ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೇನಾ ಪಡೆಗಳ ಯೋಧರ ಕುಟುಂಬಗಳಿಗೆ ಮ್ಯಾಕ್ಸ್ ಲೈಫ್‌ ಇನ್ಶೂರೆನ್ಸ್‌ನಿಂದ 'ರಕ್ಷಕ್' ಯೋಜನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 19, 2020: ಹಲವಾರು ದಶಕಗಳಿಂದ ಭಾರತೀಯ ಸೇನೆ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವ ಮೂಲಕ ದೇಶಕ್ಕೆ ರಕ್ಷಕರ ಪಾತ್ರವನ್ನು ನಿರ್ವಹಿಸುತ್ತಿದೆ. ಈ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸುರಕ್ಷಿತ ಮತ್ತು ಭದ್ರತೆಯ ಜೀವನವನ್ನು ಸಾಗಿಸುವಲ್ಲಿ ನೆರವಾಗುತ್ತಿದೆ.

Recommended Video

Gold ತೆಗೆದುಕೊಳ್ಳೋದು ಇನ್ನು ಬಹಳ ಕಷ್ಟ | Oneindia Kannada

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಮ್ಯಾಕ್ಸ್ ಲೈಫ್/ಕಂಪನಿ) ಭಾರತೀಯ ಸೇನೆಗೆ 'ರಕ್ಷಕ್' ಎಂಬ ಉಪಕ್ರಮವನ್ನು ಕೊಡುಗೆಯಾಗಿ ನೀಡುತ್ತಿದೆ.

ಕೊರೊನಾವೈರಸ್ ಸೋಂಕಿತರ ಆಸ್ಪತ್ರೆ ಶುಲ್ಕ ಹೆಚ್ಚಾಗುತ್ತಿರುವುದು ಏಕೆ?ಕೊರೊನಾವೈರಸ್ ಸೋಂಕಿತರ ಆಸ್ಪತ್ರೆ ಶುಲ್ಕ ಹೆಚ್ಚಾಗುತ್ತಿರುವುದು ಏಕೆ?

ಮ್ಯಾಕ್ಸ್ ಲೈಫ್ ನ ಉಪಕ್ರಮವಾದ ರಕ್ಷಕ್ ಅಡಿಯಲ್ಲಿ ನಿವೃತ್ತ ಸೈನಿಕರು, ಅವರ ಸಂಬಂಧಿಕರು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಪತ್ನಿಯರು ಅಂದರೆ ವೀರನಾರಿಯರಿಗೆ ಮ್ಯಾಕ್ಸ್ ಲೈಫ್ ನ ರಕ್ಷಕ್ ತಂಡಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಮತ್ತು ಸಮುದಾಯಗಳು ಮತ್ತು ದೇಶದ ಯೋಗಕ್ಷೇಮಕ್ಕೆ ಕೊಡುಗೆ ನೀಡುವಂತೆ ಮಾಡಲಾಗುತ್ತದೆ.

Max Life Insurance: Rakshak Yojana For Soldiers

ರಕ್ಷಕ್ ಸೇವೆಗಳು 40 ಕ್ಕೂ ಹೆಚ್ಚು ಕಂಟೋನ್ಮೆಂಟ್ ಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಇಲ್ಲಿ ಸೇನಾ ಪಡೆಗಳ ಸಿಬ್ಬಂದಿ ಸೂಕ್ತವಾದ ಜೀವವಿಮೆ ಯೋಜನೆಗಳನ್ನು ಖರೀದಿಸುವ ನಿಟ್ಟಿನಲ್ಲಿ ನೆರವಾಗುತ್ತಿದೆ.

ಈ ಉಪಕ್ರಮದ ಬಗ್ಗೆ ಮಾತನಾಡಿದ ಮ್ಯಾಕ್ಸ್ ಲೈಫ್ ನ ನಿರ್ದೇಶಕ ಮತ್ತು ಮುಖ್ಯ ಮಾರುಕಟ್ಟೆ ಅಧಿಕಾರಿ ಅಲೋಕ್ ಭಾನ್ ಅವರು, ನಮ್ಮ ದೇಶಕ್ಕೆ ಸೇನಾ ಪಡೆಗಳು ಬೆನ್ನೆಲುಬಾಗಿವೆ ಮತ್ತು ಅವರು ನೀಡುತ್ತಿರುವ ರಕ್ಷಣೆಯು ಪ್ರಮುಖವಾಗಿದೆ. ಈ ಸ್ವಾತಂತ್ರ್ಯ ದಿನದಂದು ಭಾರತದ ಸೇನಾ ಪಡೆಗಳಿಗೆ ಧನ್ಯವಾದಗಳನ್ನು ಅರ್ಪಿಸಲೆಂದು ರಕ್ಷಕ್ ಉಪಕ್ರಮವನ್ನು ಪರಿಚಯಿಸಿದ್ದೇವೆ. ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ನ ರಕ್ಷಕ್ ನೊಂದಿಗೆ ಸೇನಾ ಸಿಬ್ಬಂದಿ, ನಿವೃತ್ತ ಯೋಧರು ನಮಗೆ ರಕ್ಷಣೆ ನೀಡಿದ ರೀತಿಯಲ್ಲಿ ಅವರ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡಲಾಗುತ್ತದೆ'' ಎಂದು ತಿಳಿಸಿದರು.

ಸಂಕಷ್ಟದ ಪರಿಸ್ಥಿತಿಗಳು, ಯುದ್ಧ ಅಥವಾ ಯುದ್ಧದಂತಹ ಪರಿಸ್ಥಿತಿಗಳಲ್ಲಿ ಸೇನಾ ಸಿಬ್ಬಂದಿ ಮತ್ತು ಅವರ ಕುಟುಂಬ ಹಾಗೂ ಪ್ರೀತಿ ಪಾತ್ರರಿಗೆ ಆರ್ಥಿಕ ರಕ್ಷಣೆ ನೀಡಲೆಂದು ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ನ ರಕ್ಷಕ್ ಜೀವ ವಿಮೆ ಪರಿಹಾರಗಳನ್ನು ಒದಗಿಸುತ್ತದೆ. ಇದೊಂದು ವಿನೂತನವಾದ ಪರಿಹಾರವಾಗಿದ್ದು, ಸೇನಾ ಪಡೆಗಳ ಯೋಧರ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡಲೆಂದೇ ವಿನ್ಯಾಸಗೊಳಿಸಿರುವ ಯೋಜನೆಯಾಗಿದೆ.

English summary
Max life insurance introduced Rakshak Insurance Yojana for Indian Army Soldiers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X