• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪತ್ನಿಯ ಸ್ನೇಹಿತೆ ಮೇಲೆ ಅತ್ಯಾಚಾರ: ಗಂಡ ಜೈಲಿಗೆ

By Srinath
|

ಬೆಂಗಳೂರು, ಜ.23: ಪತ್ನಿಯ ಸ್ನೇಹಿತೆಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದ ಫೈನಾನ್ಸ್ ಕಂಪೆನಿಯ ಉದ್ಯೋಗಿಯೊಬ್ಬನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಮರಿಯಪ್ಪನ ಪಾಳ್ಯದ ನಿವಾಸಿ ಶ್ರೀನಿವಾಸ್ (30) ಬಂಧಿತ ಆರೋಪಿ. ಈತನ ವಿರುದ್ಧ ಅತ್ಯಾಚಾರಕ್ಕೀಡಾಗಿ ಗರ್ಭಿಣಿಯಾಗಿರುವ ಯುವತಿ ಕ್ರಮ ಕೈಗೊಳ್ಳುವಂತೆ ಈಗ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ವಿವರ: ಸ್ಥಳೀಯ ಫೈನಾನ್ಸ್ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ ಶ್ರೀನಿವಾಸ್ ಕಳೆದ 5-6 ವರ್ಷಗಳ ಹಿಂದೆ ವಿವಾಹವಾಗಿದ್ದ. ಈತ 6 ತಿಂಗಳ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಚನಾ (23) (ಹೆಸರು ಬದಲಿಸಿದೆ) ಮೇಲೆ ಮೋಹಗೊಂಡಿದ್ದ. ರಚನಾ, ಶ್ರೀನಿವಾಸ್‌ ಪತ್ನಿಯ ಸ್ನೇಹಿತೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಗಣೇಶ ಹಬ್ಬದ ಸಂದರ್ಭದಲ್ಲಿ ಆಕೆ ಮನೆಗೆ ಬಂದಿದ್ದಾಗ ಶ್ರೀನಿವಾಸ್ ತಂಟೆ ಮಾಡಿದ್ದ ಎನ್ನಲಾಗಿದೆ. ನಂತರ ಮೂರ್‍ನಾಲ್ಕು ದಿನ ಕಳೆದ ನಂತರ ಆಕೆಗೆ ದೂರವಾಣಿ ಕರೆ ಮಾಡಿ ಪತ್ನಿಗೆ ಅಪಘಾತವಾಗಿದೆ. ಮನೆಗೆ ಬಂದು ನೋಡಿಕೊಂಡು ಹೋಗಿ ಎಂದು ಹೇಳಿದ್ದಾನೆ. ಅದರಂತೆ ರಚನಾ ಮನೆಗೆ ಬಂದಾಗ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಶ್ರೀನಿವಾಸನ ಕುಕೃತ್ಯದ ಬಗ್ಗೆ ಪತ್ನಿಗೆ ಗೊತ್ತಾಗಿತ್ತು ಎನ್ನಲಾಗಿದೆ. ಹೇಗಾದರೂ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು. ದೌರ್ಜನ್ಯಕ್ಕೊಳಗಾಗಿದ್ದ ರಚನಾರನ್ನು ಕರೆಸಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಮದುವೆಯಾಗುವಂತೆ ಬೇಡಿಕೆ ಇಟ್ಟಿದ್ದಳು.

ಇದಕ್ಕೆ ಶ್ರೀನಿವಾಸ್ ಒಪ್ಪದೆ ಸತಾಯಿಸಿದ ಹಿನ್ನೆಲೆಯಲ್ಲಿ ದಾರಿ ಕಾಣದೆ ಯುವತಿ ರಾಜಾಜಿನಗರ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಸ್ತುತ ರಚನಾ ಗರ್ಭಿಣಿ ಎಂದು ತಿಳಿದು ಬಂದಿದೆ. ರಾಜಾಜಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Married Man Srinivas in Mariyappanapalya raped his wife's friend and is now arrested by Rajajinagar Police in Bangalore. In the pretext of wife being injured Srinivas called his wife's friend to his house. But when wife's friend arrived at home he threatened her and raped. Now wife's friend is pregnent. As wife's friend coplained to the police Srinivas was arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more