• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಪ್ಪದೇ ನೋಡಿ : ಹಿರಣ್ಣಯ್ಯ ನಟನೆಯ ಲಂಚಾವತಾರ+ ಮಕ್ಮಲ್ ಟೋಪಿ

By Mahesh
|

ಬೆಂಗಳೂರು, ಮೇ.25: ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಅವರ ಜಗತ್ ಪ್ರಸಿದ್ಧ ನಾಟಕಗಳಾದ ಲಂಚಾವತಾರ ಹಾಗೂ ಮಕ್ಮಲ್ ಟೋಪಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಹಿರಣ್ಣಯ್ಯ ಹಾಗೂ ಅವರ ಪುತ್ರ ಬಾಬು ಹಿರಣ್ಣಯ್ಯ ಅವರು ನಿಮ್ಮನ್ನು ನಕ್ಕು ನಗಿಸಲು ಬರುತ್ತಿದ್ದಾರೆ.

ಕೆ.ಹಿರಣ್ಣಯ್ಯ ಮಿತ್ರ ಮಂಡಳಿ ಹಾಗೂ ಮಹಿಳಾ ದಕ್ಷತಾ ಸಮಿತಿ ಸಹಯೋಗದೊಂದಿಗೆ ಮಾಸ್ಟರ್ ಹಿರಣ್ಣಯ್ಯ ಅವರಿಂದ ಲಂಚಾವತಾರ ಹಾಗೂ ಮಕ್ಮಲ್ ಟೋಪಿ ನಾಟಕಗಳ ಪ್ರದರ್ಶನವನ್ನು ನಗರದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಮೇ 27ರಂದು ಪ್ರದರ್ಶನಗೊಳ್ಳುತ್ತಿದೆ.

ಸಮಾಜದ ಭ್ರಷ್ಟ ವ್ಯವಸ್ಥೆ, ರಾಜಕೀಯ ವಿರುದ್ಧ ಚಾಟಿ ಬೀಸುವ 'ಲಂಚಾವತಾರ' ಅಂದಿಗೂ ಇಂದಿಗೂ ಎಂದೆಂದಿಗೂ ನವನವೀನ. ಇದರ ಜೊತೆಗೆ ಮಕ್ಮಲ್ ಟೋಪಿ ಕೂಡಾ ಪ್ರೇಕ್ಷಕರಿಗೆ ಬೋನಸ್ ಆಗಿ ಸಿಗುತ್ತಿದೆ. [ಬದುಕಿಗೆ ಅಷ್ಟಿಷ್ಟು ತಿಂದ್ರೆ ತಪ್ಪೇನಿಲ್ಲ, ಹಿರಣ್ಣಯ್ಯ ಸಂದರ್ಶನ]

ದಿನಾಂಕ: ಮೇ.27:

ಸ್ಥಳ: ಚೌಡಯ್ಯ ಸ್ಮಾರಕ ಭವನ, 16ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಮಲ್ಲೇಶ್ವರ, ಬೆಂಗಳೂರು

ಸಮಯ: 6.30ರ ನಂತರ

ಟಿಕೆಟ್ ದರ: 300 ರಿಂದ 2000 ರು

* ಇದರ ಜೊತೆಗೆ ಪ್ರಹ್ಲಾದ್ ಅವರಿಂದ ನೆರಳಿನ ಆಟ, ಮ್ಯಾಜಿಕ್ ಶೋ ಹಾಗೂ ಮಾತನಾಡುವ ಬೊಂಬೆ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

* ಜನಪ್ರಿಯ ಹಾಸ್ಯಗಾರ ರಾಮನಾಥ್ ವಿ ಗುಂಡೂರಾವ್ ಅವರಿಂದ ಹಾಸ್ಯ ಕಾರ್ಯಕ್ರಮವಿರುತ್ತದೆ.

ಟಿಕೆಟ್ : Bookmyshow.com ಹಾಗೂ ಅಜಂತಾ ಹೋಟೆಲ್- ಎಂಜಿ ರಸ್ತೆ, ದಿಅವೆನ್ಯೂ-ಬ್ರಿಗೇಡ್ ರಸ್ತೆ, ಸೂಪರ್ ಮಾರ್ಕೆಟ್, ಮಂತ್ರಿ ಸ್ಕ್ವೇರ್- ಮಲ್ಲೇಶ್ವರಂ ಮುಂತಾದೆಡೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ-080-2364 1814 ಸಂಪರ್ಕಿಸಬಹುದು. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nataratnakara Master Hirannayya and his son Babu Hirannaiah will present two internationally famous plays. One is 'Lanchavatara' which is a satirical overview of the hypocrisy and corruption in the political arena and the other 'Makmal Topi'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more