• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಸ್ಟರ್ ಗೆ 80, ಲಂಚಕ್ಕೆ 50ರ ಸಂಭ್ರಮ

By Mahesh
|

ಬೆಂಗಳೂರು, ಫೆ.11: ಹಿರಿಯ ರಂಗ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಈಗ 80 ರ ಎಳೆ ವಯಸ್ಸು. ಹಿರಣ್ಣಯ್ಯ ಅವರ ಲಂಚಾವತಾರ ನಾಟಕಕ್ಕೆ ಈಗ 50 ವರ್ಷ ತುಂಬಿದೆ. ಕೆ. ಹಿರಣ್ಣಯ್ಯಾಸ್ ಆರ್ಟ್ ಫೌಂಡೇಶನ್ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ 'ಮಾಸ್ಟರ್ ‌ಗೆ 80, ಲಂಚಕ್ಕೆ 50ರ ಸಂಭ್ರಮಕ್ಕೆ ಚಾಲನೆ ನೀಡಿದೆ.

ಯಕ್ಷಗಾನ ಮತ್ತು ನಾಟಕಕ್ಕೆ ಸಾವಿಲ್ಲ ಎಂಬುವುದು ಸತ್ಯ. ಲಂಚಾವತಾರ 11,000 ಪ್ರದರ್ಶನ ಕಂಡಿದೆ. ಭಾರತ ರಂಗಭೂಮಿಗೆ ಹಿರಣ್ಣಯ್ಯ ಅವರ ಕಾಣಿಕೆ ಅಪಾರ. ಬೌದ್ಧಿಕ, ಸೃಜನಶೀಲ ಕಲಾವಿದ. ತಮ್ಮನ್ನು ತಾವು ಬ್ರಾಂಡ್ ಮಾಡಿಕೊಳ್ಳುವುದನ್ನು ಬಲ್ಲವರಾಗಿದ್ದವರು ಹಿರಣ್ಣಯ್ಯ ಅವರು ತಮ್ಮ ತಂದೆ ಕಲ್ಚರ್ಡ್ ಕಾಮೆಡಿಯನ್ ಕೆ. ಹಿರಣ್ಣಯ್ಯ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಕೆ. ಹಿರಣ್ಣಯ್ಯ ಮಿತ್ರ ಮಂಡಳಿಯನ್ನು ಸ್ಥಾಪಿಸಿದ ಹಿರಣ್ಣಯ್ಯ ಅವರು ದೇವದಾಸಿ, ಎಚ್ಚಮನಾಯಕ, ಮಕ್ಮಲ್ ಟೋಪಿ, ಪಶ್ಚಾತ್ತಾಪ, ನಾಟಕಗಳ ಮೂಲಕ ಮನೆ ಮನಗಳನ್ನು ತಲುಪಿದರು. ಇವರ ಏಕಮಾತ್ರ ಪುತ್ರರಾದ ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ಅವರು ಕೂಡಾ ವೃತ್ತಿ ರಂಗಭೂಮಿಗೆ ಹೊಸ ತಿರುವನ್ನು ನೀಡಿ ರಾಜಕೀಯ ಓರೆ ಕೋರೆಗಳನ್ನು ವಿಡಂಬನೆಯ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ. ಮಾಸ್ಟರ್ ಹಿರಣ್ಣಯ್ಯ ಅವರ ಮಗನಾದ ಚಿ|| ಬಾಬು ಹಿರಣ್ಣಯ್ಯ ಅವರು ತಮ್ಮ ತಾತ ಹಾಗೂ ತಂದೆಯವರ ಹಾದಿಯಲ್ಲೇ ಸಾಗಿದ್ದಾರೆ.

ಮಾಸ್ಟರ್ ಹಿರಣ್ಣಯ್ಯ ಅವರು ತಮ್ಮ ತಂದೆ ಹೆಸರಿನಲ್ಲಿ ಟ್ರಸ್ಟ್ ಆರಂಭಿಸಿ ರಂಗ ಸಮುಚ್ಚಯ ನಿರ್ಮಾಣ, ರಂಗಶಾಲೆ ನಿರ್ಮಾಣ, ರಂಗ ಗ್ರಂಥಾಲಯ ಹಾಗೂ ರಂಗಭೂಮಿಗೆ ಸೇವೆ ಸಲ್ಲಿಸಿದವರನ್ನು ಗುರುತಿಸಿ ನೆರವು ನೀಡುತ್ತಾ ಬಂದಿದೆ.

ಮಾಸ್ಟರ್ ಗೆ 50 : ಡಾ. ಮಾಸ್ಟರ್ ಹಿರಣ್ಣಯ್ಯ ಅವರು 11 ಸಾವಿರಕ್ಕೂ ಹೆಚ್ಚು ಪ್ರದರ್ಶನಗೊಂಡ 'ಲಂಚಾವತಾರ', 6 ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡಿರುವ 'ನಡುಬೀದಿ ನಾರಾಯಣ', ತುರ್ತು ಪರಿಸ್ಥಿತಿ ಬಗ್ಗೆ ಬಂದ 'ಕಪಿಮುಷ್ಟಿ' ಮುಂತಾದ ನಾಟಕಗಳನ್ನು ಸಮಾಜಕ್ಕೆ ನೀಡಿ, ಜನ ಜಾಗೃತಿ ಮೂಡಿಸಿದ್ದಾರೆ.

ಮೈಸೂರಿನಲ್ಲಿ 15.02.1934 ರಂದು ಜನಿಸಿದ ಮಾಸ್ಟರ್ ಅವರು ಕೆ. ಹಿರಣ್ಣಯ್ಯ ಹಾಗೂ ಶಾರದಮ್ಮ ದಂಪತಿಯ ಮುದ್ದಿನ ಕೂಸಾಗಿ ಬೆಳೆದರು. ಸೀನಿಯರ್ ಇಂಟರ್ ಮೀಡಿಯಟ್ ತನಕ ಓದಿದ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಕಲೆ ರಕ್ತಗತವಾಗಿ ಒಲಿದು ಬಂದಿತ್ತು. 1953ರಲ್ಲಿ ತಂದೆ ನಿಧನ ನಂತರ ನಾಟಕ ತಂಡವನ್ನು ಸಂಭಾಳಿಸಿ ಇಂದಿಗೂ ಅದನ್ನು ಬೆಳೆಸಿಕೊಂಡು ಬಂದಿದ್ದಾರೆ. 1958ರಲ್ಲಿ ಶಾಂತಮ್ಮ ಅವರನ್ನು ಮದುವೆಯಾದ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಬಾಬು ಹಿರಣ್ಣಯ್ಯ ಸೇರಿದಂತೆ ಐವರು ಮಕ್ಕಳು 11 ಜನ ಮೊಮ್ಮಕ್ಕಳಿದ್ದಾರೆ.

ಮಾಸ್ಟರ್ ‌ಗೆ 80, ಲಂಚಕ್ಕೆ 50ರ ಸಂಭ್ರಮದಲ್ಲಿ ಬಿ.ವಿ. ರಾಜಾರಾಂ ಅವರು ನಿರ್ದೇಶಿಸಿರುವ ಮುಖ್ಯಮಂತ್ರಿ ಚಂದ್ರು ಅಭಿನಯದ 'ಮುಖ್ಯಮಂತ್ರಿ' ನಾಟಕವನ್ನು ಪ್ರದರ್ಶಿಸಲಾಗಿದೆ. ಈ ಸಂಭ್ರಮ ಫೆ.16ರ ತನಕ ಮುಂದುವರೆಯಲಿದೆ. ಮಾಸ್ಟರ್ ಅವರೊಂದಿಗೆ ಒನ್ ಒಂಡಿಯಾ ಪ್ರತಿನಿಧಿ ನಡೆಸಿದ ಆತ್ಮೀಯ ಸಂದರ್ಶನ ಶೀಘ್ರದಲ್ಲೇ ಪ್ರಕಟವಾಗಲಿದೆ ನಿರೀಕ್ಷಿಸಿ...

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಫೆ.11 ರಂದು ಆಗಮಿಸಿ ಮಾಸ್ಟರ್ ಹಿರಣ್ಣಯ್ಯ ಅವರ ಬಗ್ಗೆ ನಾಲ್ಕು ಮಾತುಗಳನ್ನಾಡಲಿದ್ದಾರೆ. ಉಳಿದಂತೆ ಪ್ರತಿ ದಿನ ನಾಟಕಗಳು ಸಂಜೆ 6 ಗಂಟೆಗೆ ಆರಂಭಗೊಳ್ಳಲಿದೆ ಕಾರ್ಯಕ್ರಮ ವಿವರ ಇಂತಿದೆ:

* ಫೆ.12 : ನಿಮಿತ್ತ ನಾಟಕ, ನಿರ್ದೇಶನ: ಸೇತುರಾಂ, ಅತಿಥಿ: ಹರಿ ಖೋಡೆ

* ಫೆ.13 : ಮೃಚ್ಛಕಟಿಕಾ, ನಿರ್ದೇಶನ: ನಟರಾಜ ಹೊನ್ನವಳ್ಳಿ, ಅತಿಥಿ : ವಿದ್ಯಾಭೂಷಣ

* ಫೆ .14 : ಚಾಮಚೆಲುವೆ, ನಿರ್ದೇಶನ : ಮಂಡ್ಯ ರಮೇಶ್, ಅತಿಥಿ : ಅನಂತಕುಮಾರ್, ಆರ್ ಆಶೋಕ್

* ಫೆ.15 : ದೇವದಾಸಿ, ನಿರ್ದೇಶನ: ದಿವಂಗತ ಕೆ ಹಿರಣ್ಣಯ್ಯ, ಅತಿಥಿ: ಸಿದ್ದರಾಮಯ್ಯ, ಟಿಎಸ್ ನಾಗಾಭರಣ

* ಫೆ.16 : ಮಾಸ್ಟರ್ ಜತೆ ಸಂವಾದ, ರಂಗಗೀತೆ ಗಾಯನ, ಸಮಾರೋಪ ಸಮಾರಂಭ, ಅಂಬರೀಷ್, ಉಮಾಶ್ರೀ, ನ್ಯಾ. ಸಂತೋಷ್ ಹೆಗ್ಡೆ,ನ್ಯಾ. ಮುಂಜುಳಾ ಚೆಲ್ಲೂರ್ ಉಪಸ್ಥಿತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Master Hirannaiah, producer, director, hero and above all, the improviser of the play, has a simple reason for its longevity. Fifty years, 11,000 shows and 10 characters. Corruption certainly lends itself to an epic interpretation, as popular Kannada play Lanchavatara reveals in its golden jubilee year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more