ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್‌ ಬಾಗ್‌ನಲ್ಲಿ ಮಾವುಮೇಳ ಜೂನ್ 24ರವರೆಗೆ ವಿಸ್ತರಣೆ

By Nayana
|
Google Oneindia Kannada News

ಬೆಂಗಳೂರು, ಜೂನ್ 16: ಲಾಲ್‌ಬಾಗ್‌ನಲ್ಲಿ ಮೇ 25ರಿಂದ ಜೂನ್‌ 15ರವರೆಗೆ ಮಾವು ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ರೈತರು ಮತ್ತು ಗ್ರಾಹಕರ ಒತ್ತಾಯಸ ಮೇರೆಗೆ ಜೂನ್ 24ರವರೆಗೂ ಮೇಳವನ್ನು ವಿಸ್ತರಿಸಲಾಗಿದೆ.

ಮೇ 25ಕ್ಕೆ ಮಾವು ಮೇಳ ಆರಂಭವಾಗಿತ್ತು, ಅಂದೇ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿತ್ತು, ಇದೇ ರೀತಿ ಮಳೆಯಾದರೆ ಗ್ರಾಹಕರು ಲಾಲ್‌ಬಾಗ್‌ಗೆ ಬರುವುದಿಲ್ಲ ತಾವು ನಷ್ಟ ಅನುಭವಿಸಬೇಕಾಗುತ್ತದೆ ಎಂದು ರೈತರು ಆತಂಕಗೊಂಡಿದ್ದರು ಆದರೆ ಮಾವು ಉತ್ತಮ ಬೆಲೆಗೆ ಮಾರಾಟವಾಗಿದೆ. ಮೊದಲ ಮೂರು ದಿನ ಅಷ್ಟಾಗಿ ವ್ಯಾಪಾರವಾಗಿಲ್ಲ ಎನ್ನುತ್ತಾರೆ ರೈತರು.

Mango Mela extended up to June 24

ಲಾಲ್‌ಬಾಗ್‌ನಲ್ಲಿ ಮೇ 25ರಿಂದ ಮಾವು-ಹಲಸು ಮೇಳಲಾಲ್‌ಬಾಗ್‌ನಲ್ಲಿ ಮೇ 25ರಿಂದ ಮಾವು-ಹಲಸು ಮೇಳ

ಕೋಲಾ, ಚಿಕ್ಕಬಳ್ಳಾಪುರದಿಂದ ಹಣ್ಣುಗಳು ಇದೀಗ ಆಗಮಿಸುತ್ತಿದೆ, ಅಲ್ಲದೆ ಸಗಟು ದರದಲ್ಲಿ ಮಾರಾಟ ಮಾಡಿದರೆ ರೈತರಿಗೆ ಹೆಚ್ಚಿನ ದರ ಸಿಗುವುದಿಲ್ಲ. ಹೀಗಾಗಿ ರೈತರ ಅನುಕೂಲಕ್ಕಾಗಿ 24ರವರೆಗೆ ವಿಸ್ತರಿಸಲಾಗಿದೆ. ಹೊರಗಿನ ದರಕ್ಕಿಂತ ಶೇ.10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ರೈತರು ಕೆಲವು ತಳಿಯ ಹಣ್ಣುಗಳನ್ನು ಕಡಿಮೆ ದರಕ್ಕೂ ಮಾರುತ್ತಾರೆ. ಮೇಳದಲ್ಲಿ ರಾಸಾಯನಿಕ ಮುಕ್ತ ಹಣ್ಣುಗಳನ್ನೇ ಮಾರಾಟ ಮಾಡಲಾಗುತ್ತದೆ.

English summary
Following huge response from public, department of horticulture has decided to extend Mango Mela which was held in Lalbagh up to June 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X