ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಅಂತೂ ಲಗ್ಗೆ ಇಟ್ಟ ಮಾವು, ಮೇ 30ರಿಂದ ಮಾವು ಮೇಳ

|
Google Oneindia Kannada News

ಬೆಂಗಳೂರು, ಮೇ 14: ಅಂತೂ ಬೆಂಗಳೂರಿಗೆ ಹಣ್ಣುಗಳ ರಾಜ ಮಾವು ಲಗ್ಗೆ ಇಟ್ಟಿದೆ. ಕೊಂಚ ತಡವಾದರೂ ರಸಭರಿತ ಮಾವುಗಳು ಮಂದಿಯ ಉದರ ಸೇರಲಿದೆ.

ಪ್ರತಿ ಬಾರಿ ಏಪ್ರಿಲ್ ಆರಂಭ ಅಥವಾ ಅಂತ್ಯದೊಳಗೆ ಬೆಂಗಳೂರಿನಲ್ಲಿ ಎಲ್ಲಿ ನೋಡಿದರಲ್ಲಿ ಮಾವಿನ ಹಣ್ಣುಗಳದ್ದೇ ಕಾರು ಬಾರು ಆದರೆ ಈ ಬಾರಿ ಆಗಮನ ಸ್ವಲ್ಪ ತಡವಾಗಿದೆ.

ಜೂನ್ 1ರಿಂದ ಮೈಸೂರಿನಲ್ಲಿ ಮಾವು ಮೇಳ; 15ಕ್ಕೂ ಹೆಚ್ಚು ಬಗೆಯ ಹಣ್ಣುಗಳು ಲಭ್ಯ ಜೂನ್ 1ರಿಂದ ಮೈಸೂರಿನಲ್ಲಿ ಮಾವು ಮೇಳ; 15ಕ್ಕೂ ಹೆಚ್ಚು ಬಗೆಯ ಹಣ್ಣುಗಳು ಲಭ್ಯ

ನಗರದ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಹಾಗೂ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಮಾವು ಮಳಿಗೆಗಳನ್ನು ತೆರೆಯಲಾಗುತ್ತದೆ. ಜೊತೆಗೆ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧ ಭಾಗಗಳಲ್ಲಿನ ಐಟಿ ಕಂಪನಿಗಳಿಗೆ ಮಾವು ಮಳಿಗೆ ಪ್ರಾರಂಭಿಸುವಂತೆ ಮನವಿ ನೀಡುತ್ತಿದೆ. ರೈತರೊಂದಿಗೆ ಚರ್ಚೆ ನಡೆಸಿ ಬೇಡಿಕೆ ಇರುವಲ್ಲಿ ಮಳಿಗೆ ಆರಂಭಿಸಲಾಗುತ್ತದೆ ಎಂದು ಮಂಡಳಿ ಅಧ್ಯಕ್ಷ ಡಾ. ಸಿಜೆ ನಾಗರಾಜ್ ತಿಳಿಸಿದ್ದಾರೆ.

Mango Mela will resume from May 30 in Bengaluru

ಮಾವಿನ ಹಣ್ಣುಗಳಿಗೆ ರಾಸಾಯನಿಕಗಳನ್ನು ಬಳಸಿ ಮಾಗಿಸಿದ ಹಣ್ಣುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಹಣ್ಣಿನ ಪ್ರಮಾಣ ಹಾಗೂ ಗುಣಮಟ್ಟದ ಆಧಾರದ ಮೇಲೆ ಎರಡು ದಿನಕ್ಕೊಮ್ಮೆ ದರ ನಿಗದಿ ಪಡಿಸಲು ಸಮಿತಿ ರಚಿಸಲಾಗಿದೆ.

English summary
Mango Mela will resume from may 30. Horticulture department is organising festival at Lalbagh and Metro stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X