ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಎಂ ಕಲಬುರ್ಗಿ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ, ಸಂವಾದಕ್ಕೆ ಬನ್ನಿ

By Mahesh
|
Google Oneindia Kannada News

ಬೆಂಗಳೂರು, ಜೂನ್ 17: ಡಾ. ಎಂಎಂ ಕಲಬುರ್ಗಿ ಅವರನ್ನು ಕುರಿತ 'ಮಾರ್ಗಕ್ಕೆ ಕೊನೆಯಿಲ್ಲ' ಸಾಕ್ಷ್ಯಚಿತ್ರದ ವಿಶೇಷ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೆಎಸ್ ಪರಮೇಶ್ವರ್ ನಿರ್ದೇಶನದ ಈ ಸಾಕ್ಷ್ಯಚಿತ್ರದ ಪ್ರದರ್ಶನದ ನಂತರ ಸಂವಾದ ಕಾರ್ಯಕ್ರಮ ನಡೆಯಲಿದೆ.

ಸಂವಾದ ಕಾರ್ಯಕ್ರಮವನ್ನು ನಿರ್ದೇಶಕ ಬಿಎಂ ಗಿರಿರಾಜ್ ಅವರು ನಡೆಸಿಕೊಡಲಿದ್ದಾರೆ. ಇದೇ ಕಾರ್ಯಕ್ರಮದ ಜೊತೆಗೆ ಲೋಕ ಚರಿತ ತಂಡದ ಬಗ್ಗೆ ರಘು ಪ್ರಸಾದ್ ಅವರು ನಿರ್ಮಿಸಿರುವ ಸಾಕ್ಷ್ಯಚಿತ್ರದ ಪ್ರದರ್ಶನವೂ ನಡೆಯಲಿದೆ. ಲೋಕಚರಿತ, ಬೆಂಗಳೂರು ಹಾಗೂ ಎಂಇಎಸ್ ರಂಗವೈಭವ ಈ ಕಾರ್ಯಕ್ರಮವನ್ನು ಆಯೋಜಿಸಿದೆ. [ನಿರ್ದೇಶಕ ಪರಮೇಶ್ವರ. ಕೆ ಕಿರುಪರಿಚಯ]

Margakke Koneyilla Film on Dr MM Kalaburgi Special Show and Discussion

ಮಾರ್ಗಕ್ಕೆ ಕೊನೆಯಿಲ್ಲ
ರಚನೆ, ನಿರ್ದೇಶನ: ಕೆಎಸ್ ಪರಮೇಶ್ವರ
ಅವಧಿ: 90 ನಿಮಿಷ
ಟ್ರೈಲರ್ ನೋಡಿ

ಲೋಕ ಚರಿತ
ರಚನೆ, ನಿರ್ಮಾಣ: ರಘುಪ್ರಸಾದ್
ಅವಧಿ: 30 ನಿಮಿಷ
ಸ್ಥಳ: ಎಂಇಎಸ್ ಕಾನ್ಫರೆನ್ಸ್ ಹಾಲ್,
ಎಂಇಎಸ್ ಕಾಲೇಜು
ಮಲ್ಲೇಶ್ವರ, 15ನೇ ಅಡ್ಡರಸ್ತೆ.
ಬೆಂಗಳೂರು
ದಿನಾಂಕ: 18ನೇ ಜೂನ್ 2016

ಈ ಸಾಕ್ಷ್ಯಚಿತ್ರದಲ್ಲಿ ಕಲ್ಬುರ್ಗಿ ಅವರ ಪರಿಚಯದ ಜೊತೆಗೆ ಅವರ ಸಾಹಿತ್ಯ ದೃಷ್ಟಿ, ಅವರು ಕಂಡ ಕನಸುಗಳು, ಅವರಿಗಿದ್ದ ಬಸವ ತತ್ತ್ವ ನಿಷ್ಠೆ, ಅವರು ಯುವ ಪ್ರತಿಭೆಗಳಿಗೆ ನೀಡುತ್ತಿದ್ದ ಪ್ರೋತ್ಸಾಹ, ಅವರ ಸಹಪಾಠಿಗಳು, ಸಮಕಾಲೀನರು, ಶಿಷ್ಯಂದಿರು ಅವರ ಬಗ್ಗೆ ಹೇಳಿದ ಮಾತುಗಳಲ್ಲದೆ, ಹತ್ಯೆಯ ಬಗ್ಗೆ ರೋಚಕ ವಿವರಗಳನ್ನು ಕಾಣಬಹುದಾಗಿದೆ

English summary
Margakke Koneyilla FIlm on Dr MM Kalaburgi special show and discussion moderated by director BM Giriraj. One more documentary on Lokacharitha group will also be screened. The event is on June 18, 2016 at MES conference Hal, MES college, Malleswaram, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X