ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 5ರಿಂದ ಮಾವು-ಹಲಸು ಮೇಳ, ಲಾಲ್ ಬಾಗ್ ಗೆ ಬಂದು ಖುಷಿಯಿಂದ ತಿನ್ನಿ

ಮೇ 5ರಂದು ಬೆಂಗಳೂರು ಲಾಲ್ ಬಾಗ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾವು-ಹಲಸು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಕಡಿಮೆ ಬೆಲೆಗೆ ಒಳ್ಳೆ ಹಣ್ಣ ಖರೀದಿಸಲು ಬೆಂಗಳೂರಿಗರಿಗೆ ಇದಕ್ಕಿಂತ ಅವಕಾಶ ಬೇಕಾ?

|
Google Oneindia Kannada News

ಬೆಂಗಳೂರು, ಮೇ 3: ಇದೇ ತಿಂಗಳ 5ರಂದು ಲಾಲ್ ಬಾಗ್ ನಲ್ಲಿ ಹಲಸು-ಮಾವು ಮೇಳಕ್ಕೆ ಚಾಲನೆ ದೊರೆಯಲಿದೆ. ಮೇ 5ರಿಂದ 24ರವರೆಗೆ ಅಂದರೆ ಇಪ್ಪತ್ತು ದಿನಗಳ ಕಾಲ ಬೆಳಗ್ಗೆ 8ರಿಂದ ರಾತ್ರಿ 7ರವರೆಗೆ ನಡೆಯುವ ಈ ಮೇಳಕ್ಕೆ ಮೇ 5ರ ಶುಕ್ರವಾರ ಮಧ್ಯಾಹ್ನ 12.05ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಾಲ್ ಬಾಗ್ ನಲ್ಲಿ ಚಾಲನೆ ನೀಡಲಿದ್ದಾರೆ.

ಶಾಸಕ ಆರ್.ವಿ,ದೇವರಾಜ್, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತಿತರರು ಹಾಜರಿರುತ್ತಾರೆ. ಈ ಮೇಳದ ವಿಶೇಷ ಏನು ಅಂದರೆ ರಾಸಯನಿಕ ಬಳಸದೆ ಬೆಳೆದ ಮಾವಿನ ಹಣ್ಣನ್ನು ಖರೀದಿಸಬಹುದು. ರೈತರೇ ನೇರವಾಗಿ ಮಾವಿನ ಹಣ್ಣನ್ನು ಮಾರಾಟ ಮಾಡುತ್ತಾರೆ. ಅದಕ್ಕೂ ಮುನ್ನ ಅವುಗಳೆಲ್ಲದರ ಪರೀಕ್ಷೆ ಮಾಡಲಾಗುತ್ತದೆ.[ಡಿಜಿಟಲ್ ಸ್ಪರ್ಷದೊಂದಿಗೆ ಹಾಪ್ಕಾಮ್ಸ್ ಮಾವು-ಹಲಸು ಮೇಳ ಆರಂಭ]

Mango and Jackfruit mela starts from May 5th in Lalbagh

ಅವುಗಳ ಬೆಲೆ ನಿಗದಿಗಾಗಿಯೇ ತಜ್ಞರದೊಂದು ಸಮಿತಿ ಮಾಡಿದ್ದು, ಅಯಾ ತಳಿಯ ಹಣ್ಣಿನ ಬೆಲೆಯನ್ನು ಆ ಸಮಿತಿಯೇ ನಿರ್ಧರಿಸುತ್ತದೆ. ರಸಪುರಿ, ಬಾದಾಮಿ, ಸಕ್ಕರೆಗುತ್ತಿ, ಬೇನಿಶಾ, ಮಲ್ಲಿಕಾ, ಬಂಗನಪಲ್ಲಿ, ರಶೇರಿ..ಇತರ ತಳಿಗಳ ಮಾವನ್ನು ಸವಿಯಬಹುದು. ಇದರ ಜತೆ ಹತ್ತರಿಂದ ಹನ್ನೆರಡು ತಳಿಯ ಹಲಸನ್ನು ಕೂಡ ರುಚಿ ನೋಡಬಹುದು.

ಈ ಸಲ ಲಾಲ್ ಬಾಗ್ ನಲ್ಲಿ ಮೇಳಕ್ಕೆ ಚಾಲನೆ ಸಿಕ್ಕರೂ ಮೊದಲ ಬಾರಿಗೆ ಬೆಂಗಳೂರಿನ ವಿವಿಧೆಡೆ ರೈತರು ಮಾವನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ನಾಯಂಡಹಳ್ಳಿ, ವಿವೇಕಾನಂದ, ಎಂಜಿ ರಸ್ತೆ, ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಜಯನಗರ ಮೆಟ್ರೋ ನಿಲ್ದಾಣಗಳಲ್ಲಿ, ಇಂದಿರಾನಗರ, ಸಹಕಾರ ನಗರದಲ್ಲಿ ಕೂಡ ಮಾರಾಟ ವ್ಯವಸ್ಥೆ ಮಾಡಲಾಗಿದೆ.[ಮಾರುಕಟ್ಟೆಗೆ ಹಣ್ಣುಗಳ ರಾಜ: ತಿನ್ನುವ ಮುನ್ನ ಇರಲಿ ಎಚ್ಚರ!]

Mango and Jackfruit mela starts from May 5th in Lalbagh

ಅಷ್ಟೇ ಅಲ್ಲ, ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಮಾವಿನಹಣ್ಣು ಮಾರಾಟ ವ್ಯವಸ್ಥೆ ಇದೆ. ಇನ್ನು ಮೇ 6ಕ್ಕೆ ರಾಮನಗರ, ಮಂಡ್ಯದಲ್ಲಿ, ಕೊಪ್ಪಳದಲ್ಲಿ ಮೇ 9ರಂದು, ಧಾರವಾಡದಲ್ಲಿ ಮೇ 5ರಂದು ಮಾರಾಟ ಮೇಳ ನಡೆಯಲಿದೆ. ಈ ವರ್ಷ ಮಾವು ಮೇಳಕ್ಕಾಗಿ 236 ರೈತರು ಅರ್ಜಿ ಸಲ್ಲಿಸಿದರು ಎಂಬ ಮಾಹಿತಿ ನೀಡಲಾಯಿತು.

ಹಲಸಿಗೆ ವಾಣಿಜ್ಯ ಸ್ಥಾನ ಸಿಗಬೇಕು ಎಂದು ಮೌಲ್ಯವರ್ಧನೆಯನ್ನು ಪ್ರೋತ್ಸಾಹಿಸಲು ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಲಾಯಿತು. ಮೌಲ್ಯವರ್ಧನೆ ಅಂದರೆ ಹಲಸಿನ ಚಿಪ್ಸ್, ಜಾಮ್ ಮತ್ತಿತರ ಪದಾರ್ಥಗಳನ್ನು ಮಾಡುವವರಿಗೆ ಪ್ರೋತ್ಸಾಹ ನೀಡಲು ಈ ಯೋಜನೆ ಇದೆ.[10 ಸಾವಿರ ಟನ್ ದಾಟಲಿದೆ ಕರ್ನಾಟಕದ ಮಾವು ರಫ್ತು]

Mango and Jackfruit mela starts from May 5th in Lalbagh

ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲೂ ಮಾವು-ಹಲಸು ಮಾರಾಟ ಆಯೋಜಿಸುವ ಆಲೋಚನೆ ಇದೆ ಎಂದು ಮಾಹಿತಿ ನೀಡಲಾಯಿತು. ಮುಂದಿನ ಐದು ವರ್ಷದಲ್ಲಿ ಹಲಸು ಮಾರಾಟಕ್ಕೆ ಒತ್ತು ನೀಡಲಾಗುವುದು. ಮಾವು ಮಾರಾಟದ ಜೊತೆಗೆ ಹಲಸು ಪ್ರೋತ್ಸಾಹಕ್ಕಾಗಿ ಮಾವು ಅಭಿವೃದ್ಧಿ ನಿಗಮಕ್ಕೆ ಸೇರಿಸುವ ಆಲೋಚನೆ ಇದೆ ಎಂದು ತಿಳಿಸಿದರು.

ಹಲಸು ಬೆಳೆಯಲು ಹಾಗೂ ಅದಕ್ಕೆ ವಾಣಿಜ್ಯ ಸ್ಥಾನ ಸಿಗಲು ಶ್ರಮಿಸುತ್ತಿರುವ ಶ್ರೀಪಡ್ರೆ ಅವರ ಶ್ರಮದ ಬಗ್ಗೆ ಪ್ರಸ್ತಾಪವಾಯಿತು. ಈ ಸಂದರ್ಭದಲ್ಲಿ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಅವರು ಜತೆ ಒನ್ಇಂಡಿಯಾ ಕನ್ನಡ ನಡೆಸಿದ ಪ್ರಶ್ನೋತ್ತರ ವಿವರ ಇಂತಿದೆ.[ಮಾವಿನ ತೋಟದಲ್ಲಿ ಬೇಕೆಂದ ಹಣ್ಣು ಖರೀದಿಸಬೇಕಾ, ಹತ್ತಿ ಬಸ್ಸು..]

Mango and Jackfruit mela starts from May 5th in Lalbagh

* ನಮ್ಮ ದೇಶದ ಮಾವಿನಹಣ್ಣುಗಳಿಗೆ ವಿದೇಶಗಳಲ್ಲಿ ಎಲ್ಲೆಲ್ಲಿ ಬೇಡಿಕೆ ಇದೆ?
ಅಮೆರಿಕ, ಯುರೋಪ್, ಸಿಂಗಾಪುರ್, ಆಸ್ಟ್ರೇಲಿಯಾ, ಮಲೇಶಿಯಾ ಮತ್ತಿತರ ಕಡೆ ಭಾರತದ ಮಾವಿಗೆ ಬೇಡಿಕೆ ಇದೆ.

* ಈ ಸಲ ಎಷ್ಟು ಪ್ರಮಾಣದ ಹಣ್ಣು ಮಾರಾಟ ಆಗಬಹುದು?
1500 ಟನ್ ಮಾರಾಟ ಆಗಬಹುದು

Mango and Jackfruit mela starts from May 5th in Lalbagh

* ಹಾಗಿದ್ದರೆ ಎಷ್ಟು ಹಣದ ವ್ಯಾಪಾರ ನಡೆಯಬಹುದು?
ಬೇರೆ ಜಾತಿಯ ಹಣ್ಣುಗಳು ಇರುತ್ತವೆ. ಒಂದೊಂದು ರೀತಿಯ ಬೆಲೆ ಇರುತ್ತದೆ. ಆದ್ದರಿಂದ ಇಷ್ಟು ಹಣ ಅಂತ ಹೇಳೋಕ್ಕಾಗಲ್ಲ

* ನಮ್ಮ ದೇಶದ ಮಾವಿನ ರಫ್ತು ಹೇಗಿದೆ?
ರಫ್ತು ಮಾಡುವುದಕ್ಕೆ ಗ್ಯಾಪ್ ಸರ್ಟಿಫಿಕೇಟ್ ಪಡೆದಿರಬೇಕು. ಕೇಂದ್ರ ಸರಕಾರದ ರಫ್ತು ಮಾಡುವ ರೈತರ ಪಟ್ಟಿಯಲ್ಲಿ ಕರ್ನಾಟಕ 9900 ಮಂದಿ ಇದ್ದಾರೆ.

Mango and Jackfruit mela starts from May 5th in Lalbagh

*ರಫ್ತು ಉತ್ತೇಜನಕ್ಕಾಗಿ ಮಂಡಳಿ ಏನು ಮಾಡಿದೆ?
ಮಾವು ಬೆಳೆಗಾರರನ್ನು ಪ್ರೋತ್ಸಾಹಿಸಲು ಮಂಡಳಿ ಪ್ರೋತ್ಸಾಹ ಧನ ನೀಡುತ್ತಿದೆ. ಚಿಕ್ಕಬಳ್ಳಾಪುರ-ಕೋಲಾರದ ಹಲವು ರೈತರು ಇದರ ಅನುಕೂಲ ಪಡೆದಿದ್ದಾರೆ.

Mango and Jackfruit mela starts from May 5th in Lalbagh

*ಮಾವು ಅಭಿವೃದ್ಧಿ ಮಂಡಳಿ ಬಗ್ಗೆ ಸರಕಾರದ ಧೋರಣೆ ಹೇಗಿದೆ?
ಈ ಬಾರಿ ಬಜೆಟ್ ನಲ್ಲಿ 45 ಕೋಟಿ ಮೀಸಲಿಡಲಾಗಿದೆ. ಇದರ ಜತೆಗೆ ತೋಟಗಾರಿಕೆ ಇಲಾಖೆಯಿಂದಲೂ ಹಣಕಾಸಿನ ನೆರವು ದೊರೆಯುತ್ತದೆ. ಕೇಂದ್ರ ಸರಕಾರದಿಂದಲೂ ಸಹಾಯ ದೊರೆಯುತ್ತದೆ.

English summary
Chief minister Siddaramaiah will inauguate Mango and Jackfruit mela on May 5th in Lalbagh, Bengaluru. How many days, timings, types of mango and jackfruit other details are here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X