ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಕಡ್ಡಾಯ: ಆರೋಗ್ಯ ಇಲಾಖೆಗೆ ಬಿಬಿಎಂಪಿ ಪತ್ರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 30: ಕಾರಿನಲ್ಲಿ ಒಬ್ಬರೇ ಇದ್ದರೂ ಕೂಡ ಮಾಸ್ಕ್ ಧರಿಸಬೇಕು ಎಂಬ ಬಿಬಿಎಂಪಿ ನಿಯಮದ ಕುರಿತು ಹಲವು ಪ್ರಶ್ನೆಗಳೆದ್ದಿವೆ.

ಕಾರಿನ ಗ್ಲಾಸ್ ಹಾಕಿದ್ದು, ಒಳಗೆ ಒಬ್ಬರೇ ಇದ್ದರೂ ಮಾಸ್ಕ್ ಏಕೆ ಹಾಕಿಕೊಳ್ಳಬೇಕು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಹೀಗಾಗಿ ಆರೋಗ್ಯ ಇಲಾಖೆಗೆ ಸ್ಪಷ್ಟನೆ ಕೋರಿ ಬಿಬಿಎಂಪಿ ಪತ್ರ ಬರೆದಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವಿದ್ ಅಕ್ತರ್ ಅವರಿಗೆ ಪತ್ರ ಬರೆದಿರುವ ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿದ್ದಾರೆಂದು ತಿಳಿದುಬಂದಿದೆ.

ದಾವಣಗೆರೆ; ಕೋವಿಡ್ ನಿಯಮ ಉಲ್ಲಂಘನೆ, 51. 67 ಲಕ್ಷ ದಂಡ ಸಂಗ್ರಹ ದಾವಣಗೆರೆ; ಕೋವಿಡ್ ನಿಯಮ ಉಲ್ಲಂಘನೆ, 51. 67 ಲಕ್ಷ ದಂಡ ಸಂಗ್ರಹ

ಸಮಿತಿಯಲ್ಲಿ ವೈದ್ಯರು ಹಾಗೂ ಆರೋಗ್ಯ ತಜ್ಞರಿದ್ದು, ಈ ಬಗ್ಗೆ ಮರುಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು ಹೇಳಿದ್ದಾರೆ.

ಯಾವುದೇ ಆದೇಶ ಹಿಂಪಡೆದಿಲ್ಲ

ಯಾವುದೇ ಆದೇಶ ಹಿಂಪಡೆದಿಲ್ಲ

ಈ ವರೆಗೂ ನಾವು ಯಾವುದೇ ಆದೇಶಗಳನ್ನು ಹಿಂಪಡೆದುಕೊಂಡಿಲ್ಲ. ಜನರ ಸುರಕ್ಷತೆಗಾಗಿ ಆದೇಶ ನೀಡಲಾಗಿದೆ. ಆರೋಗ್ಯ ಇಲಾಖೆ ಸ್ಪಷ್ಟನೆ ನೀಡುತ್ತಿದ್ದಂತೆಯೇ ಆದೇಶ ವಾಪಸ್ ಪಡೆಯುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಮಂಜುನಾತ್ ಪ್ರಸಾದ್ ಅವರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಮರುಪರಿಶೀಲನೆ

ಆರೋಗ್ಯ ಇಲಾಖೆ ಮರುಪರಿಶೀಲನೆ

ಈ ನಡುವೆ ಮಂಜುನಾಥ್ ಪ್ರಸಾದ್ ಅವರು ಬರೆದಿರುವ ಪತ್ರವನ್ನು ಆರೋಗ್ಯ ಇಲಾಖೆ ಮರುಪರಿಶೀಲನೆಗೆ ತಾಂತ್ರಿಕ ಸಮಿತಿಗೆ ಕಳುಹಿಸಿದೆ ಎಂದು ತಿಳಿದುಬಂದಿದೆ.
ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಕಳೆದ ಆಗಸ್ಟ್ ತಿಂಗಳಿನಲ್ಲಿ ಮಾಸ್ಕ್'ಗಳನ್ನು ಯಾರೆಲ್ಲಾ ಧರಿಸಬೇಕು. ಯಾವಾಗ ಧರಿಸಬೇಕೆಂಬುದರ ಬಗ್ಗೆ ಗೊಂದಲಗಳಿದ್ದವು.

ಸರ್ಕಾರ ಆದೇಶಕ್ಕೆ ಬದ್ಧವಾಗಿರಬೇಕು

ಸರ್ಕಾರ ಆದೇಶಕ್ಕೆ ಬದ್ಧವಾಗಿರಬೇಕು

ಯಾವುದೇ ಆದೇಶ ತೆಗೆದುಕೊಂಡಾಗಲೂ ಸರ್ಕಾರ ಅದಕ್ಕೆ ಬದ್ಧವಾಗಿರಬೇಕು. ಇಲ್ಲದಿದ್ದರೆ, ಇಂತಹ ನಿರ್ಧಾರಗಳು ಸಮಸ್ಯೆಯನ್ನು ತಂದೊಡ್ಡಲಿದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಸಹಕಾರದ ಸಮಸ್ಯೆಗಳಿವೆ.

Recommended Video

car allu mask ಹಾಕ್ಲೇಬೇಕಂತೆ!! ಇಲ್ಲಾ ಅಂದ್ರೆ ಫೈನ್!! | Oneindia kannada
ಕಾರಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಧರಿಸಬೇಕೆ?

ಕಾರಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಧರಿಸಬೇಕೆ?

ನಂತರ ಒಬ್ಬಂಟಿಯಾಗಿ ವ್ಯಕ್ತಿ ಕಾರಿನಲ್ಲಿ ತೆರಳುತ್ತಿದ್ದಾಗ ಕಿಟಕಿ ಗಾಜುಗಳನ್ನು ಹಾಕಿದ್ದಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದೆವು. ಬಿಬಿಎಂಪಿ ಆಯುಕ್ತರು ಇಂತಹ ಆದೇಶವನ್ನೇಕೆ ಮಾಡಿದರು ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದೇಶ ನೀಡುವುದಕ್ಕೂ ಮುನ್ನ ಆಯುಕ್ತರು ನಮ್ಮನ್ನು ಸಂಪರ್ಕಿಸಿಲ್ಲ. ಸುರಕ್ಷತಾ ದೃಷ್ಟಿಯಿಂದ ಮಾಸ್ಕ್ ಧರಿಸುವುದರಲ್ಲಿ ಯಾವುದೇ ಅಪಾಯಗಳಿಲ್ಲ.
ಕಾರಿನಲ್ಲಿ ಒಬ್ಬಂಟಿಯಾಗಿದ್ದಾಗ, ಕಿಟಕಿ ಗಾಜುಗಳನ್ನು ಹಾಕಿದ್ದಾಗ ಮಾಸ್ಕ್ ಏಕೆ ಧರಿಸಬೇಕೆಂಬ ಸಾರ್ವಜನಿಕರ ಪ್ರಶ್ನೆಯಲ್ಲಿ ಅರ್ಥವಿದೆ ಎಂದು ಹೇಳಿದ್ದಾರೆ. ಸರ್ಕಾರಿ ಅಧಿಕಾರಿಗಳಲ್ಲೇ ಗೊಂದಲಗಳು ಮೂಡುತ್ತಿರುವುದರಿಂದ ಜನರಿಗೆ ಏನು ಮಾಡಬೇಕೆಂಬುದು ತಿಳಿಯುವುದಿಲ್ಲ.

English summary
In the wake of the rising criticism over the recent notification that solo car drivers too should wear masks even with their windows rolled up, Bruhat Bengaluru Mahanagara Palike (BBMP) Commissioner N Manjunatha Prasad has written to the health department seeking clarification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X