಗೆಸ್ಟ್ ಪ್ರವೇಶ ನೀಡಲಾಗಿತ್ತು. ನಿರ್ಭಯ ಪ್ರಕರಣದ ನಂತರ ಭಾರತದಲ್ಲಿ ಮಹಿಳೆಯರಲ್ಲಿ ಮೌಲ್ಯಾಧಾರಿತ ಕೌಶಲ್ಯಗಳು ಮತ್ತು ಸ್ವಾವಲಂಬನೆಯನ್ನು ತರುವ ಮೂಲಕ ಅವರ ಸ್ಥಿತಿಗತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಆರಂಭವಾಗಿರುವ ಸ್ವಯಂ ಸೇವಾ ಸಂಸ್ಥೆಯಾದ ಜ್ವಾಲಾ ಫೌಂಡೇಶನ್ ವತಿಯಿಂದ ಸ್ಪರ್ಧಿಗಳಿಗೆ ರನ್ನಿಂಗ್ ಕಿಟ್‍ಗಳನ್ನು ವಿತರಿಸಲಾಯಿತು.

Max Life Insurance The Run Bengaluru

ಈ ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್-ದಿ ರನ್' ಅನ್ನು ವಿನೂತನವಾಗಿ ವಿನ್ಯಾಸಗೊಳಿಸಲಾಗಿತ್ತು. ಇಲ್ಲಿ ವಿಶೇಷವಾಗಿ ದಿ ರನ್ ವಿಲೇಜ್' ಎಂಬ ಹೆಸರಿನ ಫಿಟ್‍ನೆಸ್ ಅರೇನಾವನ್ನು ಸ್ಥಾಪಿಸಲಾಗಿತ್ತು. ಸ್ಪರ್ಧಿಗಳು ಮತ್ತು ಕುಟುಂಬಗಳು ಸ್ನ್ಯಾಪ್ ಫಿಟ್‍ನೆಸ್‍ನ ಝುಂಬಾ, ಜ್ವಾಲಾದ ಸ್ವಯಂರಕ್ಷಣೆಯ ಕಾರ್ಯಾಗಾರ, ಮಕ್ಕಳ ಆಟದ ವಲಯ, ಆರೋಗ್ಯಕರ ಆಹಾರದ ಕುರಿತಾದ ಕಾರ್ಯಾಗಾರಗಳು ಮತ್ತು ಲೈವ್ ಮ್ಯೂಸಿಕ್ ಸೇರಿದಂತೆ ಇನ್ನಿತರೆ ಮನೋರಂಜನೆಯ ರುಚಿಯನ್ನು ಸವಿದರು.

ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ಭಾರತದಲ್ಲಿ ಮುಂಚೂಣಿಯಲ್ಲಿರುವ ಲೈಫ್ ಇನ್ಷೂರೆನ್ಸ್ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಮ್ಯಾಕ್ಸ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಮತ್ತು ಮಿತ್ಸುಯಿ ಸುಮಿಟೊಮೊ ಇನ್ಷೂರೆನ್ಸ್ ಕಂಪನಿಯ ಜಂಟಿ ಸಹಭಾಗಿತ್ವದ ಕಂಪನಿಯಾಗಿದೆ. ಮ್ಯಾಕ್ಸ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯು ಭಾರತದ ಬಹು ವ್ಯವಹಾರಗಳ ಕಾರ್ಪೊರೇಶನ್‍ನ ಒಂದು ಭಾಗವಾಗಿದ್ದರೆ, ಮಿತ್ಸುಯಿ ಸುಮಿಟೊಮೊ ಇನ್ಷೂರೆನ್ಸ್ ಕಂಪನಿಯು ಎಂಎಸ್ & ಎಡಿ ಇನ್ಷೂರೆನ್ಸ್ ಗ್ರೂಪ್‍ನ ಒಂದು ಭಾಗವಾಗಿದೆ. ಇದು ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಇನ್ಷೂರೆನ್ಸ್ ಕಂಪನಿಗಳಲ್ಲಿ ಒಂದಾಗಿದೆ. ತನ್ನ ಗ್ರಾಹಕರ ಭವಿಷ್ಯದ ಹಣಕಾಸು ಭದ್ರತೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ನೆಚ್ಚಿನ ಕಂಪನಿ ಎನಿಸಿದೆ.

English summary
Max Life Insurance The Run is India’s Premier community run that propagates the importance of educating the community about fitness and Reviving the spirit of ‘participating in activities together’ as a community to create a health and fitness conscious society. The event held at Sullivan Police Hockey Ground, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X