ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ಕಿತ್ತಾಟ: ಮೂರನೇ ದಿನಕ್ಕೆ ಕಾಲಿಟ್ಟ ಉಪವಾಸ

By Ashwath
|
Google Oneindia Kannada News

ಬೆಂಗಳೂರು, ಜೂ.16: ನಗರದ ಕಸವನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸುರಿಯುವುದನ್ನು ವಿರೋಧಿಸಿ ಮಂಡೂರು ಗ್ರಾಮಸ್ಥರು ಬೊಮ್ಮನಹಳ್ಳಿ ಗೇಟ್‌‌ ಬಳಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಗ್ರಾಮದ ಎಂಟು ಜನ ಅಮರಣಾಂತ ಉಪವಾಸ ಕೈಗೊಂಡಿದ್ದು ಉಳಿದ ಗ್ರಾಮಸ್ಥರು ಸತ್ಯಾಗ್ರಹಕ್ಕೆ ಬೆಂಬಲ ನೀಡುತ್ತಿದ್ದಾರೆ. ಭಾನುವಾರ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಎಎಪಿ ಕಾರ್ಯ‌ಕರ್ತರು ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದರು.[ಮಂಡೂರು ಕಸ: ಅನಾರೋಗ್ಯಕ್ಕೆ ಮಹಿಳೆ ಬಲಿ]

ಭಾನುವಾರದ ಸಭೆ ವಿಫಲ: ಭಾನುವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಂಜೆ 6.30 ರಿಂದ ರಾತ್ರಿ 8.30ರವರೆಗೆ ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬಿಬಿಎಂಪಿ ಮೇಯರ್ .ಎಸ್.ಸತ್ಯನಾರಾಯಣ, ಆಯುಕ್ತ ಲಕ್ಷ್ಮೀನಾರಾಯಣ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಮಂಡೂರು ಗ್ರಾಮಸ್ಥರೊಂದಿಗೆ ನಡೆಸಿದ ಮಾತುಕತೆ ಮತ್ತೆ ವಿಫಲವಾಗಿದೆ.

ಈ ಸಭೆಯಲ್ಲಿ ಸಚಿವರು ಕಸ ಸುರಿಯಲು ಆರು ತಿಂಗಳ ಕಾಲಾವಕಾಶ ನೀಡುವಂತೆ ಕೋರಿದರು. ಮೂರು ತಿಂಗಳು ಅವಕಾಶ ನೀಡಿದರೆ ಮಾತ್ರ ಕಸ ಸುರಿಯಲು ಅವಕಾಶ ನೀಡಲಾಗುವುದು. ಆ ಬಳಿಕ ಶಾಶ್ವತವಾಗಿ ಘಟಕ ಮುಚ್ಚುವುದಾಗಿ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ಲಿಖಿತ ಭರವಸೆ ನೀಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಮತ್ತೊಂದು ಸಭೆ : ಜೂ.16 ಸೋಮವಾರದಂದು ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಚಿವ ರಾಮಲಿಂಗಾರೆಡ್ಡಿ, ಅಧಿಕಾರಿಗಳ ತಂಡ ಸಭೆ ನಡೆಸಲಿದ್ದಾರೆ.

 ಉಪವಾಸ ನಿರತ ಗ್ರಾಮಸ್ಥರು:

ಉಪವಾಸ ನಿರತ ಗ್ರಾಮಸ್ಥರು:

ಮಂಡೂರಿನ ಎಂಟು ಜನರು ಅಮರಣಾಂತ ಉಪವಾಸ ಕೈಗೊಂಡಿದ್ದು ಉಳಿದ ಗ್ರಾಮಸ್ಥರು ಸತ್ಯಾಗ್ರಹಕ್ಕೆ ಬೆಂಬಲ ನೀಡುತ್ತಿದ್ದಾರೆ.

 ಎಚ್‌.ಎಸ್‌.ದೊರೆಸ್ವಾಮಿ ಬೆಂಬಲ:

ಎಚ್‌.ಎಸ್‌.ದೊರೆಸ್ವಾಮಿ ಬೆಂಬಲ:

ಭಾನುವಾರ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಪಾಲ್ಗೊಂಡು ಪ್ರತಿಭಟನಗೆ ಬೆಂಬಲ ವ್ಯಕ್ತಪಡಿಸಿದರು.

 ಎಎಪಿ ಬೆಂಬಲ:

ಎಎಪಿ ಬೆಂಬಲ:

ಭಾನುವಾರದ ಪ್ರತಿಭಟನೆಯಲ್ಲಿ ಆಮ್‌ ಆದ್ಮಿ ಪಕ್ಷದ ಕಾರ್ಯ‌ಕರ್ತರು ಭಾಗಿಯಾಗಿ ಮಂಡೂರಿನ ಜನತೆಗೆ ಬೆಂಬಲ ನೀಡಿದರು.

 ಮೂರನೇ ದಿನಕ್ಕೆ ಉಪವಾಸ ಸತ್ಯಾಗ್ರಹ

ಮೂರನೇ ದಿನಕ್ಕೆ ಉಪವಾಸ ಸತ್ಯಾಗ್ರಹ

ಬೊಮ್ಮನಹಳ್ಳಿ ಗೇಟ್‌‌ ಬಳಿ ನಡೆಸುತ್ತಿರುವ ಮಂಡೂರು ಗ್ರಾಮಸ್ಥರು ನಡೆಸುತ್ತಿರವ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.

English summary
Continuing their agitation against the dumping of waste in their backyard, Mandur villagers launched an indefinite hunger strike on Sunday. They are firm on Chief Minister Siddaramaiah visiting the village before agreeing to an extension to dump waste at the landfill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X