ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪದ್ಮಾವತಿ ಚಿತ್ರ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ನವೆಂಬರ್ 12 : ಹಿಂದಿ ಭಾಷೆಯ ಪದ್ಮಾವತಿ ಸಿನಿಮಾ ವಿರುದ್ಧ ರಾಷ್ಟ್ರೀಯ ರಜಪೂತ ಕರಣಿ ಸೇನೆಯು ಇಂದು(ನ.15)ರಂದು ಟೌನ್ ಹಾಲ್ ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪದ್ಮಾವತಿ ಬಿಡುಗಡೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರಿಂಪದ್ಮಾವತಿ ಬಿಡುಗಡೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರಿಂ

ಬೆಂಗಳೂರಿನ 50ಕ್ಕೂ ಹೆಚ್ಚು ಸಂಘಟನೆಗಳು ಹಾಗೂ ಕರ್ನಾಟಕಾದ್ಯಂತ ಇರುವ ವಿವಿಧ ಸಂಘಟನೆಗಳಿಂದ 500 ಕ್ಕೂ ಹೆಚ್ಚಿನ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Massive Rajputs protest in Town hall Bengaluru

ಪದ್ಮಾವತಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ನಟಿ ದೀಪಿಕಾ ಪಡುಕೋಣೆ ಅವರ ವಿರುದ್ಧ ಘೋಷಣೆ ಕೂಗಲಾಯಿತು. ಪದ್ಮಾವತಿ ಚಲನಚಿತ್ರದಲ್ಲಿ ರಜಪೂತರನ್ನು ಕೀಳಾಗಿ ತೋರಿಸಲಾಗಿದೆ. ಪದ್ಮಾವತಿ ಚಿತ್ರದಲ್ಲಿರುವ ದೀಪಿಕಾ ಪಡುಕೋಣೆಯವರು ಮಾಡಿರುವ ನೃತ್ಯವನ್ನು ಕೈಬಿಡಬೇಕು.

ಹಿಂದಿನ ರಜಪೂತ ಇತಿಹಾಸವನ್ನು ನೋಡಿದಾಗ ರಾಣಿ ಪದ್ಮಿನಿಯವರು ಸಖಿಯರು ಮಾಡುವ ನೃತ್ಯವನ್ನು ವೀಕ್ಷಿಸುತ್ತಿರೇ ವಿನಃ ತಾವು ನೃತ್ಯ ಮಾಡುತ್ತಿರಲಿಲ್ಲ. ಇದು ರಜಪೂತ ಇತಿಹಾಸಕ್ಕೆ ಕಳಂಕ ತರುವಂತಹ ವಿಚಾರ.

Massive Rajputs protest in Town hall Bengaluru

ಬನ್ಸಾಲಿಯ ಪದ್ಮಾವತಿ ವಿರುದ್ಧ ಗುಜರಾತಿ ಬಿಜೆಪಿ ಆಕ್ರೋಶವೇಕೆ?ಬನ್ಸಾಲಿಯ ಪದ್ಮಾವತಿ ವಿರುದ್ಧ ಗುಜರಾತಿ ಬಿಜೆಪಿ ಆಕ್ರೋಶವೇಕೆ?

ಡಿಸೆಂಬರ್ 1ರಂದು ಪದ್ಮಾವತಿ ಚಿತ್ರ ದೇಶಾದ್ಯಂತ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ರಜಪೂತರಿಗೆ ಈ ಚಲನಚಿತ್ರವನ್ನು ನೋಡಲು ಅವಕಾಶ ಮಾಡಿಕೊಡಬೇಕು. ನಾವು ಚಿತ್ರವನ್ನು ನೋಡಿ ಅದರಲ್ಲಿರುವ ರಜಪೂತರಿಗೆ ಕಳಂಕ ತರುವ ತುಣುಕುಗಳನ್ನು ತೆಗೆಯುವಂತೆ ತಿಳಿಸುತ್ತೇವೆ.

ಒಂದೊಮ್ಮೆ ಚಿತ್ರವನ್ನು ನೋಡಲು ಅವಕಾಶ ಮಾಡಿಕೊಡದೆ ಚಿತ್ರವನ್ನು ಬಿಡುಗಡೆ ಮಾಡಿದಲ್ಲಿ ದೇಶಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ರಾಷ್ಟ್ರೀಯ ರಜಪೂತ ಕರಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

English summary
Rajputs Karni Sena protest in Town hall Bengaluru against Padmavati film. While members of the community converged at a massive gathering at Town hall, 500 took part in the protest march.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X