ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಎಂಐ ಪಡೆಯಲು ಹೋದ ಬ್ಯಾಂಕ್ ಏಜೆಂಟ್ ಹನಿಟ್ರ್ಯಾಪ್‌ನಲ್ಲಿ ಸಿಲುಕಿದ್ದು ಹೇಗೆ?

|
Google Oneindia Kannada News

ಬೆಂಗಳೂರು, ಮಾರ್ಚ್ 7: ಬ್ಯಾಂಕ್ ಇಎಂಐ ಪಡೆಯಲು ಬಂದ ಬ್ಯಾಂಕ್ ಏಜೆಂಟ್ ಹನಿಟ್ರ್ಯಾಪ್ ನಲ್ಲಿ ಸಿಕ್ಕಿಬಿದ್ದಿರುವ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉದ್ಯಮಿಗಳನ್ನು ಮಂಚಕ್ಕೆ ಕರೆದು ಹನಿಟ್ರ್ಯಾಪ್ ಮಾಡುತ್ತಿದ್ದ ಯುವತಿ ಬಲೆಗೆ ಉದ್ಯಮಿಗಳನ್ನು ಮಂಚಕ್ಕೆ ಕರೆದು ಹನಿಟ್ರ್ಯಾಪ್ ಮಾಡುತ್ತಿದ್ದ ಯುವತಿ ಬಲೆಗೆ

ನಾಲ್ವರು ಮಹಿಳೆಯರು ಸೇರಿ ಒಟ್ಟು 7 ಜನರ ತಂಡವು ಇಎಂಐ ನೀಡುವಂತೆ ಬ್ಯಾಂಕ್ ಏಜೆಂಟ್‌ಗಳಿಗೆ ಕರೆ ಮಾಡಿ ಅವರು ಹಣವನ್ನು ಪಡೆಯಲು ಬಂದಾಗ ಅವರನ್ನು ಲಾಕ್ ಮಾಡಿ ಅವರ ಬೇರೆ ಬೇರೆ ಭಂಗಿಯ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುವುದಾಗಿ ನಂಬಿಸಿ ಹಣವನ್ನು ಲೂಟಿ ಮಾಡುತ್ತಿದ್ದ ಗ್ಯಾಂಗ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುರುಷರನ್ನು ಮಂಚಕ್ಕೆ ಕರೆದು ಹನಿಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ಜೋಡಿ ಬಲೆಗೆ ಪುರುಷರನ್ನು ಮಂಚಕ್ಕೆ ಕರೆದು ಹನಿಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ಜೋಡಿ ಬಲೆಗೆ

ಒಬ್ಬ ಮಹಿಳೆ ಬ್ಯಾಂಕ್ ಏಜೆಂಟ್‌ಗೆ ಕರೆ ಮಾಡಿ ಬ್ಯಾಂಕ್ ಲೋನ್ ಕಟ್ಟಬೇಕು ಹಣ ನೀಡುತ್ತೇನೆ ಬನ್ನಿ ಎಂದು ಕರೆದು ಆತ ಬಂದ ಬಳಿಕ ಹಣ ಮನೆಯಲ್ಲಿಯೇ ಮರೆತು ಬಿಟ್ಟು ಬಂದೆ ಮನೆವರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಮನೆಗೆ ಹೋದ ಬಳಿಕ ಅವರನ್ನು ಕೂಡಿಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

Man walks into EMI honey trap

ಒಂದೊಮ್ಮೆ ಹಣ ನೀಡಲು ಆಗದಿದ್ದರೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂದು ಹೇಳಿ ಫೋಟೊವನ್ನು ಟಿವಿಯಲ್ಲಿ ಪ್ರಸಾರ್ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದರು. ಬಳಿಕ ಆತನ ಬಳಿ ಇದ್ದ 4 ಸಾವಿರ ನಗದು, ಮೊಬೈಲ್ ಫೋನ್ ತೆಗೆದುಕೊಂಡು ನಾಗರಬಾವಿ ಪಾರ್ಕ್ ಬಳಿ ಬಿಟ್ಟು ಹೋಗಿದ್ದರು.

ಒಂದು ಲಕ್ಷದ ಚೆಕ್ ಪಡೆದು ಒಂದೊಮ್ಮೆ ಒಂದು ದಿನದಲ್ಲಿ ಹಣವನ್ನು ಹೊಂದಿಸದಿದ್ದರೆ ಚೆಕ್ ಬೌನ್ಸ್ ಕೇಸ್ ಹಾಕುವುದಾಗಿ ಬೆದರಿಸಿದ್ದರು. ಆ ಗ್ಯಾಂಗ್‌ನಲ್ಲಿದ್ದ ಕೆಲವು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

English summary
A gang of seven unidentified people including four women have been accused of exorting money from bank loan recovery agent in a suspected honey trap case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X