ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್ ನಿಯಮ ಪಾಲನೆ: ಬೆಂಗಳೂರಲ್ಲಿ ಮಾರ್ಷಲ್‌ಗಳಿಗೆ ಪೊಲೀಸ್ ಅಧಿಕಾರ

|
Google Oneindia Kannada News

ಬೆಂಗಳೂರು,ಅಕ್ಟೋಬರ್ 22: ಕೊವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತಾಗಲು ಮಾರ್ಷಲ್‌ಗಳಿಗೆ ಪೊಲೀಸರ ಅಧಿಕಾರವನ್ನು ನೀಡಲಾಗಿದೆ.

ಇನ್ನುಮುಂದೆ ಮಾರ್ಷಲ್‌ಗಳ ಬಳಿ ಕೆಟ್ಟದಾಗಿ ವರ್ತಿಸುವುದು, ವಾಹನ ನಿಲ್ಲಿಸಿ ಎಂದರೂ ಓಡಿ ಹೋಗುವುದು, ಮಾಸ್ಕ್ ಧರಿಸದಿರುವುದು ಇದೇನೇ ಮಾಡಿದರೂ ನಿಮ್ಮ ಮೇಲೆ ಪ್ರಕರಣವನ್ನು ದಾಖಲಿಸುವಂತಹ ಅಧಿಕಾರ ಮಾರ್ಷಲ್‌ಗಳಿಗೆ ದೊರೆಯಲಿದೆ.

ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಅಧಿಕಾರಾವಧಿ ಹೆಚ್ಚಳಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಅಧಿಕಾರಾವಧಿ ಹೆಚ್ಚಳ

ಜನರು ಕೊವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ, ಅವರನ್ನು ಪ್ರಶ್ನೆ ಮಾಡಲು ಹೋದರೆ ಮಾರ್ಷಲ್‌ಗಳ ಮೇಲೆಯೇ ದರ್ಪ ತೋರಿಸುತ್ತಿದ್ದಾರೆ. ಹೀಗಾಗಿ ಮಾರ್ಷಲ್‌ಗಳಿಗೆ ಪೊಲೀಸರ ಅಧಿಕಾರ ನೀಡಲು ನಿರ್ಧಾರ ತೆಗೆದುಕೊಳ್ಳಳಾಗಿದೆ.

Marshals May Get Police-Like Powers To Enforce Covid-19 Norms

ಇದರಿಂದ ದುರ್ವರ್ತನೆ, ದಾಳಿ ಇನ್ನಿತರೆ ಸಂದರ್ಭದಲ್ಲಿ ಜನರ ಮೇಲೆ ಪ್ರಕರಣ ದಾಖಲಿಸಬಹುದಾಗಿದೆ.ಜನರಿಗೆ ಮಾಸ್ಕ್‌ಗಳನ್ನು ಧರಿಸಿ, ಹೆಚ್ಚು ಓಡಾಡಬೇಡಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಹೇಳುತ್ತಾ ನಮ್ಮ ಕರ್ತವ್ಯವನ್ನು ನಾವು ನಿಭಾಯಿಸುತ್ತಿದ್ದೇವೆ ಆದರೂ ನಮ್ಮ ಮೇಲೆ ಹಲ್ಲೆ ನಡೆಸುತ್ತಾರೆ.

ಆದರೆ ಪೊಲೀಸರ ಮೇಲೆ ಯಾರಾದರೂ ಈ ರೀತಿ ಅಸಭ್ಯ ವರ್ತನೆ ತೋರಿರುವುದು ನಾವು ನೋಡಿಲ್ಲ, ಹಾಗಾಗಿ ನಮಗೂ ಕೂಡ ಇಂತಹ ಅಧಿಕಾರವನ್ನು ನೀಡಬೇಕು ಎಂದು ಮಾರ್ಷಲ್‌ಗಳು ಹೇಳಿದ್ದಾರೆ.

ಮಾರ್ಷಲ್‌ಗಳು ಸಾರ್ವಜನಿಕ ಕೆಲಸವನ್ನು ಮಾಡುತ್ತಿದ್ದಾರೆ ಅವರ ಕಡೆಗೂ ಸ್ವಲ್ಪ ಗಮನಹರಿಸಿ ಎಂದು ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಮಾರ್ಷಲ್‌ಗಳ ಮೇಲೆ ಹಲ್ಲೆ ನಡೆದಿದೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು, ವಿಡಿಯೋಗಳಿವೆ. ಹಾಗಾಗಿ ಮಾರ್ಷಲ್‌ಗಳಿಗೆ ಪ್ರಕರಣ ದಾಖಲಿಸುವ ಅಧಿಕಾರವನ್ನು ನೀಡಬೇಕು ಎಂದು ಹೇಳಿದ್ದಾರೆ.

Recommended Video

ಗಾಂಜಾ ಕೆಟ್ಟದಾ ಈ ಸ್ಟೋರಿ ನೋಡಿ | Unknown facts about Cannabis | Oneindia Kannada

English summary
Do not argue or misbehave with marshals, if you are not wearing a mask or are littering city’s public spaces. They may soon have police-like powers to book cases against those who argue, misbehave, or even manhandle them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X