ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.9-10 ರ ಮಾತುಕತೆ@ಮುನ್ನೋಟದಲ್ಲಿ ತೇಜಸ್ವಿ, ಶಿಶುನಾಳ ಷರೀಫ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 4: ಸಾಹಿತ್ಯ, ಫೋಟೋಗ್ರಫಿ, ನಾಟಕ, ಸಿನೆಮಾ, ಕೃಷಿ, ಸಾಮಾಜಿಕ ಚಳವಳಿ, ಕನ್ನಡಪರ ಚಿಂತನೆ ಎಲ್ಲವುಗಳ ಮಿಶ್ರಣವಾದ ಪೂರ್ಣಚಂದ್ರ ತೇಜಸ್ವಿ ಕನ್ನಡ ಕಂಡ ಅತ್ಯದ್ಭುತ ಸಾಹಿತಿ ಎಂಬುದರಲ್ಲಿ ಎರಡು ಮಾತಿಲ್ಲ.
ರಾಷ್ಟ್ರಕವಿ ಕುವೆಂಪು ಅವರ ಮಗನಾದರೂ ಸಾಹಿತ್ಯ ಪ್ರಕಾರದಲ್ಲಿ ತಮ್ಮದೇ ಸ್ವಂತಿಕೆ ರೂಢಿಸಿಕೊಂಡ ಕಾರಣಕ್ಕೆ ತೇಜಸ್ವಿ ಅವರು ಮತ್ತಷ್ಟು ಇಷ್ಟವಾಗುತ್ತಾರೆ.

'ತೇಜಸ್ವಿ ಎಂದೆಂದಿಗೂ' ಪ್ರಬಂಧ ಸ್ಪರ್ಧೆ ಆಯೋಜನೆ'ತೇಜಸ್ವಿ ಎಂದೆಂದಿಗೂ' ಪ್ರಬಂಧ ಸ್ಪರ್ಧೆ ಆಯೋಜನೆ

ಸೆಪ್ಟೆಂಬರ್ 8 ರಂದು ಜನಿಸಿದ ತೇಜಸ್ವಿ ಅವರ 80 ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ, ಮೇರುಸಾಹಿತಿಯ ಬದುಕು-ಬರಹವನ್ನು ಮೆಲುಕು ಹಾಕುವ, 'ಕನ್ನಡಕ್ಕೊಬ್ಬರೇ ತೇಜಸ್ವಿ' ಎಂಬ ಕಾರ್ಯಕ್ರಮವನ್ನು 'ಮುನ್ನೋಟ' ಬಳಗ ಮಾಡುತ್ತಿದೆ.

Mathukathe@Munnota: Sep 9th-10th in Bengaluru on Poornachandra Tejaswi and Shishunala Sharif

ಸೆಪ್ಟೆಂಬರ್ 9, ಶನಿವಾರದಂದು ಸಂಜೆ 6 ಗಂಟೆಗೆ ಬೆಂಗಳೂರಿನ ಬಸವನಗುಡಿಯ ಸೌತ್ ಅವಿನ್ಯೂ ಕಾಂಪ್ಲೆಕ್ಸ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಅಧ್ಯಾಪಕರೂ, ವಿಮರ್ಶಕರೂ ಆದ ಎಚ್.ಎಸ್.ಸತ್ಯನಾರಾಯಣ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಶಿಶುನಾಳ ಶರೀಫರ ಸ್ಮರಣೆ
ಅಧ್ಯಾತ್ಮದ ಮೇರುನೀತಿಯನ್ನು ಸುಲಲಿತ ಭಾಷೆಯಲ್ಲಿ ಅರುಹಿ, ಸಾಮಾನ್ಯನಿಗೂ ಅಧ್ಯಾತ್ಮದ ಆಳ ಅರ್ಥವಾಗುವಂತೆ ಮಾಡಿದ ಸಂತ ಶಿಶುನಾಳ ಶರೀಫರ ಸ್ಮರಣೆಯ ಕಾರ್ಯಕ್ರಮವನ್ನೂ ಮುನ್ನೋಟ ಹಮ್ಮಿಕೊಂಡಿದ್ದು, ವಾರಾಂತ್ಯಕ್ಕೆ ಸಾಹಿತ್ಯಾಸಕ್ತರಿಗೆ, ಸಹೃದಯಿಗಳಿಗೆ ಡಬಲ್ ಧಮಾಕಾ ಕೊಡುಗೆ ನೀಡಿದೆ!

'ಶಿಶುನಾಳ ಶರೀಫನೆಂಬ ಕನ್ನಡದ ಸಂತ' ಎಂಬ ಈ ಕಾರ್ಯಕ್ರಮ, ಸೌತ್ ಅವಿನ್ಯೂ ಕಾಂಪ್ಲೆಕ್ಸ್ ನಲ್ಲೇ ಸೆಪ್ಟೆಂಬರ್ 10, ಭಾನುವಾರದಂದು ನಡೆಯಲಿದೆ. ಈ ಕಾರ್ಯಕ್ರಮವನ್ನು ದೂರದರ್ಶನ ದಕ್ಷಿಣ ವಲಯದ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಮಹೇಶ್ ಜೋಶಿ ನಡೆಸಿಕೊಡಲಿದ್ದಾರೆ. ಸಾಹಿತ್ಯಾಸಕ್ತರು ಭಾಗವಹಿಸುವಂತೆ ಕೋರಲಾಗಿದೆ.

English summary
'Munnota' team is organising two programmes on 9th and 10th of September. One is a speech on well known Kannada writer and Rashtrakavi Kuvempu's son Poornachandra tejaswi, that is on 9th Sep. and a speech on famous kannada poet Shishinala Sharif on 10th Sep. The programme will be taking place South Avenue complex in Basavanagudi, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X