• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂದಿರ ಮಸೀದಿ ಕನ್ನಡ ಕಾದಂಬರಿ ಎಲ್ಲೆಲ್ಲಿ ಸಿಗುತ್ತದೆ?

By Mahesh
|

ಬೆಂಗಳೂರು, ಮಾ.11: ರಾಷ್ಟ್ರಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ ಸೋರುತಿಹುದು ಮನೆಯ ಮಾಳಿಗೆ ಎಂಬ ಸುಂದರ ಗೀತೆಯೊಂದಿಗೆ ಅಂತ್ಯಗೊಂಡಿತು. ನಡುನಡುವೆ ವೈಷ್ಣವ್ ರಾವ್ ಮತ್ತು ಸ್ಪರ್ಶ ತಂಡದಿಂದ ಮೂಡಿಬಂದ ಸಂಗೀತ ಕೇಳುಗರನ್ನು ಹಿಡಿದು ಕೂರಿಸುವಲ್ಲಿ ಯಶಸ್ವಿಯಾಯಿತು. ಸುಪ್ರೀತ್ ಕೆಎನ್ ಅವರ ಮಂದಿರ ಮಸೀದಿ ಬಿಡುಗಡೆ ಸಮಾರಂಭ ಹೇಗಿತ್ತು? ಈ ಕಾದಂಬರಿ ಎಲ್ಲೆಲ್ಲಿ ಸಿಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ...

ಒಂದೆಡೆ ಭಗವದ್ಗೀತೆಯನ್ನು ಸುಡಬೇಕು ಎನ್ನುವ ಬಣ, ಮತ್ತೊಂದೆಡೆ ಮುಸ್ಲಿಮರನ್ನೂ ವಿರೋಧಿಸುವ ಬಣ ಈ ಎರಡೂ ಬಣಗಳು ಕೂಡ ದೇಶಕ್ಕೆ ತುಂಬಾ ಅಪಾಯಕಾರಿ ಎಂದು ನಿರ್ದೇಶಕ ಮತ್ತು ನಟ ಬಿ. ಸುರೇಶ್ ಅಭಿಪ್ರಾಯಪಟ್ಟರು.

ಸುಪ್ರೀತ್ ಕೆ.ಎನ್, ಅಂತಿಮ ವರ್ಷದ ಎಂ.ಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಬರೆದಿರುವ "ಮಂದಿರ -ಮಸೀದಿ" ಕಾದಂಬರಿ ಚಿತ್ರ ನಟ, ನಟಿ, ಲೇಖಕರು ಮುಂತಾದವರ ಸಮ್ಮುಖದಲ್ಲಿ ಲೋಕಾರ್ಪಣೆಯಾಯಿತು. ಕೆ.ಎಚ್ ಕಲಾಸೌಧ ವೇದಿಕೆ ಇದಕ್ಕೆ ಸಾಕ್ಷಿಯಾಗಿತ್ತು.

ಈ ಕಾದಂಬರಿಯಲ್ಲಿ ಗಮನಿಸಬೇಕಾದ ಅಂಶವೆಂದರೆ ಎಸ್ ಎಲ್ ಭೈರಪ್ಪ ಆದಿಯಾಗಿ, ಅನಂತಮೂರ್ತಿ ಮತ್ತು ಪ್ರಮೋದ್ ಮುತಾಲಿಕ್ ಎಲ್ಲರೂ ಕಾಣಿಸಿಕೊಳ್ಳುತ್ತಾರೆ.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲೇಖಕ, ಅನ್ವರ್ ಮಾನಿಪಾಡ್ಡಿ ಮಾತನಾಡಿ ಈಗಿನ ಯುವಕರು ನಮ್ಮ ದೇಶದ ಸಂಸ್ಕೃತಿ, ವಿಚಾರಧಾರೆಗಳನ್ನು ಅಳವಡಿಸಿಕೊಂಡು ಬದುಕಿನಲ್ಲಿ ಹೇಗೆ ಸಾಗಬೇಕೆಂಬ ಅಂಶ ಈ ಕಾದಂಬರಿಯಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯರಿಂದ, ಗುರುಗಳಿಂದ ಸಲಹೆ ಸೂಚನೆಗಳನ್ನೂ ಪಡೆದು ಸಂಶೋಧನೆ ಮಾಡಿ ಅನೇಕ ವಿಚಾರಗಳನ್ನೂ ತಿಳಿದು ಸುಪ್ರೀತ್ ತನ್ನದೇ ಶೈಲಿಯಲ್ಲಿ ಕಾದಂಬರಿಯನ್ನು ಹೊರತಂದಿದ್ದಾರೆ ಎಂದು ಎಲ್ಲರೂ ಅಭಿಪ್ರಾಯ ಪಟ್ಟರು.

ಈ ಸಮಯದಲ್ಲಿ ನಟ ನವೀನ್ ಕೃಷ್ಣ, ನಟಿಯರಾದ ನೀತು, ಸುಕೃತ ವಾಗ್ಲೆ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

‪#‎Mandira_maseedi‬ ಕಾದಂಬರಿ, ಕೆಳಗೆ ಹೆಸರಿಸಿರುವ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ.

•ಅಂಕಿತ ಬುಕ್ ಹೌಸ್, ಗಾಂಧಿಬಜಾರ್

•ಬೆಳಗೆರೆ ಬುಕ್ ಹೌಸ್, ಗಾಂಧಿಬಜಾರ್

•ಓಂಕಾರ್ ಬುಕ್ ಹೌಸ್, ಶ್ರೀನಗರ

•ಅರವಿಂದ ಬುಕ್ ಹೌಸ್, ವಿಜಯನಗರ

ಇದಲ್ಲದೆ, ಅಫೋರ್ಡಬಲ್ (a4dable.in) ವೆಬ್ ತಾಣದ ಮೂಲಕ ಸುಪ್ರೀತ್ ಅವರ ಮಂದೀರ ಮಸೀದಿ ಕಾದಂಬರಿಯನ್ನು ಖರೀದಿಸಬಹುದು.

ಮಂದಿರ ಮಸೀದಿ ಕಾದಂಬರಿಯಲ್ಲಿ ಏನಿದೆ?: ಕಾದಂಬರಿಯ ನಾಯಕ ಅಂಕಿತ್ ಭಾರದ್ವಾಜ್, ಬಲ-ಎಡ ಪಂಥಿಯ ರಾಜಕೀಯಗಳಿಂದ ಬೇಸತ್ತು, ಯಾವ ಪಂಥಕ್ಕೂ ಸೇರದೆ, ಯಾರನ್ನು ಓಲೈಸಲು ಪ್ರಯತ್ನಿಸದೆ, ಸತ್ಯವನ್ನು ಶೋಧೀಸುವ ಒಂದು ಕಾದಂಬರಿ ಬರೆಯಬೇಕೆಂದು ನಿರ್ಧರಿಸುತ್ತಾನೆ.

ತನ್ನ ಕಾದಂಬರಿಗೆ ‘ಮಂದಿ-ಮಸೀದಿ' ಎಂದು ಹೆಸರಿಡುತ್ತಾನೆ. ಹಾಗೆ ಕಾದಂಬರಿ ಬರೆಯುವಾಗ, ತನಗೆ ಪರಿಚಯವಿರುವ ಮುಸ್ಲಿಂ ಹುಡುಗಿ, ಅಮ್ರೀನ್ ಸಬಳಿಂದ ಸಹಾಯ ಪಡೆಯುತ್ತಾನೆ. ನಂತರ ಅವಳ ಮೇಲೆ ಇವನಿಗೆ ಪ್ರೇಮವಾಗುತ್ತದೆ. ಕೆಲವು ದಿನಗಳು ಕಳೆದ ಬಳಿಕ ಪ್ರೇಮ ಪ್ರಸ್ತಾಪವನ್ನು ಮಾಡುತ್ತಾನೆ. ಆದರೆ, ಮೊದಲು ಆಕೆ ಒಪ್ಪುವುದಿಲ್ಲ.

ಏಕೆಂದರೆ ಅವಳಿಗೆ ಆಗಲೇ ಮದುವೆ ಗೊತ್ತಾಗಿರುತ್ತದೆ. ಆದರೆ ಕೆಲವು ದಿನಗಳ ನಂತರ ಅವಳು ಅಂಕಿತ್‍ನ ಪ್ರೇಮವನ್ನು ಒಪ್ಪುತ್ತಾಳೆ. ಅವರಿಬ್ಬರು ಮದುವೆಯಾಗಲು ನಿರ್ಧರಿಸುತ್ತಾರೆ. ಆದರೆ ಮನೆಯಲ್ಲಿ ಒಪ್ಪುವುದಿಲ್ಲ. ಇಬ್ಬರು ಮನೆ ಬಿಟ್ಟು ಹೋಗುತ್ತಾರೆ. ಆಗ ಹೆಸರಾಂತ ಸಾಹಿತಿಗಳಿಬ್ಬರು, ಅವರ ಪ್ರೇಮವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ...

‘ಮಂದಿರ-ಮಸೀದಿ' ಯ ಕಥೆ ಹೀಗೆ ಸಾಗುತ್ತದೆ. ಕಥೆಯ ಜೊತೆ ಜೊತೆಗೆ, ಇತಿಹಾಸ, ಧಾರ್ಮಿಕ ಸಂರ್ಘಷಗಳು ಆಯಾ ಸನ್ನಿವಾಶಕ್ಕೆ ತಕ್ಕಂತೆ ಬರುತ್ತಾ ಹೋಗುತ್ತದೆ. ಒಟ್ಟಾರೆ ಇಡಿ ‘ಮಂದಿರ-ಮಸೀದಿ' ಕಾದಂಬರಿಯು, ಧರ್ಮ ಮತ್ತು ಸಾಹಿತ್ಯದ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯಕ್ಕೆ ಕನ್ನಡಿ ಹಿಡಿದಂತಿದೆ.

ಒನ್ ಇಂಡಿಯಾ ಸುದ್ದಿ

English summary
'Mandira-Maseedi' is a contemporary Kananda novel by Supreeth KN released on March 8, 2015. The novel deals with Religious and Literary issues. The book is available in Ankita, Aakriti,Belagere Book Cofee and other leading book stores in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X