• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂದಿರ-ಮಸೀದಿ ಕಾದಂಬರಿ ಪ್ರೀ ಬುಕ್ಕಿಂಗ್ ಮಾಡ್ಕೊಳಿ

By Mahesh
|

ಬೆಂಗಳೂರು, ಮಾ.2: 'ಮಂದಿರ-ಮಸೀದಿ', ಪ್ರೇಮ - ಧರ್ಮ - ರಾಜಕೀಯ - ಸಾಹಿತ್ಯ - ಇತಿಹಾಸ ಇವೆಲ್ಲವನ್ನು ಆಧಾರವಾಗಿಟ್ಟುಕೊಂಡು ಯುವ ಬರಹಗಾರ ಸುಪ್ರೀತ್ ಕೆ.ಎನ್ ಬರೆದಿರುವ ಹೊಚ್ಚ ಹೊಸ ಕಾದಂಬರಿ ಮಾ.8ರಂದು ಲೋಕಾರ್ಪಣೆಯಾಗಲಿದೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸುಪ್ರೀತ್ ಕೆಎನ್ ಅವರು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ಕಾಲದಿಂದಲೇ ತಮ್ಮ ಲೇಖನಗಳ ಮೂಲಕ ಗಮನ ಸೆಳೆದವರು. ಸದ್ಯಕ್ಕೆ: ‘ವಿವೇಕ ಹಂಸ' ಪತ್ರಿಕೆಯಲ್ಲಿ ಅಂಕಣ ಬರಹಗಾರ. ಕಾದಂಬರಿ (?), ಟಿ.ಕೆ.ಹಳ್ಳಿ ಅಂಡ್ ಮಳವಳ್ಳಿ ಮತ್ತು ಸ್ವ್ಯಾಪಿಂಗ್ ಇವರ ಕೃತಿಗಳು. ‘ಮಂದಿರ-ಮಸೀದಿ' ಇವರ ನಾಲ್ಕನೆಯ ಕೃತಿ.

ಮೀಡಿಯಾ ಪಬ್ಲಿಕೇಷನ್ ಹೊರ ತಂದಿರುವ ಈ ಕಾದಂಬರಿ ಬಿಡುಗಡೆ ಸಮಾರಂಭದ ವಿವರ:

ದಿನಾಂಕ: 8 ಮಾರ್ಚ್ 2015

ಸಮಯ: 5.30ಕ್ಕೆ

ಸ್ಥಳ: ಕೆಎಚ್ ಕಲಾಸೌಧ, ಹನುಮಂತ ನಗರ, ಬೆಂಗಳೂರು.

ಮುಖ್ಯ ಅತಿಥಿಗಳು:

* ಬಿ. ಸುರೇಶ್, ನಟ, ನಿರ್ದೇಶಕ

* ಟೈಗರ್ ಅಶೋಕ್ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ

* ಅನ್ವರ್ ಮಾನಿಪಾಡಿ, ಲೇಖಕರು

* ಅಜಿತ್ ಹನಮಕ್ಕನವರ್, ನ್ಯೂಸ್ ಎಡಿಟರ್ (ಕರೆಂಟ್ ಅಫೇರ್ಸ್).

ವಿಶೇಷ ಆಹ್ವಾನಿತರು:

ನವೀನ್ ಕೃಷ್ಣ, ನವೀನ್ ಸಾಗರ್, ನೀತೂ, ಸುಕೃತ ವಾಗ್ಲೆ, ಕೊಳಿಗೆ ಚಂದ್ರು, ಜಯಲಕ್ಷ್ಮೀ ಪಾಟೀಲ್, ಅಂಜಲಿ ರಾಮಣ್ಣ, ಸುಂದರಶ್ರೀ.

ಗಾಯನ: ವೈಷ್ಣವ ರಾವ್ ಮತ್ತು ಸಂಗಡಿಗರು.

ನಿರೂಪಣೆ: ಕುಮುದವಲ್ಲಿ ಅರುಣ್ ಮೂರ್ತಿ.

ಪ್ರೀ ಬುಕ್ಕಿಂಗ್: ಪುಸ್ತಕ ಬಿಡುಗಡೆಗೂ ಮುನ್ನ ಆಸಕ್ತರು ಮುಂಗಡವಾಗಿ ಪುಸ್ತಕವನ್ನು ಕಾಯ್ದಿರಿಸಿಕೊಳ್ಳಬಹುದು. ಎಸ್ ಎಲ್ ಭೈರಪ್ಪ ಅವರ ಯಾನ, ಕರಣಂ ಪವನ್ ಪ್ರಸಾದ್ ಚೊಚ್ಚಲ ಕೃತಿ ಕರ್ಮ ಪುಸ್ತಕಗಳನ್ನು ಪ್ರೀ ಬುಕ್ಕಿಂಗ್ ಮೂಲಕ ಕನ್ನಡ ಓದುಗರಿಗೆ ಪರಿಚಯಿಸಿದ ಸುನೀಲ್ ಎಸ್. ಪಾಟೀಲ್ ಹಾಗೂ ಸಚಿನ್ ಕುಡ್ತುರಕರ್ ಅವರು ತಮ್ಮ ಅಫೋರ್ಡಬಲ್ (a4dable.in) ವೆಬ್ ತಾಣದ ಮೂಲಕ ಸುಪ್ರೀತ್ ಅವರ ಮಂದೀರ ಮಸೀದಿ ಕಾದಂಬರಿಯನ್ನು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು. [ಮಂದಿರ ಮಸೀದಿ ಕನ್ನಡ ಕಾದಂಬರಿ ಎಲ್ಲೆಲ್ಲಿ ಸಿಗುತ್ತದೆ?]

ಇಂಗ್ಲೀಷ್ ಹಳೆ, ಹೊಸ ಪುಸ್ತಕ ಖರೀದಿ ಸಾಕಷ್ಟು ವೆಬ್ ತಾಣಗಳಿವೆ. ಕನ್ನಡದಲ್ಲೂ ಟೋಟಲ್ ಕನ್ನಡ, ಸಪ್ನ, ಅಕೃತಿ ಬುಕ್ ಹೌಸ್, ಕನ್ನಡ ಸ್ಟೋರ್, ಬುಕ್ಸ್ ಫಾರ್ ಯೂ ಅಲ್ಲದೆ ಫ್ಲಿಪ್ ಕಾರ್ಟ್ ಮುಂತಾದ ಆನ್ ಲೈನ್ ಶಾಪಿಂಗ್ ವೆಬ್ ತಾಣಗಳು ಕನ್ನಡ ಪುಸ್ತಕಗಳನ್ನು ಆನ್ ಲೈನ್ ಮೂಲಕ ಖರೀದಿಸುವ ಸೌಲಭ್ಯ ಒದಗಿಸಿವೆ. ಇವೆಲ್ಲದರ ನಡುವೆ ಅಫೊರ್ಡಬಲ್ ಹೇಗೆ ಭಿನ್ನ? [ಈ ವೆಬ್ ತಾಣದ ಬಗ್ಗೆ ಇಲ್ಲಿ ಓದಿ]

ಮಂದಿರ ಮಸೀದಿ ಕಾದಂಬರಿಯಲ್ಲಿ ಏನಿದೆ?: ಕಾದಂಬರಿಯ ನಾಯಕ ಅಂಕಿತ್ ಭಾರದ್ವಾಜ್, ಬಲ-ಎಡ ಪಂಥಿಯ ರಾಜಕೀಯಗಳಿಂದ ಬೇಸತ್ತು, ಯಾವ ಪಂಥಕ್ಕೂ ಸೇರದೆ, ಯಾರನ್ನು ಓಲೈಸಲು ಪ್ರಯತ್ನಿಸದೆ, ಸತ್ಯವನ್ನು ಶೋಧೀಸುವ ಒಂದು ಕಾದಂಬರಿ ಬರೆಯಬೇಕೆಂದು ನಿರ್ಧರಿಸುತ್ತಾನೆ.

ತನ್ನ ಕಾದಂಬರಿಗೆ ‘ಮಂದಿ-ಮಸೀದಿ' ಎಂದು ಹೆಸರಿಡುತ್ತಾನೆ. ಹಾಗೆ ಕಾದಂಬರಿ ಬರೆಯುವಾಗ, ತನಗೆ ಪರಿಚಯವಿರುವ ಮುಸ್ಲಿಂ ಹುಡುಗಿ, ಅಮ್ರೀನ್ ಸಬಳಿಂದ ಸಹಾಯ ಪಡೆಯುತ್ತಾನೆ. ನಂತರ ಅವಳ ಮೇಲೆ ಇವನಿಗೆ ಪ್ರೇಮವಾಗುತ್ತದೆ. ಕೆಲವು ದಿನಗಳು ಕಳೆದ ಬಳಿಕ ಪ್ರೇಮ ಪ್ರಸ್ತಾಪವನ್ನು ಮಾಡುತ್ತಾನೆ. ಆದರೆ, ಮೊದಲು ಆಕೆ ಒಪ್ಪುವುದಿಲ್ಲ. ಏಕೆಂದರೆ ಅವಳಿಗೆ ಆಗಲೇ ಮದುವೆ ಗೊತ್ತಾಗಿರುತ್ತದೆ. ಆದರೆ ಕೆಲವು ದಿನಗಳ ನಂತರ ಅವಳು ಅಂಕಿತ್‍ನ ಪ್ರೇಮವನ್ನು ಒಪ್ಪುತ್ತಾಳೆ.

ಅವರಿಬ್ಬರು ಮದುವೆಯಾಗಲು ನಿರ್ಧರಿಸುತ್ತಾರೆ. ಆದರೆ ಮನೆಯಲ್ಲಿ ಒಪ್ಪುವುದಿಲ್ಲ. ಇಬ್ಬರು ಮನೆ ಬಿಟ್ಟು ಹೋಗುತ್ತಾರೆ. ಆಗ ಹೆಸರಾಂತ ಸಾಹಿತಿಗಳಿಬ್ಬರು, ಅವರ ಪ್ರೇಮವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ... ‘ಮಂದಿರ-ಮಸೀದಿ' ಯ ಕಥೆ ಹೀಗೆ ಸಾಗುತ್ತದೆ. ಕಥೆಯ ಜೊತೆ ಜೊತೆಗೆ, ಇತಿಹಾಸ, ಧಾರ್ಮಿಕ ಸಂರ್ಘಷಗಳು ಆಯಾ ಸನ್ನಿವಾಶಕ್ಕೆ ತಕ್ಕಂತೆ ಬರುತ್ತಾ ಹೋಗುತ್ತದೆ.

ಒಟ್ಟಾರೆ ಇಡಿ ‘ಮಂದಿರ-ಮಸೀದಿ' ಕಾದಂಬರಿಯು, ಧರ್ಮ ಮತ್ತು ಸಾಹಿತ್ಯದ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯಕ್ಕೆ ಕನ್ನಡಿ ಹಿಡಿದಂತಿದೆ.

English summary
Mandira-Maseedi' is a contemporary Kananda novel by Supreeth KN releasing on March 8, 2015. The novel deals with Religious and Literary issues. The event will be held at KH Kala Soudha, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X