ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಿನ ಮನೆಯನ್ನೇ ಹುಡುಕಿ ಕೈಚಳಕ ತೋರಿಸುತ್ತಿದ್ದ ಕಳ್ಳ ಅರೆಸ್ಟ್‌

|
Google Oneindia Kannada News

ಬೆಂಗಳೂರು, ಏ.17: ಸಾವು ಸಂಭವಿಸಿದ ಮನೆಯನ್ನೇ ಹುಡುಕಿಕೊಂಡು ಹೋಗಿ ಕೈ ಚಳಕ ತೋರುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಸಾವಿನ ಮನೆಯಲ್ಲಿ ಸಾವಿರ ಚಿಂತೆ ಎನ್ನುವಂತೆ ಕೇವಲ ಸತ್ತವರ ಅಂತ್ಯ ಸಂಸ್ಕಾರ ಇನ್ನಿತರೆ ವಿಧಿ ವಿಧಾನಗಳಲ್ಲಿ ಮಗ್ನರಾಗಿರುವಾಗ ಕಳ್ಳ ತನ್ನ ಕೈಚಳಕ ತೋರುತ್ತಿದ್ದ.

ಮಹಿಳೆಯಿಂದ ಒಡವೆ ದೋಚಿ, ಸುಳ್ಳು ಆರೋಪವನ್ನೂ ಹೊರಿಸಿದ ನಕಲಿ ಪೊಲೀಸರು ಮಹಿಳೆಯಿಂದ ಒಡವೆ ದೋಚಿ, ಸುಳ್ಳು ಆರೋಪವನ್ನೂ ಹೊರಿಸಿದ ನಕಲಿ ಪೊಲೀಸರು

ಇತ್ತೀಚೆಗೆ ಮಾರಗೊಂಡನಹಳ್ಳಿಯಲ್ಲಿ ನಾಗಭೂಷಣ ರೆಡ್ಡಿ ಎಂಬುವವರ ಮನೆಯಲ್ಲಿ ಅವರ ಅಜ್ಜಿಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ಸಂದರ್ಭದಲ್ಲಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು.

Man who looted households in mourning nabbed

ಕಳ್ಳ ಮುನಿರಾಜ್ ನಿಂದ 26 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ. ನಾಗಭೂಷಣ ಮನೆಯ ಸುತ್ತಮುತ್ತಲಿರುವ ಸಿಸಿಟಿವಿ ಯನ್ನು ಪರಿಶೀಲಿಸಿದಾಗ ಕಳ್ಳನ ಸುಳಿವು ಸಿಕ್ಕಿದೆ. ರಾಮಚಂದ್ರಪುರದಲ್ಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಜೊತೆಗೆ ಕಳ್ಳತನಕ್ಕೆ ಬಳಸುತ್ತಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು 850 ಗ್ರಾಂ ಚಿನ್ನವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
A thief who specialised in stealing valuables from households mourning their near and dear ones has landed in police custody. Officials have recovered booty worth Rs 26 lakh from him. Muniraju C, 45, from Ramachandrapura near Sriramapura, worked as a supplier in a hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X